ಸೀತಾರಾಮ ಸಿರಿಯಲ್‌ ರಾತ್ರಿ ಶೂಟಿಂಗ್‌ ಮಾಡುವಾಗ ಏನೆಲ್ಲಾ ಆಯ್ತು? ನಟಿ ಮೇಘನಾ ರಿವೀಲ್‌

By Suchethana D  |  First Published Dec 7, 2024, 11:22 AM IST

ಸೀತಾರಾಮ ಸಿರಿಯಲ್‌ ರಾತ್ರಿ ಶೂಟಿಂಗ್‌ನಲ್ಲಿ ನಡೆದ ಘಟನೆ ಏನು? ನಟಿ ಮೇಘನಾ ಶಂಕರಪ್ಪ ಅವರು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಇದರ ವಿಡಿಯೋ ಶೇರ್‍‌ ಮಾಡಿದ್ದಾರೆ. 
 


ಸೀತಾರಾಮ ಸೀರಿಯಲ್‌ ಮತ್ತು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ ಮೆಗಾ ಸಂಗಮ ಕೆಲ ದಿನಗಳ ಹಿಂದೆ ಪ್ರಸಾರ ಆಗಿತ್ತು. ಈ ಸೀರಿಯಲ್‌ಗಳನ್ನು ಒಟ್ಟಿಗೇ ಶೂಟಿಂಗ್‌ ಮಾಡಲಾಗಿತ್ತು. ಅಂದು ರಾತ್ರಿಪೂರ್ತಿ ಶೂಟಿಂಗ್‌ ಮಾಡಲಾಗಿತ್ತು. ಅಂದು ಎರಡೂ ಸೀರಿಯಲ್‌ಗಳ ನಟ-ನಟಿಯರು ಹೇಗೆಲ್ಲಾ ಕೆಲಸ ಮಾಡಿದ್ರು? ರಾತ್ರಿ ಶೂಟಿಂಗ್‌ ಸಮಯದಲ್ಲಿ ಏನೆಲ್ಲಾ ಆಯ್ತು ಎನ್ನುವ ಬಗ್ಗೆ ಸೀತಾರಾಮ ಪ್ರಿಯಾ ಅಂದ್ರೆ ಮೇಘನಾ ಶಂಕರಪ್ಪ ಅವರು ಯುಟ್ಯೂಬ್‌ನಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಸಕತ್‌ ಆಕ್ಟೀವ್‌ ಆಗಿರುವ ನಟಿ ಮೇಘನಾ ಅವರು ನಿನ್ನೆಯಷ್ಟೇ ತಮ್ಮ ಭಾವಿ ಪತಿಯ ಪರಿಚಯ ಮಾಡಿಸುವ ವಿಡಿಯೋ ಶೇರ್‍‌ ಮಾಡಿದ್ದರು. ಇದೀಗ ಅವರು ಸೀತಾರಾಮ ಸೀರಿಯಲ್ ಶೂಟಿಂಗ್‌ ಮಾಹಿತಿಯನ್ನು ನೀಡಿದ್ದಾರೆ.

ಈ ವಿಡಿಯೋದಲ್ಲಿ ಸೀತಾರಾಮ ಮತ್ತು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ ನಟ-ನಟಿಯರನ್ನು ನೋಡಬಹುದಾಗಿದೆ. ಅಷ್ಟಕ್ಕೂ ಮೇಘನಾ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದರ ಹೊರತಾಗಿಯೂ ಶೂಟಿಂಗ್‌ಗೆ ಬಂದಿದ್ದಾರೆ. ಈ ಮೊದಲು ಕಣ್ಣಿನ ಮೇಲೆ ಗಾಯವಾಗಿ ಕೆಲವು ದಿನಗಳವರೆಗೆ ಶೂಟಿಂಗ್ ಗೆ ಬಂದಿರಲಿಲ್ಲ. ಈಗ ಅನಾರೋಗ್ಯ ಇದ್ದರೂ ತಾವು ಶೂಟಿಂಗ್‌ಗೆ ಬಂದಿರುವ ಬಗ್ಗೆ ಅಲ್ಲಿರುವವರಿಂದ ತಾವೇ ಖುದ್ದು ಶಹಭಾಸ್‌ಗಿರಿ ಪಡೆದುಕೊಂಡಿದ್ದಾರೆ ಮೇಘನಾ. ಕಂಠೀರವ ಸ್ಟುಡಿಯೋದಲ್ಲಿ ಈ ಶೂಟಿಂಗ್‌ ಮಾಡಲಾಗಿತ್ತು. ಇದೇ ವೇಳೆ ಡಾನ್ಸ್‌ ಕರ್ನಾಟಕ ಡಾನ್ಸ್‌ನಲ್ಲಿ ಅಶೋಕ್‌ ಜೊತೆ ಡಾನ್ಸ್‌ ಇರುವ ಕಾರಣ ಅದನ್ನೂ ಇಲ್ಲಿಯೇ ಪ್ರಾಕ್ಟೀಸ್‌ ಮಾಡಿರುವುದನ್ನು ತೋರಿಸಿದ್ದಾರೆ.

Tap to resize

Latest Videos

ಕೊನೆಗೂ ಭಾವಿ ಪತಿಯ ಪರಿಚಯಿಸಿದ ಸೀತಾರಾಮ ಪ್ರಿಯಾ: ವಿಶೇಷ ವಿಡಿಯೋ ಶೇರ್ ಮಾಡಿದ ನಟಿ

ಇದೇ ಸಮಯದಲ್ಲಿ ಒಂದಿಷ್ಟು ತಮಾಷೆ, ಹರಟೆ, ಸ್ನೇಹಿತೆ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರ ಜೊತೆ ಹಾಗೂ ವಿಲನ್‌ ಭಾರ್ಗವಿ ಸೇರಿದಂತೆ ಇತರ ನಟ-ನಟಿಯರ ಜೊತೆ ಮಾತುಕತೆ ನಡೆಸುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.  ಮೇಘನಾ ಅವರು ಎಂದಿನಂತೆ ತಮ್ಮ ಹಾಸ್ಯಧಾಟಿಯಲ್ಲಿ ಕೆಲವೊಂದು ಮಾತುಕತೆಯನ್ನೂ ನಡೆಸಿದ್ದಾರೆ. ಇನ್ನು ಮೇಘನಾ ಶಂಕರಪ್ಪ ಅವರ  ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.  

ಕೆಲ ತಿಂಗಳ ಹಿಂದಷ್ಟೇ ಹೊಸ ಮನೆಯಲ್ಲಿ ಖರೀದಿಸಿದ್ದ ಮೇಘನಾ ಅವರು, ಗೃಹ ಪ್ರವೇಶದ ವಿಡಿಯೋವನ್ನು ನಟಿ ಮೇಘಾನಾ ಶಂಕರಪ್ಪ ತಮ್ಮ ಯ್ಯೂಟೂಬ್ ಚಾನೆಲ್​ನಲ್ಲಿ ಶೇರ್ ಮಾಡಿಕೊಂಡಿದ್ದರು.  ಈಗಲೂ ನಟಿಗೆ ಸಿಕ್ಕಾಪಟ್ಟೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಸೀತಾರಾಮ ಸೀರಿಯಲ್‌ನಲ್ಲಿ ಸದ್ಯ ಪ್ರಿಯಾಗೆ ಬ್ರೆಸ್ಟ್‌ ಕ್ಯಾನ್ಸರ್‍‌ ಇರುವಂತೆ ತೋರಿಸಲಾಗಿದೆ. ಆದರೆ ಈ ಕಥೆಯನ್ನು ಅಲ್ಲಿಗೇ ಬಿಟ್ಟು ಸಿಹಿಯ ಸಾವಿನ ಕಡೆ ಕಥೆ ಹೊರಳಿದೆ. ಇನ್ನು ಮೇಘನಾ ಅವರ ಭಾವಿ ಪತಿ ಏನು ಮಾಡುತ್ತಾರೆ, ಮದುವೆಯಾವಾಗ ಎನ್ನುವ ಡಿಟೇಲ್ಸ್‌ ಇನ್ನಷ್ಟೇ ಗೊತ್ತಾಗಬೇಕಿದೆ. 

ಈ ಸಂದರ್ಶನ ಹೆಂಡ್ತಿಗೆ ತೋರಿಸ್ಬೇಡಿ ಅಂತಲೇ ಐವರು ಪ್ರೇಯಸಿಯರ ಹೆಸ್ರು ಥಟ್‌ ಅಂತ ಹೇಳಿದ ನಾ. ಸೋಮೇಶ್ವರ್!

click me!