ಸತ್ಯ ಸೀರಿಯಲ್ ವಿಲನ್ ದಿವ್ಯಾ ಪ್ರಿಯಾಂಕಾ ಶಿವಣ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ನಟಿಯ ಕುರಿತು ಕೆಲವು ಇಂಟರೆಸ್ಟಿಂಗ್ ವಿಷ್ಯಗಳು ಇಲ್ಲಿವೆ..
ದಿವ್ಯಾ ಎಂದಾಕ್ಷಣ ಸೀರಿಯಲ್ ಪ್ರೇಮಿಗಳಿಗೆ ಸತ್ಯ ಸೀರಿಯಲ್ ವಿಲನ್ ನೆನಪಾಗುವುದು ಸಹಜ. ಮುದ್ದು ಮೊಗದ ಸುಂದರಿ ವಿಲನ್ ಎಂದು ಒಪ್ಪಿಕೊಳ್ಳುವುದು ಹಲವರಿಗೆ ಕಷ್ಟವೂ ಆಗುತ್ತಿರುವುದು ಕಮೆಂಟ್ಗಳಿಂದಲೇ ತಿಳಿದುಬರುತ್ತದೆ. ಬಡ ಕುಟುಂಬದಲ್ಲಿ ಜನಿಸಿರುವ ಹೆಣ್ಣುಮಗಳೊಬ್ಬಳು ಐಷಾರಾಮಿ ಜೀವನದ ಕನಸು ಕಾಣುತ್ತ, ಶ್ರೀಮಂತನೆಂದು ತಿಳಿದು ರೌಡಿಯೊಬ್ಬನ ಬಲೆಗೆ ಬೀಳುವ ಪಾತ್ರ ದಿವ್ಯಾಳದ್ದು. ಆತನನ್ನೇ ಮದುವೆಯಾದ ಮೇಲೆ ಸತ್ಯ ತಿಳಿಯುತ್ತದೆ. ಆತ ಏನು ಮಾಡಿಯಾದರೂ ಸರಿ, ಇವಳಿಗೆ ಹಣ ಬೇಕು. ಹುಟ್ಟುತ್ತಲೇ ಬಡ ಕುಟುಂಬದಲ್ಲಿ ಹುಟ್ಟುವ, ತನ್ನ ಇಷ್ಟಗಳನ್ನೆಲ್ಲಾ ಮನಸ್ಸಿನಲ್ಲಿಯೇ ಅದುಮು ಇಟ್ಟುಕೊಳ್ಳುವ ಶ್ರೀಮಂತಿಕೆಯ ಕನಸು ಕಾಣುತ್ತಿರುವ ಹಲವು ಹೆಣ್ಣುಮಕ್ಕಳ ಪ್ರತೀಕ ಈ ದಿವ್ಯಾ. ತನ್ನ ತಪ್ಪಿನ ಅರಿವಾಗಿ ಪತಿ ಬಾಲ ಒಳ್ಳೆಯನಾಗುವ ಸಲುವಾಗಿ ಕೂಲಿ ಮಾಡಲು ಹೋದರೆ, ಆತನನ್ನು ರಿಜೆಕ್ಟ್ ಮಾಡುತ್ತಾಳೆ ದಿವ್ಯಾ. ತನಗೆ ಮದ್ವೆಯಾಗಿರುವ ವಿಷ್ಯವನ್ನೇ ಮುಚ್ಚಿಟ್ಟು ಶ್ರೀಮಂತ ಯುವಕನ ಬಲೆಗೆ ಬೀಳುತ್ತಾಳೆ. ಆತ ಮೋಸಗಾರ ಎಂದು ತಿಳಿದ ಮೇಲೆ ಗಂಡನೇ ಸರ್ವಸ್ವ ಎಂದು ತಿಳಿಯುತ್ತದೆ. ಆದರೆ ಅದಾಗಲೇ ಗಂಡ ಮನಸ್ಸು ಬದಲಿಸಿರುವ ಕಾರಣ, ಈಗ ಗಂಡನ ಪ್ರೀತಿ ಪಡೆಯಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾಳೆ ದಿವ್ಯಾ.
ದಿವ್ಯಾಳ ಪಾತ್ರವನ್ನು ವಿಭಿನ್ನ ಶೇಡ್ಗಳಲ್ಲಿ ತೋರಿಸುತ್ತಲೇ ಎಲ್ಲರ ಮನಸ್ಸನ್ನು ಗೆದ್ದವರು ಪ್ರಿಯಾಂಕಾ ಶಿವಣ್ಣ. ಇಂದು ಅಮದರೆ ಜೂನ್ 17 ಪ್ರಿಯಾಂಕಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 1994ರಲ್ಲಿ ಜೂನ್ 17 ರಂದು ಬೆಂಗಳೂರಿನಲ್ಲಿ ಜನಿಸಿದ ಪ್ರಿಯಾಂಕಾ ಶಿವಣ್ಣ ಇಂದು 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇವರು ತೆಲುಗು ಸೀರಿಯಲ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡಿಗರಿಗೆ ಪರಿಚಯವಾದದ್ದು ಅಗ್ನಿಸಾಕ್ಷಿಯ ವಿಲನ್ ಪ್ರಿಯಾಂಕಾ ಮೂಲಕ. ಮೊದಲು ಈ ಪಾತ್ರದಲ್ಲಿ ನಟಿಸುತ್ತಿದ್ದಾಕೆ ಅರ್ಧಕ್ಕೆ ಬಿಟ್ಟಾಗ ಆ ಅವಕಾಶ ಪ್ರಿಯಾಂಕಾ ಅವರಿಗೆ ಒದಗಿ ಬಂತು. ಈ ಸೀರಿಯಲ್ನಲ್ಲಿ ನೆಗೆಟಿವ್ ರೋಲ್ ಮೂಲಕ ಎಲ್ಲರ ಮನೆ ಮಾತಾದರು ಪ್ರಿಯಾಂಕಾ. ಇದೀಗ ಸತ್ಯ ಸೀರಿಯಲ್ನಲ್ಲಿಯೂ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಸತ್ಯ ಸೀರಿಯಲ್ ಬಾಲ: ಇನ್ಫೋಸಿಸ್ ನೌಕರಿ ಬಿಟ್ಟು ನಟನೆಗೆ ಬಂದದ್ದೇ ರೋಚಕ...
ಅಷ್ಟಕ್ಕೂ ಪ್ರಿಯಾಂಕಾ ಅವರು ಅಗ್ನಿಸಾಕ್ಷಿಯಲ್ಲಿ ವಿಲನ್ ಮಾಡುತ್ತಿದ್ದ ಸಮಯದಲ್ಲಿ ಇವರ ವಿರುದ್ಧ ಸಿಕ್ಕಾಪಟ್ಟೆ ಜನ ಕಮೆಂಟ್ ಮಾಡುತ್ತಿದ್ದರು. ಸೀರಿಯಲ್ಗಳು ಅಂದ್ರೆ ಹಾಗೆ ಅಲ್ವೆ? ಇವರು ಸೀರಿಯಲ್ ಪಾತ್ರಧಾರಿಗಳು ಅನ್ನೋದನ್ನು ಮರೆತು ನಿಜ ಜೀವನದ ವಿಲನ್ ರೀತಿ ನೋಡುತ್ತಾರೆ. ಹೊರಗಡೆ ವಿಲನ್ ಪಾತ್ರಧಾರಿಗಳು ಹೋದಾಗ ಅವರಿಗೆ ಸಾಕಷ್ಟು ಹೆಣ್ಣುಮಕ್ಕಳು ಬೈಯುವುದೂ ಇದೆ. ಅದೇ ರೀತಿ, ಪ್ರಿಯಾಂಕಾ ಅವರಿಗೂ ಸಾಕಷ್ಟು ನೆಗೆಟಿವ್ ಕಮೆಂಟ್ ಬರುತ್ತಿದ್ದಾಗ ಆರಂಭದಲ್ಲಿ ತುಂಬಾ ಅಳುತ್ತಿದ್ದರಂತೆ. ಈ ವಿಷಯವನ್ನು ಹಿಂದೊಮ್ಮೆ ಸಂದರ್ಶನದಲ್ಲಿ ನಟಿ ಹೇಳಿಕೊಂಡಿದ್ದರು. ಆದರೆ ಇದೀಗ ಅದು ರೂಢಿಯಾಗಿದೆ.
ಅಗ್ನಿಸಾಕ್ಷಿ, ತೆಲುಗಿನ ಕೃಷ್ಣ ತುಳಸಿ, ತಮಿಳಿನ ಪಿರಿಯಾದ್ ವರಂ ವೆಂಡಂ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದು, ಜೂಮ್ ಹಾಗೂ ಫ್ಯಾಂಟಸಿ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 500ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಇವರು ಮಾಡೆಲ್ ಕೂಡ. ಹಲವು ಪ್ರಸಿದ್ಧ ಬ್ರಾಂಡ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ಇವರ ಶಿಕ್ಷಣದ ಕುರಿತು ಹೇಳುವುದಾದರೆ, ಬೆಂಗಳೂರಿನ ಕೇಂಬ್ರಿಡ್ಜ್ ಗಲ್ಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಳಿ ಅಳ್ವಾಸ್ ಕಾಲೇನಲ್ಲಿ ಓದಿರುವ ಪ್ರಿಯಾಂಕಾ, ಎಸ್‌ಡಿಎಂ ಕಾಲೇಜಿನಿಂದ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಯಾಗಿಯೂ ಅವರು ಭಾಗವಹಿಸಿದ್ದರು. 2013ರಲ್ಲಿ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಕಾಲಿರಿಸಿದ ಇವರು ಇದೀಗ ಸೀರಿಯಲ್‌ಗಳಲ್ಲಿ ಸಕತ್ ಡಿಮಾಂಡ್ ಇರುವ ನಟಿ. 19 ವರ್ಷಕ್ಕೆ ಮಾಡೆಲಿಂಗ್ ಆರಂಭಿಸಿದ ಪ್ರಿಯಾಂಕಾಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ಒಳ್ಳೆ ಬ್ರೇಕ್ ನೀಡಿದೆ.
ಗಟ್ಟಿಮೇಳ-ಪಾರು ಸೀರಿಯಲ್ ಜೋಡಿ ಸೂಪರ್ ರೀಲ್ಸ್: ನಿವೇದಿತಾ ಹೆಸ್ರು ಎಳೆದು ತರೋದಾ ನೆಟ್ಟಿಗರು?