ನಮ್ದು ನ್ಯಾಚುಲರ್​ ಬ್ಯೂಟಿರೀ... ಅಂದ್ರೆ, ನೀವೂ ಸ್ವಲ್ಪ ಮುಖಕ್ಕೆ ಹಚ್ರಲಾ.. ಚೆಂದ್ ಕಾಣ್ತೀರಿ ಅನ್ನೋದಾ?

Published : Jul 10, 2024, 02:32 PM IST
ನಮ್ದು ನ್ಯಾಚುಲರ್​ ಬ್ಯೂಟಿರೀ... ಅಂದ್ರೆ, ನೀವೂ ಸ್ವಲ್ಪ ಮುಖಕ್ಕೆ ಹಚ್ರಲಾ.. ಚೆಂದ್ ಕಾಣ್ತೀರಿ ಅನ್ನೋದಾ?

ಸಾರಾಂಶ

ಸೀತಾರಾಮ ಕಲ್ಯಾಣ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ ತಂಡದ ರೀಲ್ಸ್​ ಸಕತ್​ ವೈರಲ್​ ಆಗುತ್ತಿದೆ. ಏನಿದೆ ಇದರಲ್ಲಿ?   

ಸೀತಾರಾಮ ಕಲ್ಯಾಣ ಭರ್ಜರಿಯಾಗಿ ನಡೆದಿದೆ. ಕೊನೆಯ ಹಂತದವರೆಗೂ ಕುತೂಹಲ ಕೆರಳಿಸಿದ್ದ ಈ ಮದ್ವೆ ನಿರ್ವಿಘ್ನವಾಗಿ ನೆರವೇರಿದೆ. ತಾತ ಬಂದು ವರ್ಷದಲ್ಲಿ ಮತ್ತೊಂದು ಮಗುವನ್ನು ಹೆತ್ತುಕೊಡಬೇಕು ಎಂದುಹೇಳಿದ್ದರಿಂದ ಚಿಂತಿತಳಾಗಿದ್ದ ಸೀತಾ ಮದುವೆಯೇ ಬೇಡ ಎಂದು ಹೊರನಡೆಯಲು ಹವಣಿಸಿದ್ದಳು. ಆದರೆ ರಾಮ ಎಲ್ಲವನ್ನೂ ಸರಿದೂಗಿಸಿದ್ದಾನೆ. ಹೀಗೆ ಹಲವು ಅಡೆತಡೆಗಳನ್ನು ಮೀರಿ ಮದುವೆ ನಡೆದಿದೆ.  ಇವರಿಬ್ಬರ ಮದುವೆಗೆ ಯಾವ ಆತಂಕಗಳೂ ಬರದಿರಲಪ್ಪ ಎಂದುಕೊಂಡವರು ಸದ್ಯ ನಿರುಮ್ಮಳಾಗಿದ್ದಾರೆ.  ಮದುವೆ ಮುಗಿಯುವವರೆಗೆ ಏನೋ ಆತಂಕವಿತ್ತು. ಕೊನೆಯಲ್ಲಿ ಸೀತಾಳ ಹೈಡ್ರಾಮಾ ಕೂಡ ಅಭಿಮಾನಿಗಳನ್ನು ಚಿಂತೆಗೆ ಈಡುಮಾಡಿತ್ತು. ಇವರಿಬ್ಬರ ಮದುವೆಯನ್ನು ಮುರಿಯಲು ಕೊನೆಯ ಘಳಿಗೆಯವರೆಗೂ ಚಿಕ್ಕಿಭಾರ್ಗವಿ ಸ್ಕೆಚ್​ ಹಾಕಿದ್ದಳು. ಆದರೆ ಎಲ್ಲವೂ ನಿರಾತಂಕವಾಗಿ ನಡೆದಿದೆ.
 
ಅದೇ ಇನ್ನೊಂದೆಡೆ ಸೀತಾರಾಮ ಪಾತ್ರಧಾರಿಗಳ ಭರ್ಜರಿ ರೀಲ್ಸ್​ ವೈರಲ್​ ಆಗುತ್ತಿದೆ. ಜೀ ಕನ್ನಡ ವಾಹಿನಿ ಇದನ್ನು ಶೇರ್​  ಮಾಡಿಕೊಂಡಿದೆ. ಇದರಲ್ಲಿ ಅಶೋಕ್​ ತಂಗಿ  ಹಾಗೂ ಇತರ ಸೀರಿಯಲ್​ ನಟಿಯರನ್ನು ನೋಡಬಹುದು. ಚಾಂದನಿ ಮತ್ತು ಇತರರು ಮೇಕಪ್​ ಮಾಡಿಕೊಳ್ಳುತ್ತಿದ್ದಾರೆ. ಸೀತಾರಾಮರ ಮದುವೆಗೆ ಅವರು ಸಜ್ಜಾಗುತ್ತಿದ್ದಾರೆ. ಆಗ ಸೀತಾಳ ಚಿಕ್ಕಿ ನೀವೇನಾದ್ರೂ ಮೇಕಪ್​  ಮಾಡಿಕೊಂಡಿದ್ರಾ ಕೇಳ್ತಾರೆ. ಆಗ ಅಶೋಕ್​ ತಂಗಿ ಇಲ್ಲಪ್ಪ ಹಾಗೇನಿಲ್ರೀ ನ್ಯಾಚುರಲ್​ ಬ್ಯೂಟಿ ಅಂತಾರೆ. ಆಗ ಚಿಕ್ಕಮ್ಮ ಸುಮ್ಮನಿರದೇ ನೀವೂ ಸ್ವಲ್ಪ ಮುಖಕ್ಕೆ ಹಚ್ರಲಾ.. ಚೆಂದ್ ಕಾಣ್ತೀರಿ ಅನ್ನೋದಾ? ಈ ರೀಲ್ಸ್​ಗೆ​ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗಿದೆ. 

ಅನಂತ್​ ಅಂಬಾನಿ- ರಾಧಿಕಾ ಮದುವೆ ಅಡುಗೆಯಲ್ಲಿ ಕೂದಲು! ಸಕತ್​ ವೈರಲ್​ ಆಗ್ತಿದೆ ವಿಡಿಯೋ...

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದ್ರೆ, ಅತ್ತ ಸೀತಾ-ರಾಮರ ಮದುವೆ ನಡೆಯುತ್ತಿದ್ದರೆ, ಸಿಹಿಯ ತಲೆಗೆ ಇನ್ನಿಲ್ಲದ ಹುಳಿ ಹಿಂಡುವ ಕೆಲಸ ಮಾಡಿದ್ದಾಳೆ ಭಾರ್ಗವಿ. ಅವರಿಬ್ಬರ ಮದುವೆಯಾದರೆ ನೀನು ದೂರವಾಗುತ್ತಿ, ನಿನ್ನ ಅಮ್ಮ ನಿನಗೆ ಸಿಗುವುದಿಲ್ಲ ಎಂದೆಲ್ಲಾ ಹೇಳಿದ್ದಾಳೆ. ಇದನ್ನು ಕೇಳಿ ಸಿಹಿಗೆ ಶಾಕ್​ ಆಗಿದೆ. ಅಲ್ಲಿ ಸಪ್ತಪದಿ ತುಳಿಯುವಷ್ಟರಲ್ಲಿಯೇ ಶಾಕ್​ನಿಂದ ಓಡಿ ಹೋಗಿದ್ದಾಳೆ ಸಿಹಿ. ಆಗ ಸಿಹಿಯನ್ನು ಮುದ್ದಾಡಿದ ರಾಮ್​ ನೀನು ಎಂದೆಂದಿಗೂ ನನ್ನ ಮಗಳೇ ಎಂದು ಅವಳನ್ನು ಎತ್ತಿಕೊಂಡಿದ್ದಾನೆ. ಸಪ್ತಪದಿಯ ಬಳಿಕ ಸಿಹಿಯ ಜೊತೆ ಅಪ್ಪನಾಗಿ ಮತ್ತೊಂದು ಹೆಜ್ಜೆಯನ್ನು ತುಳಿದಿದ್ದಾನೆ ರಾಮ್​. ಇಲ್ಲಿಯವರೆಗೆ ಫ್ರೆಂಡ್​ ಫ್ರೆಂಡ್​ ಎನ್ನುತ್ತಿದ್ದ ಸಿಹಿ ಇದೇ  ಮೊದಲ ಬಾರಿಗೆ ರಾಮ್​ನನ್ನು ಬಾಯ್ತುಂಬಾ ಅಪ್ಪಾ ಎಂದು ಕರೆದಿದ್ದಾಳೆ. 

ಮದುವೆ ಕಾರ್ಯ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ, ಸಿಹಿ ಕೂಡ ರಾಮ್​ನನ್ನು ಅಪ್ಪಾ ಎಂದು ಕರೆದಿದ್ದನ್ನು ನೋಡಿ ಭಾರ್ಗವಿಗೆ ಉರಿ ಹತ್ತಿಕೊಂಡಿದೆ. ಮದುವೆಯೊಂದು ಆಗಲಿ, ಮೂವರನ್ನೂ ವನವಾಸಕ್ಕೆ ಕಳುಹಿಸುವ ಪ್ಲ್ಯಾನ್​ ರೆಡಿ ಇದೆ ಎಂದು ಭಾರ್ಗವಿ ಶಪಥ ಮಾಡಿ, ಅವರನ್ನು ಕಳುಹಿಸಲು ಸಜ್ಜಾಗಿದ್ದಾಳೆ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ ರಾಮ್​ನ ತಾಯಿ ಭಾರ್ಗವಿಯ ಕನಸಲ್ಲಿ ಬಂದು ಆಗಾಗ್ಗೆ ಆಕೆಗೆ ಹೆದರಿಸುತ್ತಲೇ ಇದ್ದಾಳೆ. ಸೀತಾ ಬಂದ ಮೇಲೆ ನಿನ್ನ ಗತಿ ಅಷ್ಟೇ ಎಂದು ಹೆದರಿಸುತ್ತಿದ್ದಾಳೆ. ಇದಕ್ಕೆ ಕಾರಣ, ಆಸ್ತಿಗಾಗಿ ಸ್ವಂತ ಅಕ್ಕನನ್ನೇ ಕೊಲ್ಲಿಸಿದವಳು ಭಾರ್ಗವಿ. ಆದರೆ ಇವೆಲ್ಲ ಸತ್ಯ ಬಹಿರಂಗವಾಗಲು ಇನ್ನೆಷ್ಟು ವರ್ಷಗಳು ಬೇಕೋ ಗೊತ್ತಿಲ್ಲ. ಸದ್ಯ ಸೀತಾರಾಮರ ಮದುವೆಯೊಂದು ನಿರ್ವಿಘ್ನವಾಗಿ ನಡೆದರೆ ಸಾಕು ಎನ್ನುತ್ತಿದ್ದಾರೆ ಅಭಿಮಾನಿಗಳು. 
 

ಜಹೀರ್​ರನ್ನು ಮದ್ವೆಯಾಗ್ತಿದ್ದಂತೆಯೇ ಶತ್ರುಘ್ನ ಫ್ಯಾಮಿಲಿನಿಂದ ಸೋನಾಕ್ಷಿ ಔಟ್​? ಒಂದು ಫೋಟೋ, ಹತ್ತಾರು ಪ್ರಶ್ನೆ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Brahmagantu Serial ದೀಪಾ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು? ದೂರು ಕೊಟ್ಟೋರು ಯಾರು?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!