ಒಂದಲ್ಲ, ಎರಡಲ್ಲ…. ಮಕ್ಕಳಾದ ಬಳಿಕ ಬರೋಬ್ಬರಿ 30ಕೆಜಿ ತೂಕ ಇಳಿಸಿ ಬಳುಕುವ ಬಳ್ಳಿಯಾದ ನಟಿ ಐಶ್ವರ್ಯ ವಿನಯ್

Published : Nov 12, 2026, 03:23 PM IST
Aishwarya Vinay

ಸಾರಾಂಶ

ಕನ್ನಡ ಕಿರುತೆರೆ ನಟಿ, ಜನಪ್ರಿಯ ವಿಲನ್ ಐಶ್ವರ್ಯ ವಿನಯ್ ಇಬ್ಬರು ಮುದ್ದಾದ ಅವಳಿ ಮಕ್ಕಳ ತಾಯಿಯಾಗಿದ್ದು, ಮಕ್ಕಳಾದ ಬಳಿಕ ನಟಿ ಮೂವತ್ತು ಕೆಜಿ ತೂಕ ಇಳಿಸುವ ಮೂಲಕ ಬಳುಕುವ ಬಳ್ಳಿಯಂತಾಗಿದ್ದಾರೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಸಮೇತ ಪೋಸ್ಟ್ ಮಾಡಿದ್ದಾರೆ.

30ಕೆಜಿ ತೂಕ ಇಳಿಸಿಕೊಂಡ ನಟಿ ಐಶ್ವರ್ಯ ವಿನಯ್

ಕಳೆದ ಹತ್ತು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ಅದರಲ್ಲೂ ವಿಲನ್ ಪಾತ್ರಗಳ ಮೂಲಕ ಮಿಂಚುತ್ತಿರುವ ನಟಿ ಐಶ್ವರ್ಯ ವಿನಯ್. ಇವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮುದ್ದಾದ ಅವಳಿ ಮಕ್ಕಳಿಗೆ ತಾಯಿಯಾಗಿದ್ದರು. ತಮ್ಮ ಮಕ್ಕಳಿಗೆ ವಜ್ರ ಮತ್ತು ವೈಡೂರ್ಯ ಎಂದು ಹೆಸರು ಇಟ್ಟಿದ್ದರು. ಮಕ್ಕಳಾದ ಬಳಿಕ ನಟನೆಯಿಂದ ದೂರ ಉಳಿದಿರುವ ಐಶ್ವರ್ಯ, ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ನಟಿ ತಮ್ಮ ಫಿಟ್ನೆಸ್ ಕಡೆಗೂ ಗಮನ ಹರಿಸಿದ್ದಾರೆ.

11 ತಿಂಗಳಲ್ಲಿ ಬರೋಬ್ಬರಿ ಮೂವತ್ತು ಕೆಜಿ ಇಳಿಕೆ

ಮಗುವಾಗಿ ಮೂರು ತಿಂಗಳ ಬಳಿಕ ತಮ್ಮ ಫಿಟ್ನೆಸ್ ಕಡೆಗೆ ಗಮನ ಹರಿಸಿದ ನಟಿ ಐಶ್ವರ್ಯ ಇದೀಗ ಬರೋಬ್ಬರಿ ಮೂವತ್ತು ಕೆಜಿ ಇಳಿಸಿಕೊಂಡಿದ್ದಾರೆ. ಆರೋಗ್ಯಕರ ಆಹಾರ ಹಾಗೂ ವಾಕಿಂಗ್, ವ್ಯಾಯಾಮಗಳ ಮೂಲಕ 60 ಕೆಜಿಯಾಗಿದ್ದಾರೆ ನಟಿ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಐಶ್ವರ್ಯ ‘ತಮ್ಮ ಸೀಮಂತದ ದಿನದ ಹಾಗೂ ಇಂದಿನ ಫೋಟೊವನ್ನು ಹಂಚಿಕೊಂಡು ‘ಅದೇ ಸೀರೆ, 30 ಕೆಜಿ ವ್ಯತ್ಯಾಸ! ಮೊದಲಿನಿಂದ ಈಗಿನವರೆಗೆ, ನಾನು 30 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಈ ಸೀರೆಯು ಒಂದು ಸುಂದರವಾದ ಬದಲಾವಣೆಯ ಕಥೆಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ. dietitian_sukruthi, ನಿಮಗೆ ತುಂಬಾ ಧನ್ಯವಾದಗಳು! ಎಂದು ಬರೆದುಕೊಂಡಿದ್ದಾರೆ.

ಐಶ್ವರ್ಯ ವಿನಯ್ ಡಯಟ್ ಮತ್ತು ವರ್ಕೌಟ್ ಜರ್ನಿ ಹೀಗಿತ್ತು

ಈ ಹಿಂದೆ ನಟಿ ತಮ್ಮ ಡಯೆಟ್ ಮತ್ತು ವ್ಯಾಯಾಮದ ಬಗ್ಗೆ ಮಾತನಾಡಿದ್ದು ಆಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಜೊತೆಗೆ ತಮ್ಮ ಆಹಾರದಲ್ಲಿ ತರಕಾರಿ, ಹಣ್ಣು, ಮೊಟ್ಟೆ, ಪನೀರ್, ಸೊಪ್ಪು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇರಿಸಿಕೊಂಡಿರುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲ ದಿನನಿತ್ಯದ ಆಹಾರದಲ್ಲಿ ಮೊಳಕೆ ಕಾಳಿನ ಪಲ್ಯ, ರಾಗಿ ಮುದ್ದೆ, ಪನೀರ್, ಮಶ್ರೂಮ್, ಸೂಪ್, ಇಡ್ಲಿ, ಮೊಟ್ಟೆ, ಬಾದಾಮಿ, ಚಪಾತಿ, ಸೌತೆಕಾಯಿ, ಕ್ಯಾರೆಟ್, ಸೊಪ್ಪು, ದೋಸೆ ಮತ್ತು ಬ್ರೊಕೊಲಿ ಮುಂತಾದವುಗಳು ಸೇರಿವೆ. ಇದರ ಜೊತೆಗೆ ಪ್ರತಿದಿನ ವಾಕಿಂಗ್ ಮಾಡುವುದಕ್ಕೂ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ತೂಕ ಇಳಿಕೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುತ್ತಿದ್ದು, ಹೆಚ್ಚಾಗಿ ಮನೆಯ ಆಹಾರವನ್ನೆ ಸೇವಿಸುತ್ತಿರುವುದಾಗಿ ತಿಳಿಸಿದ್ದರು.

ಐಶ್ವರ್ಯ ವಿನಯ್ ಫಿಟ್ನೆಸ್ ಜರ್ನಿ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ತಮಗೂ ನಿಮ್ಮ ವೈಟ್ ಲಾಸ್ ಜರ್ನಿ ಬಗ್ಗೆ ತಿಳಿಸಿಕೊಡಿ ಎಂದು ತಿಳಿಸಿದ್ದಾರೆ. ಇನ್ನು ನಟಿ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಮಾಡ್ತಾರಾ ಕಾದು ನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನಾನು ಸತ್ತಿದ್ದೇನೆಂದು ಸುಳ್ಳು ಸುದ್ದಿ ಹಬ್ಬಿಸಿದರು' ಯೂಟ್ಯೂಬ್‌ನಲ್ಲಿ ಯಶಸ್ಸು, ಬದುಕಲ್ಲಿ ಸಂಕಷ್ಟ; ಕಣ್ಣೀರಿಟ್ಟ ರೇಖಾ ಅಡುಗೆ
ಮಲ್ಲೇಶ್ವರಂ ಗಲ್ಲಿಗಳಲ್ಲಿ ಅರಳಿದ ಪ್ರೇಮಕಥೆ; 2 ಮಿಲಿಯನ್ ವ್ಯೂಸ್ ಕಂಡ ಕನ್ನಡ ವೆಬ್‌ಸೀರಿಸ್‌ನ ವಿಶೇಷತೆ ಏನು?