
ನ್ಯೂಯಾರ್ಕ್(ಮೇ.13) ಸೂರ್ಯ, ಭೂಮಿ, ಚಂದ್ರ ಇರೋವರೆಗೂ ಶಾಶ್ವತ ಅನ್ನೋ ಮಾತು, ಡೈಲಾಗ್ ನೀವು ಕೇಳಿರುತ್ತೀರಿ. ಆದರೆ ಈ ಪೈಕಿ ಭೂಮಿ ಶಾಶ್ವತವಲ್ಲ ಅನ್ನೋ ಮಾಹಿತಿಯನ್ನು ಅಧ್ಯಯನ ವರದಿ ಹೇಳುತ್ತಿದೆ. ಭೂಮಿಗೆ ಒಂದು ಆಯಸ್ಸು ಇದೆ. ಆ ದಿನದ ವರೆಗೆ ಭೂಮಿಯಲ್ಲಿ ಎಲ್ಲರೂ ವಾಸಿಸಲು ಸಾಧ್ಯವಿದೆ. ಆದರೆ ಭೂಮಿ ಮೇಲಿನ ಪ್ರತಿಯೊಂದು ಜೀವ ಚರಾಚರಗಳು ಅಂತ್ಯಗೊಳ್ಳುವ ಮೂಲಕ ಭೂಮಿಯೂ ಅಂತ್ಯಗೊಳ್ಳಲಿದೆ ಎಂದು ಟೊಹೋ ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ. ಈ ಅಧ್ಯಯನ ವರದಿಯಲ್ಲಿ ಭೂಮಿ ಇನ್ನೆಷ್ಟು ದಿನ ಇರಲಿದೆ? ಅನ್ನೋದನ್ನ ಸ್ಪಷ್ಟಪಡಿಸಿದೆ.
ಭೂಮಿ ಅಯಸ್ಸು ಇನ್ನೆಷ್ಟು ದಿನ?
ನಾಸಾ ಗ್ರಹಗಳ ಮಾದರಿ ಸಂಗ್ರಹಿಸಿ ಟೊಹೊ ವಿಶ್ವವಿದ್ಯಾಲಯಗಳ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಸೂಪರ್ ಕಂಪ್ಯೂಟರ್ ಸಿಮ್ಯುಲೇಶನ್ ಅಧ್ಯಯನದಲ್ಲಿ ಭೂಮಿಗೆ ಇನ್ನಿರುವುದು ಸರಿಸುಮಾರು ಒಂದು ಶತಕೋಟಿ ವರ್ಷ ಮಾತ್ರ.
ಭೂಮಿಯ ಅಂತ್ಯ ಹೇಗಾಗುತ್ತೆ?
ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಇದಕ್ಕೆ ಗ್ಲೋಬಲ್ ವಾರ್ಮಿಂಗ್ ಸೇರಿದಂತೆ ಹಲವು ಮಾಲಿನ್ಯಗಳು, ಕಾಡು ನಾಶ, ಹಸಿರು ನಾಶ, ಗುಡ್ಡ, ಪರ್ವತ ನಾಶ, ಅಭಿವೃದ್ಧಿಹೆಸರಿನಲ್ಲಿ ಭೌಗೋಳಿಕವಾಗಿ ಆಗುತ್ತಿರುವ ಅಸಮತೋಲನಗಳಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸೂರ್ಯನ ಬಿಸಿಲು ಪ್ರಖರಗೊಳ್ಳುತ್ತಿದೆ. ಇದು ತಾಪಮಾನದಲ್ಲಿ ಭಾರಿ ವ್ಯತ್ಯಾಸ ಮಾಡುತ್ತಿದೆ. ಒಂದು ಹಂತದವರೆಗೆ ಸೂರ್ಯನ ಬಿಸಿ ತಾಪಮಾನ, ಭೂಮಿಯಲ್ಲಿ ಆಮ್ಲಜನ ಉತ್ಪಾದನೆಗೆ ನೆರವು ನೀಡಲಿದೆ. ಆದರೆ ಪ್ರಮಾಣ ಮೀರಿದಾಗ ಭೂಮಿಯಲ್ಲಿ ಆಮ್ಲಜನಕ ಉತ್ಪತ್ತಿಯಾಗುವುದಿಲ್ಲ. ಅಲ್ಲಿಗೆ ಭೂಮಿಯ ಅಂತ್ಯವಾಗಲಿದೆ ಎಂದು ಈ ಅಧ್ಯಯನ ವರದಿ ಹೇಳುತ್ತದೆ.
ನೀರು ಆವಿಯಾಗಿ ಕಾರ್ಬನ್ ಸೈಕಲ್ ಮೇಲೆ ಪರಿಣಾಮ
ಭೂಮಿಯ ವಾತಾವರಣ ಅತೀವಗೊಳ್ಳಲಿದೆ. ಇದರಿಂದ ಭೂಮಿಯಲ್ಲಿರುವ ನೀರು ಆವಿಯಾಗಲು ಆರಂಭಗೊಳ್ಳಲಿದೆ. ಅಂದರೆ ನದಿಗಳ ನೀರು ಬತ್ತಿ ಹೋಗಲಿದೆ. ಅಂತರ್ಜಲ ನೀರು ಕಾಣೆಯಾಗಲಿದೆ. ಕಾರ್ಬನ್ ಸೈಕಲ್ ಮೇಲೆ ವ್ಯತಿರಿಕ್ತ ಪರಿಣಾಮ ಬಿರವು ಕಾರಣ ಕಾರ್ಬನ್ ಸೈಕಲ್ ಮೇಲೂ ಪರಿಮಾಮ ಬೀರಲಿದೆ. ಯಾವಾಗ ನೀರು ಆವಿಯಾಗಿ ಕಾರ್ಬನ್ ಸೈಕಲ್ ದುರ್ಬಲಗೊಳ್ಳುತ್ತಿದ್ದಂತೆ ಇತ್ತ ಆಮ್ಲಜನಕ ಉತ್ಪಾದನೆ ನಿಲ್ಲಲಿದೆ. ಅಲ್ಲಿಗೆ ಭೂಮಿ ಅಂತ್ಯಗೊಳ್ಳಲಿದೆ. ಯಾವುದೇ ಜೀವ ಚರಗಳಿಗೆ ವಾಸಿಸಲು ಇಲ್ಲಿ ಅಸಾಧ್ಯವಾಗಲಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.
ಬರೋಬ್ಬರಿ 4 ಲಕ್ಷ ಸಿಮ್ಯುಲೇಶನ ಬಳಸಿಕೊಂಡು ಅಧ್ಯಯನ ನಡೆಸಲಾಗಿದೆ. ನೇಚರ್ ಜಿಯೋಸೈನ್ಸ್‌ನಲ್ಲಿ ಆ ಅಧ್ಯಯನ ವರದಿ ಪ್ರಕಟಗೊಂಡಿದೆ. ದಿ ಫ್ಯೂಚರ್ ಲೈಫ್ ಸ್ಪಾನ್ ಆಫ್ ಆರ್ಥ್ ಆಕ್ಸಿಜನ್ ಅಟ್ಮೋಸ್ಪಿಯರ್ ಹೆಸರಿನಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದ.
ನಮಗೆ ಕಾಣದ ಭೂಮಿಯ ಪೋಲ್ಸ್ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ? ಅದ್ಭುತ ವಿಡಿಯೋ ಸೆರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.