ಪಾಪಪ್ರಜ್ಞೆಯಂತೂ ಸದಾ ಇರುತ್ತೆ...ಕಣ್ಣೀರಿಟ್ಟು ಅಪ್ಪಿಕೊಂಡ ನನ್ನ ಮಗ; ಕಿರಿಕ್ ಕೀರ್ತಿ ಭಾವುಕ ಪೋಸ್ಟ್‌

Published : Dec 10, 2024, 10:36 AM ISTUpdated : Dec 10, 2024, 10:37 AM IST
ಪಾಪಪ್ರಜ್ಞೆಯಂತೂ ಸದಾ ಇರುತ್ತೆ...ಕಣ್ಣೀರಿಟ್ಟು ಅಪ್ಪಿಕೊಂಡ ನನ್ನ ಮಗ; ಕಿರಿಕ್ ಕೀರ್ತಿ ಭಾವುಕ ಪೋಸ್ಟ್‌

ಸಾರಾಂಶ

ಮಗನಿಗೆ ಕ್ಷಮೆ ಕೇಳಬೇಕು ಎಂದು ಭಾವುಕ ಪೋಸ್ಟ್ ಹಾಕಿದ ಕಿರಿಕ್ ಕೀರ್ತಿ. ಲವಲವಿಕೆಯಿಂದ ಇರದೆ ಇರಲು ಕಾರಣವೇನು?

ಬಿಗ್ ಬಾಸ್ ಸ್ಪರ್ಧಿ, ಅಪ್ಪಟ್ಟ ಕನ್ನಡ ಅಭಿಮಾನಿ, ಆರ್‌ಜೆ ಹಾಗೂ ನಿರೂಪಕನಾಗಿ ಈಗ ಯೂಟ್ಯೂಬ್ ಸ್ಟಾರ್ ಆಗಿರುವ ಕಿರಿಕ್ ಕೀರ್ತಿ ಮಗನನ್ನು ಅಪ್ಪಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಈಗ ಕಿರಿಕ್ ಕೀರ್ತಿ ಕನಸು, ಆಸೆ ಮತ್ತು ಅತಿ ದೊಡ್ಡ ಆಸ್ತೆ ಅವರ ಮಗ ಅವಿಷ್ಕಾರ್. ಆದರೆ ಮಗನೇ ಬೇಸರವಾಗಿದ್ದರೆ ಹೇಗೆ ಖುಷಿಯಾಗಿ ಇರಲು ಸಾಧ್ಯ? 

ಕೀರ್ತಿ ಪೋಸ್ಟ್:

ಯಾಕೋ ಮಗ ಕೆಲ ದಿನದಿಂದ ಲವಲವಕೆಯಿಂದ ಇರಲಿಲ್ಲ... ಅವರ ಸ್ಕೂಲಿಂದಲೂ ಕರೆದು ಅದನ್ನೇ ಹೇಳಿದ್ರು... ಅವನ‌ ಜೊತೆ ಕೂತು ಒಂದು ಗಂಟೆ ಮಾತಾಡಿದೆ.. ಮಾತಾಡ್ದ, ಮೌನವಾದ, ಕಣ್ಣೀರಾದ, ಗಟ್ಟಿಯಾಗಿ ಅಪ್ಪಿಕೊಂಡ... ರಾತ್ರಿ ಇಡೀ ಎದೆಯ ಮೇಲೆಯೇ ಇದ್ದ...  ಆವಿಷ್ಕಾರ್ ನನ್ನ‌ ಪಾಲಿನ ನೋವು ಮರೆಸೋ ಔಷಧ... ನಾನು ಬೇಜಾರಲ್ಲಿದ್ದಾಗ ನನ್ನ ಮಗ ನನಗೆ ತನ್ನ ನಗುವಿನಿಂದ ಸಹಾಯ ಮಾಡ್ತಾನೆ... ಈ ಸಲ ಅದ್ಯಾಕೋ ನನಗೂ ಬೇಸರ, ಅವನಲ್ಲೂ ನಗು ಕಾಣಲಿಲ್ಲ... ಆದ್ರೆ ಮತ್ತೆ ಹಾಗೆಲ್ಲಾ ಬೇಜಾರಾಗಲ್ಲ ಅಂತ ಪ್ರಾಮಿಸ್ ಮಾಡಿದ್ದಾನೆ... ಆದ್ರೂ ನನ್ನೊಳಗೊಂದು ಪಾಪಪ್ರಜ್ಞೆಯಂತೂ ಸದಾ ಇರುತ್ತೆ... ಅವನದಲ್ಲದ ತಪ್ಪಿಗೆ ಅವನು ನೋವು ತಿಂದಿದ್ದಾನೆ... ಅವನನ್ನು ಸಂತೋಷವಾಗಿಡೋದಷ್ಟೇ ನನ್ನ ಧ್ಯೇಯ, ಗುರಿ... ಸಾಕಷ್ಟು ಜನರಿಗೆ ನಾನು ಕ್ಷಮೆ ಕೇಳೋದಿದೆ... ಆದ್ರೆ ನಾನು ನಿಜಕ್ಕೂ ಮನಸಾರೆ ಕ್ಷಮೆ ಕೇಳಬೇಕಿರೋದು ನನ್ನ ಮಗನಿಗೆ... Sorry ಮಗನೇ... Love you ಮಗನೇ... ಅವಿಷ್ಕಾರ್ ಕೀರ್ತಿ. 

ವಯಸ್ಸು ಮೀರುತ್ತಿದೆ ಮದುವೆ ಸೆಟ್ ಆಗ್ತಿಲ್ಲ ಅಂದ್ರೆ ಈ ಮಂತ್ರ ಪಠಿಸಿ; 21 ದಿನಗಳಲ್ಲಿ ನಡೆಯಲಿದೆ ಅಚ್ಚರಿ

ಕೀರ್ತ ಸರ್ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ ನಿಮ್ಮಂತೆ ನಾವು ಕೂಡ ಕಷ್ಟದಲ್ಲಿ ಇದ್ದೀವಿ ಇಲ್ಲಿ ಎರಡು ಪುಟ್ಟ ಕಂದಮ್ಮಗಳು ನೋವಿನಲ್ಲಿ ಇದ್ದಾರೆ. ದೇವರನ್ನು ನಂಬಿ ನಿಮಗೆ ಹಾಗೂ ನಿಮ್ಮ ಮಗನಿಗೆ ಒಳ್ಳಯದನ್ನು ಮಾಡುತ್ತಾನೆ. ನಿಮ್ಮದಲ್ಲದ ತಪ್ಪಿಗೆ ನೋವು ಅನಿಭವಿಸಬೇಕು ಅಂದ್ರೆ ಹೇಗೆ ಆಗುತ್ತದೆ ಹೇಳಿ? ತಪ್ಪು ಮಾಡಿದವರಿಗೆ ದೇವರು ಶಿಕ್ಷೆ ಕೊಡುತ್ತಾನೆ. ದಯವಿಟ್ಟು ಅವಿಷ್ಕಾರನ ಚೆನ್ನಾಗಿ ನೋಡಿಕೊಳ್ಳಿ ಎಂದು ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳು ಧೈರ್ಯ ಹೇಳಿದ್ದಾರೆ.

ಕಾವ್ಯ ಗೌಡ ಗಂಡನ ಮನೆ ನಿಜಕ್ಕೂ ಯಾರಿಗೆ ಸೇರಿದ್ದು? ನೆಟ್ಟಿಗರ ಕೊಂಕು ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನಟಿ!

ಸ್ಟಾರ್ ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲಿ ಕಿರಿಕ್ ಕೀರ್ತಿ ತಮ್ಮ ತಾಯಿ ಮತ್ತು ಮಗನ ಜೊತೆ ಕಾಣಿಸಿಕೊಂಡಿದ್ದರು. 'ಅಪ್ಪ.... ನೀನು ನನಗೆ ಬೇಸ್ಟ್‌ ಅಪ್ಪ, ನಿಮ್ಮ ಜೊತೆ ನಾನು ಸದಾ ಖುಷಿಯಾಗಿ ಇರುತ್ತೀನಿ. ಒಂದೊಂದು ಸಲ ನನಗೆ ಬೈತೀರಾ...ಒಂದೊಂದು ಸಲ ನನ್ನ ಖುಷಿಯನ್ನು ನೋಡುತ್ತೀರಾ. ನೀವು ಬೈದಾಗ ನನಗೆ ಗೊತ್ತಾಗುತ್ತದೆ ನಾನು ಏನು ಮಾಡುತ್ತಿದ್ದೀನಿ ಅಂತ. ನೀವು ಎಷ್ಟು ಬೆಸ್ಟ್‌ ಅಪ್ಪ ಅಂದ್ರೆ ಎಲ್ಲ ಅಪ್ಪಂದಿರಿಗೆ ಹೊಟ್ಟೆ ಕಿಚ್ಚು ಆಗುತ್ತೆ. ನೀವು ಚೆನ್ನಾಗಿದ್ದರೆ ನಾನು ಚೆನ್ನಾಗಿರುತ್ತೀನಿ' ಎಂದು ಅವಿಷ್ಕಾರ್ ಮಾತನಾಡಿರುವ ಧ್ವನಿ ಕೇಳಿಸಿದ್ದಾರೆ. ಈ ಮಾತುಗಳನ್ನು ಕೇಳುತ್ತಿದ್ದಂತೆ ಕೀರ್ತಿ ಮತ್ತು ತಾಯಿ ಭಾವುಕರಾಗಿದ್ದಾರೆ. ತಕ್ಷಣವೇ ಅವಿಷ್ಕಾರ್ ವೇದಿಕೆಯ ಮೇಲೆ ಆಗಮಿಸುತ್ತಾನೆ. ಕೈಯಲ್ಲಿ ತಂದೆಗೆಂದು ಗಿಫ್ಟ್‌ ಕಾರ್ಡ್ ಬರೆದಿದ್ದನ್ನು. ವೇದಿಕೆಯ ಮೇಲೆ ಪತ್ರದಲ್ಲಿ ಏನು ಬರೆದಿದ್ದೀನಿ ಎಂದು ಅವಿಷ್ಕಾರ್ ಓಡಿದ್ದಾನೆ. 'ಹಾಯ್ ಅಪ್ಪ..ನೀನೇ ಬೆಸ್ಟ್‌. ನೀನು ನನಗೆ ಪ್ರತಿಯೊಂದನ್ನು ಪರ್ಫೆಕ್ಟ್ ರೀತಿಯಲ್ಲಿ ಹೇಳಿಕೊಡಿತ್ತೀರಾ..ಕೆಲವೊಮ್ಮೆ ನೀವು ತುಂಬಾ ಬ್ಯುಸಿಯಾಗಿರುತ್ತೀರಾ ಕೆಲವೊಮ್ಮೆ ನೀವು ಫ್ರೀ ಆಗಿರುತ್ತೀರಿ. ನಿಮ್ಮ ಕೆಲಸ ಎಷ್ಟು ಕಷ್ಟ ಇದೆ ಎಂದು ನನಗೆ ಅರ್ಥವಾಗುತ್ತಿದೆ. ನನಗೆ ಒಂದು ಆಸೆ ಇದೆ...ಭಾರತದಿಂದ ಹೊರಗಡೆ ಒಮ್ಮೆ ಪ್ರಯಾಣ ಮಾಡಬೇಕು. ದಯವಿಟ್ಟು ಮನೆಗೆ ಸ್ವಲ್ಪ ಬೇಗ ಬಾ' ಎಂದು ಅವಿಷ್ಕಾರ್ ಹೇಳಿದ್ದಾರೆ. ಅವಿಷ್ಕಾರ್ ಮತ್ತು ಕಿರಿಕ್ ಕೀರ್ತಿ ಬಾಂಡಿಂಗ್ ನೋಡಿ ಪ್ರತಿಯೊಬ್ಬರು ಭಾವುಕರಾಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!