ಕಿಚ್ಚ ಸುದೀಪ್ ಕನ್ನಡದ 'ಬಿಗ್ ಬಾಸ್ ಸೀಸನ್ 11' ಹೋಸ್ಟ್ ಮಾಡುತ್ತಿರುವುದು ಗೊತ್ತು. ಅದರಲ್ಲೂ ಮುಖ್ಯವಾಗಿ ಶನಿವಾರ ಹಾಗೂ ಭಾನುವಾರದ ಕಿಚ್ಚನ ಪಂಚಾಯಿತಿಗೆ ಹೆಚ್ಚಿನ ಡಿಮ್ಯಾಂಡ್ ಹಾಗು ಟಿಆರ್‌ಪಿ ಇದೆ. ಮೊದಲಿನಿಂದಲೂ ಅಷ್ಟೇ, ಕೊನೆಯಲ್ಲಿ ಬಿಗ್ ಬಾಸ್ ವಿನ್ನರ್ ಯಾರ್ ಆಗ್ತಾರೆ ಅನ್ನೋದನ್ನ ಬಿಟ್ಟರೆ..
ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ಹೋಸ್ಟ್ ಮಾಡುತ್ತಿರುವುದು ಗೊತ್ತೇ ಇದೆ. ಇದೀಗ, ಅವರ ನಟನೆಯ ಮುಂಬರುವ ಮ್ಯಾಕ್ಸ್ (Max) ಚಿತ್ರವು ಈ ತಿಂಗಳು 25ರಂದು (25 December 2024) ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ನಟ ಸುದೀಪ್ ಮಾತನಾಡಿರುವ ಹಳೆಯ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅವು ಸಾಕಷ್ಟು ವ್ಯೂಸ್, ಲೈಕ್ಸ್ ಹಾಗೂ ಕಾಮೆಂಟ್ಸ್ ಪಡೆಯುತ್ತವೆ. ಕಾರಣ, ನಟ ಸುದೀಪ್ ಅವರ ಮ್ಯಾಗ್ನೆಟಿಕ್ ವ್ಯಕ್ತಿತ್ವ ಅನ್ನಬಹುದು.
ಹೌದು, ನಟ ಸುದೀಪ್ ಅವರದು ಬಹುಮುಖ ಪ್ರತಿಭೆ ವ್ಯಕ್ತಿತ್ವ. ಜೊತೆಗೆ, ಅವರು ತಮಗೆ ಜೀವನದಲ್ಲಿ ಆಗಿರುವ ಅನುಭವಗಳ ಮೂಲಕ ತಮ್ಮದೇ ಆದ ರೀತಿಯಲ್ಲಿ 'ಲೈಫ್ ಲೆಸನ್' ತರ ಮಾತನಾಡುತ್ತಿರುತ್ತಾರೆ. ಕೆಲವೊಮ್ಮೆ ಸಂದರ್ಶನಗಳಲ್ಲಿ ಪ್ರಶ್ನೆಗೆ ಉತ್ತರ ರೂಪದಲ್ಲಿ, ಇನ್ನೂ ಕೆಲವೊಮ್ಮೆ ಎಲ್ಲೋ ವೇದಿಕೆಗಳಲ್ಲಿ ಜೀವನ, ಜೀವನ ಪಾಠ, ತಮ್ಮ ಬಗ್ಗೆ, ಬೇರೆಯವರ ಬಗ್ಗೆ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಅಂತಹದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೋಪದ ಬಗ್ಗೆ ಕಿಚ್ಚ ಸುದೀಪ್ ಮಾತು ಕೇಳಿ, ಮತ್ತೆ ನೀವು ಕೋಪ ಮಾಡ್ಕೊಂಡ್ರೆ ಹೇಳಿ!
ಕಿಚ್ಚ ಸುದೀಪ್ ಅವರು ಕನ್ನಡದ 'ಬಿಗ್ ಬಾಸ್ ಸೀಸನ್ 11' ನಡೆಸಿಕೊಡುತ್ತಿರುವುದು ಬಹುತೇಕರಿಗೆ ಗೊತ್ತು. ಅದರಲ್ಲೂ ಮುಖ್ಯವಾಗಿ ಶನಿವಾರ ಹಾಗೂ ಭಾನುವಾರದ ಕಿಚ್ಚನ ಪಂಚಾಯಿತಿಗೆ ಹೆಚ್ಚಿನ ಡಿಮ್ಯಾಂಡ್ ಹಾಗು ಟಿಆರ್‌ಪಿ ಇದೆ. ಮೊದಲಿನಿಂದಲೂ ಅಷ್ಟೇ, ಕೊನೆಯಲ್ಲಿ ಬಿಗ್ ಬಾಸ್ ವಿನ್ನರ್ ಯಾರ್ ಆಗ್ತಾರೆ ಅನ್ನೋದನ್ನ ಬಿಟ್ಟರೆ, ಶನಿವಾರ ಹಾಗೂ ಭಾನುವಾರ ಮೂಡಿ ಬರುವ ಸುದೀಪ್ ಸಂಚಿಕೆ ನೋಡಲಷ್ಟೇ ಜನರು ಮುಗಿಬೀಳುತ್ತಾರೆ. ಇದು ಎಲ್ಲಾ ಸೀಸನ್‌ಗಳಲ್ಲೂ ಕಂಡುಬಂದಿರುವ ಸತ್ಯ ಸಂಗತಿ. ಇನ್ನು ಸುದೀಪ್ ಬಿಗ್ ಬಾಸ್ ನಿರೂಪಣೆ ಮೆಚ್ಚಿ ಶಾಲೆಯ ಪ್ರಿನ್ಸಿಪಾಲರೊಬ್ಬರು ಪತ್ರ ಬರೆದಿದ್ದು, ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸುದೀಪ್ ಬಿಗ್ ಬಾಸ್ ಹೋಸ್ಟಿಂಗ್ ಮೆಚ್ಚಿ ಪ್ರಿನ್ಸಿಪಾಲ್ ಅವರು 'ಸುದೀಪ್ ಸರ್, 10 ವರ್ಷಗಳಿಂದ ನಾನು ಬಿಗ್ ಬಾಸ್ ಶೋ ನೋಡುತ್ತಿದ್ದೇನೆ. ಅದೂ ಕೂಡ ನಿಮಗಾಗಿ, ಶನಿವಾರ ಹಾಗೂ ರವಿವಾರದ ಶೋ ನೋಡುತ್ತಿದ್ದೇನೆ. 59 ವರ್ಷದ ನನ್ನದೇ ಶಾಲೆಯ ಪ್ರಿನ್ಸಿಪಾಲ್ ಆಗಿರವ ನಾನು ನಮ್ಮ ಮೀಟಿಂಗ್‌ಗಳಲ್ಲಿ ಅದೆಷ್ಟೋ ಸಾರಿ ಕಠಿಣವಾಗಿ (Rough) ಮಾತನಾಡಿಬಿಡುತ್ತಿದ್ದೆ, ಆಮೇಲೆ ಬೇಜಾರು ಮಾಡ್ಕೊತಾ ಇದ್ದೆ. ಆದರೆ, ನಿಮ್ಮ ಬಿಗ್ ಬಾಸ್ ನಿರೂಪಣೆಯಲ್ಲಿ ನಿಮ್ಮ ಕಮ್ಯುನಿಕೇಶನ್ ಕಲೆ, ವಿಷಯಗಳನ್ನು ಹ್ಯಾಂಡಲ್ ಮಾಡುವ ರೀತಿ, ಉಪಯೋಗಿಸುವ ಶಬ್ಧಗಳು, ನಿಮ್ಮ ವಿಭಿನ್ನ ಹಾಗೂ ಉತ್ತಮ ಕೌಶಲ್ಯ ಎಲ್ಲವನ್ನೂ ನೋಡಿ ತುಂಬಾ ಕಲಿತಿದ್ದೇನೆ.
ರಿಷಬ್ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನ; ಏನಿದು ಶೆಟ್ಟರ ಸಕ್ಸಸ್ ಗುಟ್ಟು?
ಈಗ ನಾನು ದೊಡ್ಡದೊಡ್ಡ ಮೀಟಿಂಗ್ ಮಾಡುವಾಗ ನನ್ನ ಮನದಲ್ಲಿ ನೀವು ಇರುತ್ತೀರಿ. ಯೋಚ್ನೆ ಮಾಡ್ತೀನಿ, ಮಾತಾಡ್ತೀನಿ.. ತುಂಬಾ ಮೇಚ್ಯೂರ್ಡ್ ಆಗಿದೀನಿ.. ನನ್ನ ಪ್ರೊಫೆಶನ್ ವಿಷಯದಲ್ಲಿ ನನಗೆ ನೀವು ರೋಲ್ ಮಾಡೆಲ್. ಮುಂದಿನ ಸೀಸನ್‌ನಿಂದ ಬಿಗ್ ಬಾಸ್ ನೋಡಲ್ಲ, ನಿಮ್ಮ ಸ್ಥಾನದಲ್ಲಿ ನಾನು ಬೇರೊಬ್ಬರನ್ನು ನೋಡಲು ಅಸಾಧ್ಯ. ಆದರೆ ನಾನು ನಿಮ್ಮ ನಿರ್ಧಾರವನ್ನು ಗೌರವಿಸುತ್ತೇನೆ' ಎಂದು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ. ಈ ಪತ್ರದ ಪೋಸ್ಟ್ ಈಗ ಸಖತ್ ವೈರಲ್ ಆಗುತ್ತಿದೆ.
ಅಂದಹಾಗೆ, ನಟ ಕಿಚ್ಚ ಸುದೀಪ್ ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ನಡೆಸಿಕೊಡುತ್ತಿದ್ದಾರೆ. ಅದು ಈಗಾಗಲೇ ಎಂಟು ವಾರಗಳನ್ನು ದಾಟಿ ಮುನ್ನಡೆಯುತ್ತಿದ್ದು, 'ಮುಂದಿನ ಸೀಸನ್ ನಾನು ಹೋಸ್ಟ್ ಮಾಡೋದಿಲ್ಲ, ಇದೇ ನನ್ನ ಲಾಸ್ಟ್ ಬಿಗ್ ಬಾಸ್ ಹೋಸ್ಟಿಂಗ್' ಎಂದಿದ್ದಾರೆ ಸುದೀಪ್. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಈ ವರ್ಷ, ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಮ್ಯಾಕ್ಸ್ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್ ಅವರು ಕಿಚ್ಚ ಸುದೀಪ್ ಅವರಿಗೆ ನಾಯಕಿ.
ಮದಗಜ ಮಹೇಶ್ ಸಾರಥ್ಯದಲ್ಲಿ ಮತ್ತೆ 'ಅಯೋಗ್ಯ'ರಾಗಲು ಹೊರಟ ಸತೀಶ್-ರಚಿತಾ!