
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಗಟ್ಟಿಮೇಳ (Gattimela) ಮತ್ತು ಪಾರು (Paaru) ಸೀರಿಯಲ್ಗಳು ಈಗ ಮುಕ್ತಾಯಗೊಂಡಿದ್ದರೂ ಸೀರಿಯಲ್ ಪ್ರೇಮಿಗಳು ಈ ಧಾರಾವಾಹಿಗಳನ್ನು ಇನ್ನೂ ಮರೆತಿಲ್ಲ. ಗಟ್ಟಿಮೇಳ ಧಾರಾವಾಹಿಯ ಅದಿತಿ ಪಾತ್ರ ಹಾಗೂ ಪಾರು ಧಾರಾವಾಹಿಯ ಪ್ರೀತು ಪಾತ್ರವನ್ನು ಜನ ಮೆಚ್ಚಿಕೊಂಡಿದ್ದರು. ಈ ಧಾರಾವಾಹಿಗಳಲ್ಲಿ ಬೇರೆ ಬೇರೆಯವರ ಪತಿ-ಪತ್ನಿಯಾಗಿ ನಟಿಸಿದ್ದ ಜೋಡಿ ಕಳೆದ ವರ್ಷದ ಅಂದ್ರೆ 2023ರ ಫೆಬ್ರುವರಿ 12ರಂದು ಹಸೆಮಣೆಯೇರಿದ್ದಾರೆ. ಅದಿತಿ ಅರ್ಥಾತ್ ನಟಿ ಪ್ರಿಯಾ ಜೆ.ಆಚಾರ್ (Priya J Achar) ಹಾಗೂ ಪ್ರೀತು ಅರ್ಥಾತ್ ಸಿದ್ದು ಮೂಲಿಮನಿ (Siddu Moolimani) ದಾಂಪತ್ಯ ಬದುಕಿಗೆ ಕಾಲಿಟ್ಟು ಒಂದೂವರೆ ವರ್ಷವಾಗುತ್ತಾ ಬಂದಿದ್ದು, ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಈ ಜೋಡಿ ಒಟ್ಟಾಗಿ ಹ್ಯಾಪ್ಪಿ ಬರ್ತ್ಡೇ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಮಿನಿ ಡ್ರೆಸ್ನಲ್ಲಿ ಪ್ರಿಯಾ ಹಾಗೂ ಷಾರ್ಟ್ಸ್ನಲ್ಲಿ ಸಿದ್ದು ಮಿಂಚಿದ್ದಾರೆ.
ಈ ಜೋಡಿಯ ರೀಲ್ಸ್ಗೆ ಸಕತ್ ಕಮೆಂಟ್ಸ್ ಬರುತ್ತಿವೆ. ಆದರೆ ರೀಲ್ಸ್ ಎಂದರೆ ಅದರಲ್ಲಿಯೂ ಕಿರುತೆರೆ ಕಲಾವಿದರ ರೀಲ್ಸ್ ಎಂದಾಕ್ಷಣ ನೆಟ್ಟಿಗರ ಗಮನ ಹೋಗುವುದು ನಿವೇದಿತಾ ಗೌಡ ಎಂದು ಎನ್ನಿಸುತ್ತಿದೆ. ಏಕೆಂದರೆ ಇಲ್ಲಿ ಪ್ರಿಯಾ ದಂಪತಿ ರೀಲ್ಸ್ ಮಾಡಿದರೆ, ಇಲ್ಲಿಯೂ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿಯರವನ್ನೇ ಎಳೆದು ತಂದಿದ್ದಾರೆ ಅಭಿಮಾನಿಗಳು. ತುಂಬಾ ಚೆನ್ನಾಗಿದ್ದಂತೆ ತೋರಿದ್ದ ನಿವೇದಿತಾ ಮತ್ತು ಚಂದನ್ ಜೋಡಿ ವಿಚ್ಛೇದನದ ಶಾಕಿಂಗ್ ಸುದ್ದಿ ಕೊಟ್ಟದ್ದನ್ನು ಇನ್ನೂ ಅಭಿಮಾನಿಗಳ ಅರಗಿಸಿಕೊಳ್ಳುವಂತೆ ಕಾಣುತ್ತಿಲ್ಲ. ಇದಕ್ಕಾಗಿಯೇ ಪ್ರಿಯಾ ಮತ್ತು ಸಿದ್ದು ಅವರಿಗೆ ಬುದ್ಧಿ ಹೇಳಿದ್ದಾರೆ ನೆಟ್ಟಿಗರು. ನೀವು ಬೇಗ ಮಗು ಮಾಡಿಕೊಳ್ಳಿ, ಇಲ್ಲಾಂದ್ರೆ ನಿವೇದಿತಾ ರೀತಿಯೇ ಆಗತ್ತೆ ಎಂದು ಹೇಳುವ ಮೂಲಕ ಅವರ ಡಿವೋರ್ಸ್ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ಸಮರ್ಥ್ ಅಭಿನಯಕ್ಕೆ ಕಣ್ಣೀರಾದ ಅಭಿಮಾನಿಗಳು: ಕಣ್ಣಲ್ಲೇ ಮೋಡಿ ಮಾಡುವ ನಟನಿಗೆ ಮನಸೋತ ಫ್ಯಾನ್ಸ್
ಇನ್ನು ಪ್ರಿಯಾ ಮತ್ತು ಸಿದ್ದು ಕುರಿತು ಹೇಳುವುದಾದರೆ, ಪ್ರಿಯಾ ದಾವಣಗೆರೆಯವರು. ಪ್ರೀತು ಬೆಂಗಳೂರಿನವರು. ಡ್ಯಾನ್ಸ್ ಶೋ ಒಂದರಲ್ಲಿ ಪರಿಚಿತರಾದ ಸಿದ್ದು ಹಾಗೂ ಪ್ರಿಯಾ ಜೆ ಆಚಾರ್ ಅವರು ಆ ನಂತರ ʻಧಮಾಕ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 2-3 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ಇಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ರಹಸ್ಯವಾಗಿಯೇ ಇಟ್ಟಿದ್ದರು. ಇವರ ನಿಶ್ಚಿತಾರ್ಥದ ದಿನ ಬಹಿರಂಗವಾಗಿ ದೊಡ್ಡ ಸುದ್ದಿಯಾಗಿತ್ತು. ಪ್ರಿಯಾ ಅವರು ಯುಟ್ಯೂಬ್ ಒಂದನ್ನು ನಡೆಸುತ್ತಿದ್ದಾರೆ. ದಿನಚರಿ, ಹಬ್ಬ, ಫ್ಯಾಷನ್ ಅಡುಗೆ ಹೀಗೆ ವಿಭಿನ್ನ ಕಾನ್ಸೆಪ್ಟ್‌ಗಳನ್ನು ವೀಕ್ಷಕರ ಜತೆ ಹಂಚಿಕೊಳ್ಳುತ್ತಿರುತ್ತಾರೆ.
ಸಿದ್ದು ಮೂಲಿಮನಿ ಕೂಡ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇವರ ಮೊದಲ ಸಿನಿಮಾ ರಂಗಿತರಂಗ. ಈ ಸಿನಿಮಾಗೆ ಸಿದ್ದು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ನಂತರ 'ಕೃಷ್ಣ ರುಕ್ಕು', 'ಒನ್ಸ್ ಮೋರ್ ಕೌರವ' ಸಿನಿಮಾಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ತೆರೆಕಂಡ 'ಟೋರ ಟೋರ' ಚಿತ್ರದಲ್ಲಿ ಅಭಿನಯಿಸಿದ್ದರು. 2018ರಲ್ಲಿ ಇವರ 'ಲಂಬೋದರ' ಚಿತ್ರ ತೆರೆ ಕಂಡಿದೆ. ಅನುಪ್ ಭಂಡಾರಿ ಅವರ 'ರಾಜರಥ' ಸಿನಿಮಾದಲ್ಲೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಳಿಕ 'ವಿಕ್ರಾಂತ್ ರೋಣ', 'ಲಂಬೋದರ' ಹಾಗೂ 'ಬಸವನಗುಡಿ ಬೆಂಗಳೂರು', 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸೇರಿದಂತೆ ಈಚೆ ಬಿಡುಗಡೆಗೊಂಡ ಅಭಿರಾಮಚಂದ್ರ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಮಹಾನಟಿ ಫೈನಲ್ಗೂ ಮುನ್ನವೇ ವಿನ್ನರ್ ಘೋಷಿಸಿದ ಅಭಿಮಾನಿಗಳು! ಅಬ್ಬಬ್ಬಾ ಎಂಥ ಪ್ರತಿಭೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.