ದೊಡ್ಮನೆಯಿಂದ ಹೊರಬಂದು ತಿಂಗಳಾಯ್ತು.. ಬಿಗ್ ಬಾಸ್ ನೆನಪಿಸಿಕೊಂಡು ಸಂಗೀತಾ ಭಟ್ ಭಾವುಕ ಪೋಸ್ಟ್ !

Published : Nov 12, 2026, 04:05 PM IST
Sangeetha Bhat

ಸಾರಾಂಶ

Bigg Boss Season 13 : ಚಂದನವನದ ನಟಿ ಸಂಗೀತ ಭಟ್ ಬಿಗ್ ಬಾಸ್ ಸೀಸನ್ 13ರ ಮೂಲಕ ಮತ್ತೆ ಸದ್ದು ಮಾಡಿದ್ದರು, ಆದರೆ ಅನಾರೋಗ್ಯದ ಕಾರಣ ದೊಡ್ಮನೆಯಿಂದ ಅರ್ಧಕ್ಕೆ ಹೊರ ಬಂದಿದ್ದ ನಟಿ ಇದೀಗ ಒಂದು ತಿಂಗಳ ಬಳಿಕ ಬಿಗ್ ಬಾಸ್ ಕುರಿತಾದ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.

Bigg Boss Season 13 ಸ್ಪರ್ಧಿ ಸಂಗೀತ ಭಟ್ ಭಾವುಕ ಪೋಸ್ಟ್

ಚಂದನವನದ ಜನಪ್ರಿಯ ನಟಿ ಸಂಗೀತಾ ಭಟ್, ಬಿಗ್ ಬಾಸ್ ಸೀಸನ್ 13ರ ಮೂಲಕ ಮತ್ತೆ ಸದ್ದು ಮಾಡಿದ್ದರು. ತಮ್ಮ ನೇರ ಮಾತು, ಟಾಸ್ಕ್, ಆಟದ ಮೂಲಕವೂ ನಟಿ ಗಮನ ಸೆಳೆದಿದ್ದರು. ಆದರೆ ಅನಾರೋಗ್ಯ ಸಮಸ್ಯೆಯಿಂದ, ನಟಿ ಆಸ್ಪತ್ರೆಗೆ ದಾಖಲಾಗಿ, ಕೊನೆಗೆ ಅರ್ಧದಲ್ಲೇ ಶೋ ಬಿಟ್ಟು ಮನೆಗೆ ವಾಪಾಸ್ ಆಗಿದ್ದರು. ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್‌ ಸಮಯದಲ್ಲಿ ಸ್ಪರ್ಧಿ ಸಂಗೀತಾ ಭಟ್ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ಯಾನಿಟ್ ಅಟ್ಯಾಕ್ ಸಮಸ್ಯೆಯಿಂದಾಗಿ ಕೊನೆಗೆ ನಟಿ, ತಮಗೆ ಆಟಕ್ಕಿಂತ, ಹಣಕ್ಕಿಂತ ತಮ್ಮ ಪ್ರಾಣವೇ ಮುಖ್ಯ ಎಂದುಕೊಂಡು ಗಟ್ಟಿ ನಿರ್ಧಾರ ಮಾಡಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು.

ಭಾವುಕ ಪೋಸ್ಟ್ ಮಾಡಿದ ನಟಿ

ಇದೀಗ ನಟಿ ಸಂಗೀತ ಬಿಗ್ ಬಾಸ್ ಮನೆಯಿಂದ ಹೊರ ಬಂದು ಒಂದು ತಿಂಗಳು ಆಗಿದ್ದು, ಈ ಹಿನ್ನೆಲೆಯಲ್ಲಿ ನಟಿ, ಕೊನೆ ದಿನ ಕೆಲವು ಕ್ಲಿಪ್ಸ್ ಸೇರಿಸಿ, ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಅದರ ಜೊತೆಗೆ ಒಂದಿಷ್ಟು ಮನದಾಳದ ಮಾತುಗಳನ್ನೂ ಹಂಚಿಕೊಂಡಿದ್ದಾರೆ.

“ದೀಪಾವಳಿಯ ಶುಭಾಶಯ ನಾನು ಬಿಗ್ ಬಾಸ್ ಮನೆಯಿಂದ ಹೊರಬಂದು ಇವತ್ತಿಗೆ ಒಂದು ತಿಂಗಳಾಯಿತು. ಮರೆಯಲಾಗದ ಪಯಣಕ್ಕೆ ಮನದಾಳದ ಬೀಳ್ಕೊಡುಗೆ. ಪ್ರೀತಿಯ ಬಿಗ್ಬಾಸ್ ಮನೆಗೆ ನನ್ನ ಪ್ರೀತಿಯ ನಮನ. ಪಯಣ ಚಿಕ್ಕದಾದರೂ, ನಿಮ್ಮಲರಿಂದ ಗಳಿಸಿದ ಪ್ರೀತಿ, ಪ್ರೋತ್ಸಾಹ, ವಿಶ್ವಾಸ, ನೆನಪುಗಳು ನಾನೆಂದು ಮರೆಯಲಾರೆ, ಪ್ರೀತಿಯ ಕನ್ನಡಿಗರಿಗೆ ನನ್ನ ಕೋಟಿ ಕೋಟಿ ನಮನ. ಇನ್ನು ಕೊನೆಯದಾಗಿ ಎಡಿಟಿಂಗ್‌ಗಾಗಿ ಹಾಗೂ ಜೀವನಪೂರ್ತಿ ನನಗೆ ನೀಡಿದ ಸಂತೋಷ, ಪ್ರೀತಿ, ಕಾಳಜಿ ಮತ್ತು ಬೆಂಬಲಕ್ಕಾಗಿ ನನ್ನ ಪ್ರೀತಿಯ ಪತಿ ಸುದರ್ಶನ್ ರಂಗಪ್ರಸಾದ್ ಅವರಿಗೆ ವಿಶೇಷ ಧನ್ಯವಾದಗಳು” ಎಂದು ನಟಿ ಬರೆದುಕೊಂಡಿದ್ದಾರೆ.

ಸಂಗೀತಾ ಭಟ್ ಸಿನಿ ಜರ್ನಿ

ಸಂಗೀತಾ ಭಟ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಅವರು ಸೇರಿ ನಾಲ್ಕು ಜನ ನಾಯಕಿಯರು ನಟಿಸಿರುವ ನಾಕು ತಂತಿ ಸಿನಿಮಾ ರಿಲೀಸ್ ಆಗಿ, ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿತ್ತು. ಇದಲ್ಲದೇ ಸಂಗೀತಾ ಭಟ್ ಡೂ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ಎರಡನೇ ಸಲ, ದಯವಿಟ್ಟು ಗಮನಿಸಿ, ಕಿಸ್ಮತ್, ಅನುಕ್ತಾ, ಅಳಿದು ಉಳಿದವರು, ಕಪಟ ನಾಟಕ ಸೂತ್ರದಾರಿ, ಆಧ್ಯಾ, ಕ್ಲಾಂತಾ, ಕಮಲ್ ಶ್ರೀದೇವಿ ಸಿನಿಮಾಗಳಲ್ಲಿ ಹಾಗೂ ಹಲವಾರು ಕನ್ನಡ ಧಾರಾವಾಹಿಗಳಲ್ಲೂ ಕೂಡ ನಟಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಂದಲ್ಲ, ಎರಡಲ್ಲ…. ಮಕ್ಕಳಾದ ಬಳಿಕ ಬರೋಬ್ಬರಿ 30ಕೆಜಿ ತೂಕ ಇಳಿಸಿ ಬಳುಕುವ ಬಳ್ಳಿಯಾದ ನಟಿ ಐಶ್ವರ್ಯ ವಿನಯ್
'ನಾನು ಸತ್ತಿದ್ದೇನೆಂದು ಸುಳ್ಳು ಸುದ್ದಿ ಹಬ್ಬಿಸಿದರು' ಯೂಟ್ಯೂಬ್‌ನಲ್ಲಿ ಯಶಸ್ಸು, ಬದುಕಲ್ಲಿ ಸಂಕಷ್ಟ; ಕಣ್ಣೀರಿಟ್ಟ ರೇಖಾ ಅಡುಗೆ