
ಜೀ ಕನ್ನಡ ಚಾನೆಲ್ನಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್ ಧಾರಾವಾಹಿಯಲ್ಲಿನ ಅಮುಲ್ ಬೇಬಿಯ (Amul Baby) ಮುಗ್ಧತೆ ಬಗ್ಗೆ ಹೇಳಬೇಕಾಗಿಲ್ಲ. ಮುಗ್ಧ ಹುಡುಗನಾಗಿ, ಅಮ್ಮನ ಮುದ್ದಿನ ಮಗನಾಗಿ ಅಭಿನಯಿಸುತ್ತಿದ್ದಾರೆ. ತಮ್ಮ ನಟನೆ ಮೂಲಕ ಜನರಿಗೆ ಹತ್ತಿರವಾಗ್ತಿರೋ ಕಾರ್ತಿಕ್ ಕ್ಯೂಟ್ ನಗು ಎಂದರೆ ಎಲ್ಲರಿಗೂ ಬಹಳ ಇಷ್ಟ ಎಂದೇ ಹೇಳಬೇಕು. ಚಿಕ್ಕಮಕ್ಕಳಂತೆ ಮುದ್ದು ಮುದ್ದಾಗಿ ನಗುತ್ತಾ ಧಾರಾವಾಹಿಯಲ್ಲಿ ಎಲ್ಲರನ್ನೂ ಮರಳುಗೊಳಿಸುತ್ತಾರೆ ಇವರು. ಪತ್ನಿ ಸತ್ಯ ಬಾಯಲ್ಲಿ ಕಾರ್ತಿಕ್ ಪ್ರೀತಿಯ ಹೆಸರು ಅಮುಲ್ ಬೇಬಿ. ಈ ಪಾತ್ರಕ್ಕೆ ತಕ್ಕಂತೆ ಮುಗ್ಧ ಮುಖ ಹೊಂದಿರೋ ಕಾರ್ತಿಕ್ ನಿಜವಾದ ಹೆಸರು ಸಾಗರ್ ಬಿಳಿಗೌಡ. ಅಂದಹಾಗೆ ಕಾರ್ತಿಕ್ ಅವರು ಸಾಫ್ಟವೇರ್ (Software) ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಬಳಿಕ ಕೆಲಸ ಬಿಟ್ಟು ಧಾರಾವಾಹಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ.
ಇವರಿಗೆ ಮೊನ್ನೆ ತಾನೇ ನಡೆದ ಜೀ ಕುಟುಂಬ ಅವಾರ್ಡ್ಸ್ನಲ್ಲಿ ನೆಚ್ಚಿನ ಅಳಿಯ ಪ್ರಶಸ್ತಿ ಕೂಡ ಲಭಿಸಿದೆ. ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ, ಸಾಗರ್ ಅವರು ತೆಲುಗು ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಸತ್ಯ ಧಾರಾವಾಹಿಗೂ ಮೊದಲು ಅವರು, 'ಕಿನ್ನರಿ', 'ಮನಸಾರೆ'ಯಲ್ಲಿಯೂ ನಟಿಸಿದ್ದರು. ಇದೀಗ ತೆಲುಗಿನ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಒಂಟರಿ ಗುಲಾಬಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಶೇರ್ ಮಾಡಿಕೊಂಡಿದ್ದಾರೆ. 'ಒಂಟರಿ ಗುಲಾಬಿ' ಧಾರಾವಾಹಿಯಲ್ಲಿ ನಾಯಕ ಬಾಲು ಪಾತ್ರದಲ್ಲಿ ರಾಹುಲ್ ರವಿ ಅಭಿನಯಿಸುತ್ತಿದ್ದಾರೆ. ಆದರೆ ಅವರು ನಾಯಕನ ರೋಲ್ನಿಂದ ಹೊರಕ್ಕೆ ಹೋಗಿದ್ದು, ಅವರ ಜಾಗಕ್ಕೆ ಸಾಗರ್ ಅವರು ಎಂಟ್ರಿ ಕೊಡಲಿದ್ದಾರೆ.
ಭಾರತಕ್ಕೆ ಗುಡ್ಬೈ ಹೇಳ್ತಾರಾ ನಟಿ ಪ್ರಿಯಾಂಕಾ ಚೋಪ್ರಾ? ಮುಂಬೈ ಬಂಗ್ಲೆ ಸೇಲ್!
ಇನ್ನು ಸಾಗರ್ ಅವರ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ, ಕಳೆದ ಜನವರಿ 20ರಂದು ಸಾಗರ್ ಅವರು ಸಿರಿ ಎನ್ನುವವರ ಜೊತೆ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಮದುವೆಗೆ ಕೆಲ ದಿನಗಳ ಮುಂಚೆಯಷ್ಟೇ ಫೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದ್ದರು. ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಹಸೆಮಣೆ ಏರಿದೆ. ಸಿರಿ ರಾಜು ಕೂಡ ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಇನ್ನು ಕೆಲವು ವೆಬ್ ಸೀರೀಸ್ ಗಳಲ್ಲೂ ನಟಿಸಿದ್ದಾರೆ.
ಧಾರಾವಾಹಿಯಲ್ಲಿ ನಟರಾಗಲು ಬಂದು ಬೇಸರದಿಂದ ಖಿನ್ನತೆಗೆ ಜಾರುವ ಯುವಕರ ಬಗ್ಗೆ ಮಾತನಾಡಿದ್ದ ಸಾಗರ್ ಅವರು, ನಟನಾಗುವ ಕನಸು ಹೊತ್ತು ತುಂಬಾ ಮಂದಿ ಆಡಿಷನ್ಗೆ ಹೋಗುತ್ತಾರೆ. ಅಲ್ಲಿ ಸೆಲೆಕ್ಟ್ ಆಗಿಲ್ಲ ಎಂದರೆ ಬೇಸರಪಟ್ಟುಕೊಳ್ಳುತ್ತಾರೆ. ಆದರೆ ಇದು ಸರಿಯಲ್ಲ. ಆ್ಯಕ್ಟರ್ ಆಗುವ ಆಸೆ ಹೊಂದಿರುವವರು ಮೊದಲು ಆ್ಯಕ್ಟಿಂಗ್ ಮಾಡುವುದನ್ನು ಕಲಿಯಬೇಕು. ಅವಕಾಶಗಳು ತುಂಬಾ ಇರುತ್ತವೆ. ಎಲ್ಲಿಯಾದರೂ ಅವಕಾಶ ಸಿಕ್ಕೇ ಸಿಗುತ್ತದೆ ಎಂದಿದ್ದರು. ಇದೇ ವೇಳೆ ಸತ್ಯ ಸೀರಿಯಲ್ನಲ್ಲಿ ತಾವು ಕ್ಯೂಟ್ ಆಗಿ ನಗಲು ಪಟ್ಟ ಶ್ರಮದ ಬಗ್ಗೆಯೂ ಮಾಹಿತಿ ಶೇರ್ ಮಾಡಿಕೊಂಡಿದ್ದರು. ನಿರ್ದೇಶಕರು ಕ್ಯೂಟ್ ಆಗಿ ನಗಲು ಹೇಳಿದ್ದಂತೆ. ಆದರೆ ಕ್ಯೂಟ್ ಹೇಗೆ ಎನ್ನುವುದೇ ತಮಗೆ ತಿಳಿದಿಲ್ಲ ಎಂದು ಸಾಗರ್ ಹೇಳಿದ್ದರು. ತಾವು ಹೇಗೆಲ್ಲಾ ನಕ್ಕು ತೋರಿಸಿದ್ರೂ ಅದು ಕ್ಯೂಟ್ ಎನಿಸಿರಲಿಲ್ಲ. ಆಮೇಲೆ ಕ್ಯೂಟ್ ಆಗಿ ನಗೋದು ಹೇಗೆ ಅಂತಾನೇ ಗೊತ್ತಾಗ್ತಿಲ್ಲ ಎಂದೆ. ನಂತರ ನಿರ್ದೇಶಕರು ಮಗುವನ್ನು ನೋಡಿ, ಅದಕ್ಕೆ ತಾನು ಯಾಕೆ ನಗ್ತೇನೆ ಅಂತಾನೇ ಗೊತ್ತಿರಲಿಲ್ಲ. ಅದರಲ್ಲಿ ಮುಗ್ಧತೆ, ಕ್ಯೂಟ್ನೆಸ್ ಇರುತ್ತದೆ. ಅದನ್ನು ನೋಡಿ ಹಾಗೆಯೇ ನಗಬೇಕು ಎಂದಾಗ ನಾನು ಪ್ರಾಕ್ಟೀಸ್ ಮಾಡಿಕೊಂಡೆ ಎಂದಿದ್ದರು.
ಭೂತ-ಪ್ರೇತಗಳ ದ್ವೀಪದಲ್ಲಿ ಡಾ.ಬ್ರೋ! ಹತ್ರ ಹೋದ್ರೆ ಅಲ್ಲೇ ಮಿಸ್ಸಿಂಗ್, ವಾಪಸಾಗೋ ಮಾತೇ ಇಲ್ಲ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.