ಮದ್ವೆ- ಮಕ್ಕಳು ಬಗ್ಗೆ ನಟಿ ವೈಷ್ಣವಿ ಬೋಲ್ಡ್​ ಮಾತು: ನಾಚಿ ನೀರಾದ ರಾಮ್​ ಪಾತ್ರಧಾರಿ ಗಗನ್!

By Suchethana D  |  First Published Oct 8, 2024, 4:13 PM IST

ಸೀತಾ-ರಾಮರ ರಿಯಲ್​ ಲೈಫ್​ನಲ್ಲೂ ಕುಚ್ ಕುಚ್​ ನಡೆಯುತ್ತಿದೆ ಎಂದು ಅಭಿಮಾನಿಗಳು ಪದೇ  ಪದೇ ಹೇಳ್ತಿರೋ ನಡುವೆಯೇ ಮದ್ವೆ- ಮಕ್ಕಳು ಬಗ್ಗೆನೂ ನಟಿ ಮಾತಾಡಿದ್ದಾರೆ!
 


ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌ ನಾಯಕ, ನಾಯಕಿ ತಮ್ಮ ಕ್ಯೂಟ್‌ನೆಸ್‌ನಿಂದಲೂ ಸಖತ್ ಪಾಪ್ಯುಲರ್‌. ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಈ ಕ್ಯೂಟ್ ಹೀರೋ ಹೀರೋಯಿನ್. ಇವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕೌಟ್ ಆಗ್ತಾ ಇದೆ. ಇಬ್ರೂ ಈ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಅಂತ ಎಲ್ಲರೂ ಕಾಮೆಂಟ್ ಮಾಡ್ತಾರೆ.  ಕೆಲ ದಿನಗಳ ಹಿಂದೆ ಇವರಿಬ್ಬರೂ ಸೇರಿ ರೀಲ್ಸ್​ ಮಾಡಿದ್ದರು. ಇದನ್ನು ನೋಡಿದವರು, ಇವರಿಬ್ಬರ ಮಧ್ಯೆ ಖಂಡಿತಾ ಕುಚ್ ಕುಚ್​ ನಡೆಯುತ್ತಿದೆ ಎಂದಿದ್ದರು. ಏಕೆಂದ್ರೆ ಇದರಲ್ಲಿ ಇಬ್ಬರೂ ಸಖತ್ ರೊಮ್ಯಾಂಟಿಕ್ ಆಗಿ  ವೀಡಿಯೋ ಮಾಡಿದ್ದರು. ಇವರಿಬ್ಬರೂ ಅವಿವಾಹಿತರಾಗಿರುವ ಹಿನ್ನೆಲೆಯಲ್ಲಿ ಈ ಜೋಡಿಯ ಮದುವೆ ಮಾಡಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ನಂತರ ರೊಮಾಂಟಿಕ್​ ಸಾಂಗ್​ನ ವಿಡಿಯೋ ನೋಡಿದ ಮೇಲಂತೂ  ಮದುವೆ ಆಗ್ಲಿ ಅನ್ನೋ ಫ್ಯಾನ್ಸ್ ಒತ್ತಡ ಮತ್ತಷ್ಟು ಹೆಚ್ಚಾಗಿದೆ.  

ಆದರೆ ಇದೀಗ ಖುದ್ದು ವೈಷ್ಣವಿಯೇ ಗಗನ್​ ಬಳಿ ಮದುವೆ, ಮಕ್ಕಳ ವಿಷಯ ತೆಗೆದಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಎಂದೇ ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಇದೀಗ ತಮ್ಮ ಹೊಸ ವಿಡಿಯೋ ಶೇರ್​ ಮಾಡಿದ್ದಾರೆ ವೈಷ್ಣವಿ. ಇದರಲ್ಲಿ ರ್ಯಾಪಿಡ್​ ರೌಂಡ್​ ಎಂದು ಇಬ್ಬರೂ ರೀಲ್ಸ್​ ಮಾಡಿದ್ದಾರೆ. ನಿಮ್ಮ ಈಗಿನ ಇಷ್ಟದ ಹಾಡು ಯಾವುದು? ಒಂದೆರಡು ಲೈನ್​ ಹೇಳಿ ಎಂದಾಗ, ವೈಷ್ಣವಿ ಮಚಾಲೋ ಮಚಾಲೋ ಹೆಂಗೌಳೆ ನಿಮ್​ ಡವ್​ ಎಂದಿದ್ದಾರೆ. ಇಷ್ಟದ ಜಂಕ್​ ಫುಡ್​ ಪಾನೀಪುರಿ ಎಂದಿದ್ದಾರೆ. ನಟಿಯಾಗದೇ ಇದ್ದರೆ ಡಾನ್ಸರ್​ ಆಗುತ್ತಿದ್ದೆ ಎಂದಿದ್ದಾರೆ. ಎಲ್ಲಿಯಾದರೂ ಹೋಗಬೇಕು ಎನ್ನುವುದಾದರೆ ಎಲ್ಲಿಗೆ ಹೋಗುವಿರಿ ಕೇಳಿದ ಪ್ರಶ್ನೆಗೆ ಮಂತ್ರಾಲಯ ಎಂದಿದ್ದಾರೆ. 

Tap to resize

Latest Videos

undefined

ರೀಲ್​ ಬಿಟ್ಟು ರಿಯಲ್​ನಲ್ಲೂ ಒಟ್ಟಿಗೇ ಕಾಲ ಕಳೆದ ಸೀತಾ-ರಾಮ: ನಿಜ ಜೀವನದಲ್ಲೂ ಒಂದಾಗಿ ಅಂತಿರೋ ಫ್ಯಾನ್ಸ್​

ಪ್ರಸಿದ್ಧ ವ್ಯಕ್ತಿಯೊಂದಿಗೆ ಊಟ ಮಾಡುವುದಾದರೆ ಯಾರ ಜೊತೆ ಎಂದು ವೈಷ್ಣವಿ ಅವರನ್ನು ಕೇಳಿದಾಗ ಕೂಡಲೇ ಗಗನ್​ ನನ್ನ ಜೊತೆ ಎಂದಿದ್ದಾರೆ. ವೈಷ್ಣವಿ ಖಂಡಿತಾ ಇಲ್ಲ, ನಾನು ಓಡಿ ಹೋಗ್ತೀನಿ ಎಂದಿದ್ದಾರೆ. ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಿದ್ದರೆ ಏನಂತ ಇಟ್ಟುಕೊಳ್ತೀರಾ ಕೇಳಿದಾಗ, ಕೂಡಲೇ ಗಗನ್​ ಅವ್ರು ವನಜಾಕ್ಷಿ ಎಂದಿದ್ದಾರೆ.  ಆಗ ವೈಷ್ಣವಿ, ಇಲ್ಲ ವೈಷ್ಣೋದೇವಿಯಿಂದ ಈ ಹೆಸರು ಬಂದಿದ್ದು, ಹೆಸರು ಬದಲಾಯಿಸಿಕೊಳ್ಳಲ್ಲ ಎಂದಿದ್ದಾರೆ. ಲಾಟರಿ ಬಂದರೆ ಏನು ಮಾಡುತ್ತೀರಿ ಕೇಳಿದಾಗ, ಅಮ್ಮನ ಕೈಗೆ ಕೊಡುತ್ತೇನೆ ಎಂದರು ವೈಷ್ಣವಿ. ಆಗ ಗಗನ್​ ಎಲ್ಲಾ ಸುಳ್ಳು ಎಂದರು. ಆಗ ವೈಷ್ಣವಿ ಮಕ್ಕಳನ್ನು ಸಾಕುವ ಕಷ್ಟ ನಿಮಗೇನು ಗೊತ್ತು ಮದ್ವೆಯಾಗಿ ಮಕ್ಳು ಮಾಡಿಕೊಳ್ಳಿ ಎಂದಾಗ ಕೂಡಲೇ ಗಗನ್​ ನನ್ನ ಮನೆಯಲ್ಲಿ ಯಾರೂ ಹೆಣ್ಣೇ ನೋಡ್ತಾ ಇಲ್ವಲ್ಲಪ್ಪಾ ಅಯ್ಯೋ ಎಂದರು. ಅದಕ್ಕೆ ನೆಟ್ಟಿಗರು ಪಕ್ಕದಲ್ಲೇ ಇದ್ದಾಳಲ್ಲ ಅಂತಿದ್ದಾರೆ. 


ವೈಷ್ಣವಿ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾಗ ಅದರ ಹೀರೋ ವಿಜಯ್ ಸೂರ್ಯ ಮತ್ತು ವೈಷ್ಣವಿ ಜೋಡಿ ಯಾವ ಲೆವೆಲ್‌ಗೆ ಫೇಮಸ್ ಆಗಿತ್ತು ಅಂದರೆ ಇವರಿಬ್ಬರೂ ಮದುವೆ ಆಗದೇ ಇರೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ಮಾತು ಕೇಳಿ ಬರ್ತಿತ್ತು. ಆದರೆ ವಿಜಯ್‌ ಸೂರ್ಯ ಮತ್ತೊಬ್ಬರನ್ನು ಮದುವೆ ಆದಾಗ ಅಭಿಮಾನಿಗಳಿಗೆ ಫುಲ್ ನಿರಾಸೆ ಆಗಿ ಹೋಯ್ತು. 'ಎಷ್ಟು ಚಂದ ಇತ್ತು ಈ ಜೋಡಿ, ಛೇ..' ಅಂತ ತುಂಬ ಜನ ಮಾತಾಡ್ಕೊಂಡ್ರು. ಅದಾಗಿ ವೈಷ್ಣವಿ ಬಿಗ್‌ಬಾಸ್ ಮತ್ತೊಂದು ಅತ್ತ ಸುತ್ತು ಹೊಡೆದು ಇದೀಗ 'ಸೀತಾರಾಮ'ದಲ್ಲಿ ಬಂದು ನಿಂತಿದ್ದಾರೆ. ಈ ನಡುವೆ ಇವರ ಮದುವೆ ಒಬ್ಬರ ಜೊತೆಗೆ ಫಿಕ್ಸ್ ಆಗಿ ಆಮೇಲೆ ಆ ವ್ಯಕ್ತಿಯ ಚಾರಿತ್ರ್ಯದ ಬಗ್ಗೆ ಪ್ರಶ್ನೆ ಬಂದಾಗ ಈ ಜೋಡಿ ಸಪರೇಟ್ ಆಯ್ತು. ಇನ್ನೊಂದೆಡೆ ಈ ಸೀರಿಯಲ್ ಹೀರೋ ಗಗನ್ ಚಿನ್ನಪ್ಪ ಅವರೂ ಈ ಹಿಂದೆ ಒಬ್ಬ ಹುಡುಗಿ ಜೊತೆಗೆ ಲವ್ವಲ್ಲಿ ಬಿದ್ದಿದ್ರು. ಆದರೆ ಈ ಜೋಡಿ ನಡುವೆ ಏನಾಯ್ತೋ ಬ್ರೇಕಪ್ ಅಂತೂ ಆಯ್ತು. ಇತ್ತೀಚೆಗೆ ಗಗನ್, 'ನಾನು ಸಿಂಗಲ್, ರೆಡಿ ಟು ಮಿಂಗಲ್' ಅಂತ ಕಣ್ ಹೊಡೆದಿದ್ರು. ಆಗ ಮಿಂಗಲ್ ಆಗಕ್ಕೆ ಪಕ್ಕದಲ್ಲೇ ಇದ್ದಾರಲ್ಲ ಅಂತ ವೈಷ್ಣವಿ ಕಡೆ ಕೈ ತೋರಿಸಿದ್ರು. ಈಗ ಈ ಜೋಡಿ ನಡುವೆ ಸಮ್ ಥಿಂಗ್ ಸ್ಪೆಷಲ್ ಏನೋ ಇದೆ ಅನ್ನೋ ಗುಸುಗುಸು ಕೇಳಿ ಬರ್ತಿದೆ.
 

click me!