ಸೊಂಟದ ವಿಸ್ಯ, ಬೇಡವೋ ಸಿಸ್ಯ ಅಂತಿದ್ದಾರೆ ಸಾರಾ ಅಣ್ಣಯ್ಯ!

Published : Oct 23, 2022, 12:05 PM IST
ಸೊಂಟದ ವಿಸ್ಯ, ಬೇಡವೋ ಸಿಸ್ಯ ಅಂತಿದ್ದಾರೆ ಸಾರಾ ಅಣ್ಣಯ್ಯ!

ಸಾರಾಂಶ

ಸಾರಾ ಅಣ್ಣಯ್ಯ ಮತ್ತೊಮ್ಮೆ ಹುಡುಗರ ಮೈ ಬೆಚ್ಚಗಾಗಿಸಿದ್ದಾರೆ. 'ಸೊಂಟದ ವಿಸ್ಯ ಬ್ಯಾಡವೋ ಸಿಸ್ಯ' ಅನ್ನುತ್ತಾ ಸೊಂಟ ಬಳುಕಿಸಿದ್ದಾರೆ. ಅವರ ಈ ಹಾಟ್ ಲುಕ್‌ ರೀಲ್ಸ್‌ ನೋಡಿ ಫ್ಯಾನ್ಸ್ ಸೊಂಟ ಸೂಪರ್ ನೀವೂ ಸೂಪರ್ ಅಂದಿದ್ದಾರೆ.  

ಸಾರಾ ಅಣ್ಣಯ್ಯ ಕನ್ನಡತಿ ಸೀರಿಯಲ್‌ನ ವರೂಧಿನಿ ಅಂತಲೇ ಫೇಮಸ್. ಈ ನಟಿ ಹುಣಸೂರಿನವರು. ಅವರನ್ನು ಬಹಳ ಮಂದಿ ಕೊಡಗಿನ ಬೆಡಗಿ ಅಂತ ತಪ್ಪು ತಿಳಿದಿದ್ರು. ಸಾರಾ ವರೂಧಿನಿ ಪಾತ್ರದಂತೆ ಸ್ವತಂತ್ರ ಮನಸ್ಸಿನ ಹುಡುಗಿ. ಆದರೆ ವರೂ ಥರ ಹುಡುಗರ ತಂಟೆಗೆ ಹೋಗೋದು, ಅವರ ಬಳಿ ಗೋಗರೆಯೋ ಥರ ಎಲ್ಲ ಅಲ್ಲವಂತೆ. ಸಾರಾ ಅಣ್ಣಯ್ಯ ಇದೀಗ ಸುದೀಪ್‌ ಅಭಿನಯದಲ್ಲಿ ಸಖತ್‌ ಫೇಮಸ್ ಆಗಿದ್ದ ಚಂದು ಚಿತ್ರದ ಸೊಂಟದ ವಿಸ್ಯ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಸಾರಾ ಅವರ ಈ ಇನ್‌ಸ್ಟಾ ರೀಲ್ಸ್‌ ನೋಡಿ ಅವರ ಫ್ಯಾನ್ಸ್ ಬೆಂಕಿಯ ಇಮೋಜಿ ಹಾಕಿದ್ದಾರೆ. ನೇರ ಮಾತು, ನೇರ ನಡೆಗಳಿಂದ ಗಮನ ಸೆಳೆಯೋ ಈ ಕಲಾವಿದೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿದ್ದಾರೆ. ಆದರೆ ಇವರದು ಸಖತ್ ಪಾಸಿಟಿವ್ ಮೈಂಡ್‌. ಕೆಲವೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಾರಾ ಹಾಟ್ ಲುಕ್‌ನ, ಸ್ವಿಮ್ ಸೂಟ್‌ನ ಫೋಟೋ ಹಾಕೋದುಂಟು. ಅದನ್ನು ನೋಡಿ ಸರಿಯಾಗಿ ಬಟ್ಟೆ ಹಾಕ್ಕೊಳಮ್ಮಾ ಅಂತ ಜನ ಕಮೆಂಟ್ ಮಾಡೋದುಂಟು. ಆದರೆ ಕೆಲಸವಿಲ್ಲದ ಜನ ಮಾಡೋ ಇಂಥಾ ಕಮೆಂಟ್ಸ್ ಗೆಲ್ಲ ಸಾರಾ ತಲೆ ಕೆಡಿಸಿಕೊಳ್ಳೋದಿಲ್ಲ. 'ನನ್ನ ಬಟ್ಟೆ ನನ್ನ ಇಷ್ಟ. ಅದಕೆಲ್ಲ ಕೆಟ್ಟದಾಗಿ ಕಮೆಂಟ್‌ ಮಾಡುತ್ತಲೋ, ಸರಿಯಾಗಿ ಬಟ್ಟೆ ಹಾಕೊಳಮ್ಮಾ ಅಂತ ಬಿಟ್ಟಿ ಉಪದೇಶ ನೀಡುತ್ತಲೋ ನಿಮ್ಮ ಎನರ್ಜಿ ವೇಸ್ಟ್ ಮಾಡಬೇಡಿ. ನೀವೆಷ್ಟೇ ಬಾಯ್ ಬಾಯ್ ಬಡ್ಕೊಂಡ್ರೂ ನನ್ನಿಷ್ಟದ ಬಟ್ಟೆಯನ್ನೇ ನಾನು ಹಾಕೋದು' ಅಂತ ಸಾರಾ ಒಂದೇ ಮಾತಿನಲ್ಲಿ ಇಂಥವರ ಬಾಯಿ ಮುಚ್ಚಿಸುತ್ತಾರೆ.

 

ಪ್ರವಾಸದ ಕಾರಣ ಸಾರಾ ಒಂದಿಷ್ಟು ದಿನ ಕನ್ನಡತಿ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಸಾನ್ಯಾ ಮುಖ ನೋಡಿ ನೋಡಿ ಸಾಕಾಯ್ತು, ವರೂ ಯಾಕೆ ಬಂದೇ ಇಲ್ಲ.. ಅಂತ ಜನ ಮಾತಾಡಿಕೊಳ್ಳೋ ಹೊತ್ತಲ್ಲೇ ಮತ್ತೆ ವರೂ ಎಂಟ್ರಿ ಆಗಿದೆ. ಸೀರಿಯಲ್‌ನಿಂದ ವರೂ ಒಂದಿಷ್ಟು ಸಮಯ ಬ್ರೇಕ್ ತಗೊಂಡಿದ್ದಾರೆ. ಈ ಬ್ರೇಕ್‌ನಲ್ಲಿ ಉತ್ತರ ಭಾರತ ಪ್ರವಾಸ ಮಾಡಿದ್ದಾರೆ. ಕಾಶ್ಮೀರದ ಸುಂದರ ಕಣಿವೆಗಳಲ್ಲಿ ಓಡಾಡಿದ್ದಾರೆ. ಕಾಶ್ಮೀರಿ ಚಾಯ್ ಹೀರಿದ್ದಾರೆ. ಸರೋವರಗಳ ಬದಿ ಧ್ಯಾನಸ್ಥರಾಗಿದ್ದಾರೆ. ಅವರು ಪ್ರವಾಸದಲ್ಲಿದ್ದಾಗಲೂ ತಮ್ಮ ಫ್ಯಾನ್ಸ್‌ಗೆ ನಿರಾಸೆ ಮಾಡಿದವರಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಪ್ರವಾಸದ ಫೋಟೋಗಳನ್ನು ಅಪ್‌ಲೋಡ್‌ ಮಾಡುತ್ತಲೇ ಇರುತ್ತಿದ್ದರು. ಇದೀಗ ಪ್ರವಾಸ ಮುಗಿಸಿ ಮತ್ತೆ ವರೂ ಪಾತ್ರದಲ್ಲಿ ಹರ್ಷ ಮತ್ತು ಭುವಿಯನ್ನ ಬೇರ್ಪಡಿಸಲು ಸ್ಕೆಚ್‌ ಹಾಕುತ್ತಿದ್ದಾರೆ. 

Jothe jotheyali: ನೀವ್ಯಾರು ನಂಗೆ? ನಮ್ಮಿಬ್ಬರ ಸಂಬಂಧ ಏನು? ಅನುಗೆ ಆರ್ಯನ ನೇರ ಪ್ರಶ್ನೆ!
ಕಡು ನೀಲಿ ಬಣ್ಣದ ಸ್ಲೀವ್‌ಲೆಸ್‌ ಬ್ಲೌಸ್‌, ಸ್ಕೇಟ್ ಬಣ್ಣದ ಸೀರೆಯನ್ನು ಉಟ್ಟು ಸೊಂಟ ಕುಣಿಸಿರೋ ವರೂ ಸ್ಟೈಲ್‌ಗೆ ಬೆಂಕಿ ಇಮೋಜಿ ಹಾಕಿದವರೇ ಹೆಚ್ಚು. ಈ ಮುದ್ದು ವಿಲನ್‌ ಸೀರಿಯಲ್‌ನಲ್ಲಿ ಭುವಿಗೆ ಕಷ್ಟ ಕೊಡೋದು ನೋಡಿ ಸಿಟ್ಟು ಮಾಡಿಕೊಂಡವರೂ ಮುನಿಸು ಮರೆತು ಸಾರಾಗೆ ಮೆಚ್ಚುಗೆಯ ಮಾತು ಹಾಕಿದ್ದಾರೆ. ಅವರ ಈ ರೀಲ್ ಸಖತ್ ಫೇಮಸ್ ಆಗ್ತಿದೆ. 
ಇನ್ನೊಂದೆಡೆ ಸೀರಿಯಲ್‌ನಲ್ಲಿ ಸಾನ್ಯಾ ಹಲ್ಲು ಮಸೆಯೋದು ಸಾಲ್ದು ಅಂತ ವರೂ ಡಿವೋರ್ಸ್ ಪೇಪರ್ ಕೆಲಸ ಶುರುವಾಗಿದೆ. ಹಾಗೆ ನೋಡಿದರೆ ಭುವಿ ಮತ್ತು ವರೂಧಿನಿ ಬೆಸ್ಟ್ ಫ್ರೆಂಡ್. ಯಾವಾಗಲೂ ಒಬ್ಬರಿಗೊಬ್ಬರು ಕೇರ್ ಮಾಡಿಕೊಳ್ತಾರೆ. ವರೂಧಿನಿ ಬಗ್ಗೆ ಯಾವಾಗಲೂ ಭುವಿ ಚಿಂತೆ ಮಾಡ್ತಾ ಇರ್ತಾಳೆ. ಆದ್ರೆ ವರುಗೆ ತನ್ನ ಗೆಳತಿ ಭುವಿಯೂ ಬೇಕು, ತನ್ನ ಹೀರೋ ಹರ್ಷನೂ ಬೇಕು. ಅವರಿಬ್ಬರೂ ಮದುವೆ ಆದರೂ ಅವರನ್ನು ಬೇರ್ಪಡಿಸಬೇಕು ಅನ್ನೋದು ಮನಸ್ಸಿಂದ ಹೋಗಿಲ್ಲ.  ಭುವಿ-ಹರ್ಷ ಮದುವೆ ರಿಜಿಸ್ಟ್ರೇಶನ್ ನೆಪದಲ್ಲಿ, ಡಿವೋರ್ಸ್ ಪೇಪರ್​ಗೆ ಸಹಿ ಹಾಕಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾಳೆ. ಹೀರೋ ಜೊತೆ ನಾನು ಇರಬೇಕು. ನನ್ನ ಬೆಸ್ಟ್ ಫ್ರೆಂಡ್ ಅಲ್ಲ ಎಂದು ಹೇಳಿಕೊಳ್ತಿದ್ದಾಳೆ. 
ಮುಂದೆ ವರೂ ಆಗಮನದಿಂದ ಹರ್ಷ ಭುವಿ ಬೇರ್ಪಡುತ್ತಾರ, ಅವರ ಪ್ರೀತಿ ಇನ್ನೂ ಗಟ್ಟಿಯಾಗುತ್ತಾ ನೋಡಬೇಕು, ಸದ್ಯಕ್ಕಂತೂ ಇವರಿಬ್ಬರ ಫೋಟೋಶೂಟ್‌ಗೆ ವರೂ ಪ್ಲಾನ್‌ ಮಾಡಿಸಿದ್ದಾಳೆ. ಈ ಫೋಟೋಶೂಟ್‌ ನೆವದಲ್ಲಿ ಇನ್ನೇನು ಬೆಂಕಿ ಹಚ್ಚೋದಿದ್ಯೋ, ಹರ್ಷ ಭುವಿಗೆ ಡಿವೋರ್ಸ್ ಕೊಡಿಸಿಯೇ ಬಿಡ್ತಾಳ ಅನ್ನೋ ಆತಂಕ ಪ್ರೇಕ್ಷಕರಲ್ಲಿ ಮನೆ ಮಾಡಿದೆ. 

ರಾಮಾಚಾರಿ: ಸಿದ್ಧಿಮಂಗಲ ದಟ್ಟ ಕಾಡಲ್ಲಿ ಚಾರು, ಮಾನ್ಯತಾ ರಾಮಾಚಾರಿ ಕಾಲು ಹಿಡಿಯೋದೊಂದು ಬಾಕಿ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?