ಹೆಗಲ ಮೇಲೆ ಕೈ ಹಾಕಿಲ್ಲವೆಂದು ಮುನಿಸಿಕೊಂಡ ಸೀತಾ ಹೊಟ್ಟೆ ಮೇಲೆಯೇ ಹೊಡೆದು ಹೋಗೋದಾ?

Published : Jun 30, 2024, 04:41 PM IST
ಹೆಗಲ ಮೇಲೆ ಕೈ ಹಾಕಿಲ್ಲವೆಂದು ಮುನಿಸಿಕೊಂಡ ಸೀತಾ ಹೊಟ್ಟೆ ಮೇಲೆಯೇ ಹೊಡೆದು ಹೋಗೋದಾ?

ಸಾರಾಂಶ

ಸೀತಾಳ ಹೆಗಲ ಮೇಲೆ ರಾಮ್​ ಕೈಹಾಕಿಲ್ಲ ಎಂದು ಮುನಿಸುಗೊಂಡ ಸೀತಾ ಫೋಟೋಶೂಟ್​ ಬಿಟ್ಟು ಹೋಗಿದ್ದಾಳೆ. ಏನಿದು ವಿಷ್ಯ?  

ಸೀತಾ ಮತ್ತು ರಾಮದ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ಮಂಟಪದವರೆಗೂ ಸೀತಾ-ರಾಮ ಜೋಡಿ ಬಂದು ನಿಂತಿದೆ. ಮದುವೆ ಕಾರ್ಯಗಳೂ ಆರಂಭವಾಗಿದೆ.  ಅದ್ಧೂರಿ ನಿಶ್ಚಿತಾರ್ಥದ ಬಳಿಕ, ಈಗ ಮದುವೆಯ ಶಾಸ್ತ್ರಗಳು ಶುರುವಾಗಿವೆ. ಸೀರಿಯಲ್​ ಮದ್ವೆ ಎಂದರೆ ಅದರಲ್ಲಿಯೂ ಆಗರ್ಭ ಶ್ರೀಮಂತರ ಮದುವೆ ಎಂದರೆ ರಿಯಲ್​ ಲೈಫ್​ ಮದುವೆಯ ಹಾಗೆಯೇ ಭರ್ಜರಿಯಾಗಿ ನಡೆಯುತ್ತದೆ. ಅದರಂತೆಯೇ ಸೀತಾ ರಾಮರ ಮದುವೆ ಕಾರ್ಯವನ್ನು ಇದಾಗಲೇ ಹಲವು ಎಪಿಸೋಡ್​ಗಳಲ್ಲಿ ವೀಕ್ಷಕರು ನೋಡಿದ್ದು, ಈಗ ರಾಮ ಸೀತಾಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟುವುದೊಂದೇ ಬಾಕಿಯಾಗಿದೆ. ಯಾವುದೇ ತೊಂದರೆ ಇಲ್ಲದೇ ಇಬ್ಬರ ಮದುವೆ ನಿರಾತಂಕವಾಗಿ ನಡೆಯಲಿ ಎಂದು ವೀಕ್ಷಕರು ಹೇಳುತ್ತಿದ್ದಾರೆ. 

ಇದರ ನಡುವೆಯೇ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ಸೀತಾ ರಾಮ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದಾರೆ. ಆಗ ಫೋಟೋಗ್ರಾಫರ್​ ಹತ್ತಿರ ಬನ್ನಿ ಎಂದಾಗ ಇಬ್ಬರೂ ಹತ್ತಿರ ಬರುತ್ತಾರೆ. ನಗುವಂತೆ ಹೇಳಿದಾಗ ಇಬ್ಬರೂ ನಗುತ್ತಾರೆ. ಹೆಗಲ ಮೇಲೆ ಕೈಹಾಕಿ ಎಂದಾಗ ಸೀತಾ ರಾಮನ ಹೆಗಲ ಮೇಲೆ ಕೈಹಾಕಿದ್ರೆ, ರಾಮ್​ ತನ್ನ ಹೆಗಲ ಮೇಲೆ ತಾನು ಕೈಯಿಟ್ಟುಕೊಳ್ಳುತ್ತಾನೆ. ಇದರಿಂದ ಸಿಟ್ಟುಗೊಂಡ ಸೀತಾ ಹೊಟ್ಟೆಯ ಮೇಲೆ ಡುಶ್ಯೂಂ ಎಂದು ಹೊಡೆದು ಹೋಗುತ್ತಾಳೆ. ಅಷ್ಟಕ್ಕೂ ಈ ರೀಲ್ಸ್ ಮಾಡಿರುವುದು ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು. ಸೋಷಿಯಲ್​ ಮೀಡಿಯಾದಲ್ಲಿ ಸಕತ್​  ಆ್ಯಕ್ಟೀವ್​ ಇರುವ ನಟಿ ಆಗಾಗ್ಗೆ ರೀಲ್ಸ್​ ಮಾಡುತ್ತಿರುತ್ತಾರೆ. ಇದೀಗ ರಾಮ್​ ಪಾತ್ರಧಾರಿ ಗಗನ್​ ಜೊತೆ ಇಂಥದ್ದೊಂದು ರೀಲ್ಸ್​ ಮಾಡಿದ್ದಾರೆ. ಇವರಿಬ್ಬರ ಮದುವೆಯಲ್ಲಿ ಯಾವುದೇ ತೊಂದರೆ ಬಾರದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿರುವ ಸಮಯದಲ್ಲಿಯೇ ಇಂಥದ್ದೊಂದು ರೀಲ್ಸ್​ ಮಾಡಿದ್ದರಿಂದ ಹಲವರು ನಟಿಯ ಕಾಲೆಳೆಯುತ್ತಿದ್ದಾರೆ. 

ನಿಮಗಿಷ್ಟದ 'ಸಿಹಿ' ತಿಂಡಿಯ ಮೂಲಕ ಜೋಡಿಯ ವರ್ಣಿಸಿ: ಸೀತಾರಾಮ ತಂಡದಿಂದ ಹೀಗೊಂದು ಆಫರ್​

ಅಷ್ಟಕ್ಕೂ ರಾಮ ಸೀತಾಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿ ಸಿಂಧೂರ ಹಚ್ಚುವವರೆಗೂ ಸೀರಿಯಲ್​ ಫ್ಯಾನ್ಸ್​ಗೆ ಆತಂಕ ಇದ್ದೇ ಇದೆ. ಇದಕ್ಕೆ ಕಾರಣ,  ಮದುವೆಗೆಂದು ಆಭರಣದ ಅಂಗಡಿಗೆ ಹೋದಾಗ  ಯುವತಿಯೊಬ್ಬಳನ್ನು ಸೀತಾ ಗಾಬರಿಯಾಗಿದ್ದಳು. ಇವಳು ಯಾರು ಎನ್ನುವುದು ಈಗಿರುವ ಪ್ರಶ್ನೆ.   ಅನಂತ ಲಕ್ಷ್ಮಿಯವರ ಕುರಿತು ರಾಮ್​ ಹತ್ರ ಹೇಳಬೇಕಾ ಎಂದು ಯುವತಿಯೊಬ್ಬಳು ತನ್ನಷ್ಟಕ್ಕೇ ತಾನು ಮಾತನಾಡಿಕೊಂಡಿದ್ದಾಳೆ. ಅವಳನ್ನು ನೋಡಿದ ಸೀತಾಳಿಗೆ ಶಾಕ್​ ಆಗಿತ್ತು. ಇವೆಲ್ಲಾ ಪ್ರಶ್ನೆಗಳು ಸದ್ಯ ಸೀರಿಯಲ್​ನಲ್ಲಿ ಬಾಕಿ ಇವೆ. ಈ ಮಧ್ಯೆ, ಗೋಡೆ ಬರಹ ನೋಡಿ ಫ್ಯಾನ್ಸ್​ ಸೀತಾರಾಮ ಕಲ್ಯಾಣ ಆಗುವುದು ಡೌಟ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ಸೀತಾ ತನ್ನ ಇತಿಹಾಸ ಹೇಗಾದರೂ ಮಾಡಿ ಹೇಳಬೇಕಿತ್ತು, ಇಲ್ಲದಿದ್ದರೆ ಮದ್ವೆಯಾದ್ಮೇಲೆ ಸುಮ್ಮನೇ ತೊಂದರೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ ಕೂಡ. 

ಒಂದು ಖುಷಿಯ ಸಂಗತಿ ಎಂದರೆ, ಆದರೆ ರುದ್ರಪ್ರತಾಪನನ್ನು ಇದಾಗಲೇ ಮಟ್ಟ ಹಾಕಲಾಗಿದೆ. ಭಾರ್ಗವಿಯ ಕುತಂತ್ರ ಬಯಲಾಗುವ ಭಯದಲ್ಲಿ ಇರುವ ಕಾರಣ ಸದ್ಯ ಅವಳೂ ಬಾಲ ಮುದುಡಿಕೊಂಡು ಇರುತ್ತಾಳೆ ಎನ್ನುವುದು ಸತ್ಯವಾದರೂ ಸಿಹಿ, ಸೀತಾಳ ಹಿನ್ನೆಲೆ ಮದುವೆಗೆ ವಿಘ್ನ ತರುತ್ತದೆ ಎನ್ನುವುದು ಹಲವರ ಅಭಿಪ್ರಾಯವಾದರೆ, ಮದುವೆ ನಡೆಯುತ್ತದೆ, ಆದರೆ ಇದೇ ಹಿನ್ನೆಲೆಯಿಂದಾಗಿಯೇ ಅವರಿಬ್ಬರ ಮದುವೆ ಲೈಫ್​ ಹಾಳಾಗುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್​  ಕುತೂಹಲದಿಂದ ಕೂಡಿದೆ ಎನ್ನುವುದು ಸೀರಿಯಲ್​ ಪ್ರೇಮಿಗಳ ಅಭಿಮತ. 

ಟಿವಿಯಲ್ಲಿ ಬಂದ ಬ್ರೇಕಿಂಗ್​ ನ್ಯೂಸ್​ಗೆ ಗಂಡ ತಾಂಡವ್​ನ ಹಾರ್ಟ್​ ಬ್ರೇಕ್​- ಅತ್ತೆ ಕುಸುಮಾ ಶಾಕ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟಿ ಮಂಜು ಭಾಷಿಣಿ ಫ್ಯಾನ್ಸ್​ ಕಣ್ಣಿಗೆ ಕಾಣಿಸಿದ್ರೆ ನಿಮ್​ ಕಥೆ ಗೋವಿಂದ: Bigg Boss ಡಾಗ್​ ಸತೀಶ್​ಗೆ ಯಾಕಿಂತ ಎಚ್ಚರಿಕೆ?
ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!