ಸಾನ್ವಿ ಸುದೀಪ್ ತಮ್ಮ ತಂದೆ ಕಿಚ್ಚ ಸುದೀಪ್ ಜೊತೆಗಿನ ಮುದ್ದಾದ ಹಳೆಯ ಫೋಟೊ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸದ್ಯ ಫೋಟೊ ಇಂಟರ್ನೆಟ್ ನಲ್ಲಿ ಸದ್ದು ಮಾಡ್ತಿದೆ.
ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಥ್ರೋ ಬ್ಯಾಕ್ ಫೋಟೊ ಒಂದನ್ನು ಶೇರ್ ಮಾಡಿದ್ದು, ಸದ್ಯ ಈ ಫೋಟೊ ಇಂಟರ್ನೆಟ್ಟಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಾಕಂದ್ರೆ ಈ ಫೋಟೊದಲ್ಲಿ ಕಿಚ್ಚ ತುಂಬಾನೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಾನ್ವಿ, ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೊಗಳನ್ನು, ಅದರಲ್ಲೂ ತಮ್ಮ ಮೋಸ್ಟ್ ಫೇವರಿಟ್ ಆಗಿರುವ ಅಪ್ಪ ಸುದೀಪ್ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆಯೂ ಸಾನ್ವಿ ಒಂದಿಷ್ಟು ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದುಂಟು. ಇದೀಗ ಸಾನ್ವಿ ಸುದೀಪ್ ಜೊತೆಗಿನ ಒಂದು ಬಾಲ್ಯದ ಫೋಟೊವನ್ನು ಶೇರ್ ಮಾಡಿದ್ದಾರೆ. ಈ ಫೋಟೊದಲ್ಲಿ ತುಂಬಾನೆ ಪುಟ್ಟ ಹುಡುಗಿ, ಬಾಯ್ ಕಟ್ ಮಾಡಿ, ಕೈ ಮುಂದೆ ಮಾಡಿ ಪೋಸ್ ಕೊಟ್ಟಿದ್ದಾರೆ. ಈ ಫೋಟೊದ ಮತ್ತೊಂದು ಹೈಲೈಟ್ ಅಂದ್ರೆ ಅದು ಕಿಚ್ಚ ಸುದೀಪ್.
ಮನೆ ಮುಂದೆ ಸೇರಿದ್ದವರ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಸಾನ್ವಿ ಸುದೀಪ್
ಹೌದು ಕಿಚ್ಚ ಸುದೀಪ್ ಕೂಡ ಈ ಫೋಟೊದಲ್ಲಿ ಮಗಳಲ್ಲಿ ಕೈಯಲ್ಲಿ ಮುಖದ ಮುಂದೆ ಹಿಡಿದು, ನಾಲಗೆಯನ್ನು ಹೊರ ಚಾಚಿ, ಮಗಳ ಜೊತೆ ಆಡುತ್ತಿರೋದನ್ನ ಕಾಣಬಹುದು. ಇದೊಂದು ಅಪರೂಪದ ಫೋಟೊ ಆಗಿದ್ದು, ಇದನ್ನ ನೋಡಿ ಅಭಿಮಾನಿಗಳು ತುಂಬಾನೇ ಇಷ್ಟಪಟ್ಟಿದ್ದಾರೆ. ಕಿಚ್ಚ ತುಂಬಾನೆ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. ಹಾಗಾಗಿ ಫ್ಯಾನ್ಸ್ ಕ್ಯೂಟಿ ಪೈ, ಬಾಸ್ ತುಂಬಾನೆ ಕ್ಯೂಟು, ಸುದೀಪಣ್ಣ ಸ್ವೀಟು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಸಾನ್ವಿ ಸುದೀಪ್ ಬಗ್ಗೆ ಹೇಳೋದಾದರೆ ಅವರೀಗ ಡಿಗ್ರಿ ಓದುತ್ತಿದ್ದಾರೆ. ಇದರ ಜೊತೆಗೆ ಸಾನ್ವಿ ಬಾಲ್ಯದಿಂದಲೇ ಸಂಗೀತ ಲೋಕದತ್ತ ಒಲವು ತೋರಿಸಿದ್ದು, ಈಗಾಗಲೇ ತಮ್ಮ ಸಹೋದರ ಸಂಬಂಧಿ ಸಿನಿಮಾಕ್ಕಾಗಿ ಇಂಗ್ಲಿಷ್ ಹಾಡೊಂದನ್ನು ಹಾಡಿದ್ದಾರೆ. ಅಷ್ಟೇ ಅಲ್ಲ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಬ್ಯಾಂಡ್ ಜೊತೆ ತೆರಳಿ ಇವೆಂಟ್ ಗಳನ್ನು ಕೂಡ ನೀಡುತ್ತಿರುತ್ತಾರೆ ಸಾನ್ವಿ. ಇತ್ತೀಚೆಗೆ ಕನ್ಸರ್ಟ್ ಒಂದರಲ್ಲಿ ಸಾನ್ವಿ ಹಾಡಿದ ಕೈಲಾಶ್ ಖೇರ್ ಅವರ ತೇರಿ ದಿವಾನಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಾನ್ವಿಯ ಅದ್ಭುತವಾದ ಕಂಠವನ್ನು ಜನ ಮೆಚ್ಚಿಕೊಂಡಿದ್ದರು.
ಅಪ್ಪ ಸುದೀಪ್ ಜೊತೆ ನಾನು ತೆರೆ ಮೇಲೆ ಕಾಣಿಸಿಕೊಳ್ಳೋದು ನಿಮಗಿಷ್ಟನಾ?: ಸಾನ್ವಿ ಸುದೀಪ್ ಪ್ರಶ್ನೆ?
ಇನ್ನು ಕಿಚ್ಚ ಸುದೀಪ್ ಸದ್ಯ ಬಿಗ್ ಬಾಸ್ ಕಾರ್ಯಕ್ರಮದ ಹೋಸ್ಟ್ ಆಗಿದ್ದಾರೆ. ಇದು ಅವರು ನಡೆಸಿಕೊಡುತ್ತಿರುವ ಕೊನೆಯ ಬಿಗ್ ಬಾಸ್ ಕಾರ್ಯಕ್ರಮ ಕೂಡ ಹೌದು. ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೆ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಇದೇ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ಸುದೀಪ್ ಕೊನೆಯದಾಗಿ ನಾಯಕನಾಗಿ ನಟಿಸಿದ್ದು 2022 ರಲ್ಲಿ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾದಲ್ಲಿ. ಕಳೆದ ಎರಡು ವರ್ಷಗಳಲ್ಲಿ ಒಂದೆರಡು ಸಿನಿಮಾಗಳಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದು ಬಿಟ್ಟರೆ, ಪೂರ್ತಿಯಾಗಿ ನಾಯಕನಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಮ್ಯಾಕ್ಸ್ ಸಿನಿಮಾ ಮೇಲೆ ಜನರಿಗೆ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ.