ಅಲ್ಲಿ ಡ್ರೈವರ್​, ಇಲ್ಲಿ ಡೆಲವರಿ ಬಾಯ್​: ಕೆಲಸ ಕಳಕೊಂಡವರಿಗೆ ಸೀರಿಯಲ್​ಗಳು ಹುರಿದುಂಬಿಸಲಿ ಅಂತಿದ್ದಾರೆ ಫ್ಯಾನ್ಸ್​

By Suvarna News  |  First Published Apr 23, 2024, 5:35 PM IST

ಕೆಲಸ ಕಳೆದುಕೊಂಡ ಸಮರ್ಥ್​ ಡ್ರೈವರ್​ ಆಗಿದ್ದಾನೆ, ಈಗ ಜೀವಾ ಡೆಲವರಿ ಬಾಯ್​ ಆಗಿದ್ದಾನೆ. ಇಂಥ ನೌಕರರ ಕುರಿತು ಸೀರಿಯಲ್​ ಪ್ರಿಯರು ಹೇಳ್ತಿರೋದೇನು?
 


ಉದ್ಯೋಗ ಕಡಿತ... ಇದು ಕೆಲ ವರ್ಷಗಳಿಂದ ಚಿಕ್ಕಪುಟ್ಟ ಕಂಪೆನಿಗಳಿಂದ ಹಿಡಿದು ದೈತ್ಯ ಕಂಪೆನಿಯ ಉದ್ಯೋಗಿಗಳನ್ನು ಬೆಂಬಡಿದೇ ಕಾಡುತ್ತಿರುವ ಶಬ್ದಗಳು. ವಿವಿಧ ಸಂಸ್ಥೆ, ಕಂಪೆನಿಗಳ ಲಕ್ಷಾಂತರ ಮಂದಿ ಇದಾಗಲೇ ಕೆಲಸ ಕಳೆದುಕೊಂಡಿದ್ದಾರೆ. ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದವರು ಮನೆಗೆ ಮರಳಿದ್ದಾರೆ. ಬರುವ ಲಕ್ಷ ಲಕ್ಷ ಸಂಬಳ ನಂಬಿ ಐಷಾರಾಮಿ ಜೀವನ  ನಡೆಸುತ್ತಿದ್ದವರ ಸ್ಥಿತಿಯಂತೂ ಕೇಳುವುದೇ ಬೇಡ. ಎಷ್ಟೋ ಮಂದಿ ಖಿನ್ನತೆಗೆ ಜಾರಿದ್ದಾರೆ. ಎಷ್ಟೋ ಕುಟುಂಬಗಳು ಒಡೆದು ಹೋಗಿವೆ. ಕೆಲವರು ಆತ್ಮಹತ್ಯೆಯೂ ಪ್ರಯತ್ನಿಸುತ್ತಿದ್ದಾರೆ. ಸಂಬಳ ನಂಬಿ ಲಕ್ಷ ಲಕ್ಷ ಸಾಲ ಮಾಡಿಕೊಂಡವರ ಸ್ಥಿತಿಯೂ ಅಯೋಮಯವಾಗಿದೆ. ಬೃಹತ್​ ಕಂಪೆನಿಗಳು ಒಂದೆರಡು ವರ್ಷಗಳ ಸಂಬಳವನ್ನು ಒಟ್ಟಿಗೇ ನೀಡಿ ನೌಕರರ ಹಿತಾಸಕ್ತಿಯನ್ನು ಅಷ್ಟಾದರೂ ಕಾದಿದ್ದರೆ, ಹಲವಾರು ಕಂಪೆನಿಗಳು ಕೊನೆಯ ತಿಂಗಳ ಸಂಬಳವನ್ನೂ ಕೊಡದೇ ಮನೆಗೆ ಕಳುಹಿಸಿದ್ದಿದೆ. 

ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದ ಹಲವರು ತಮ್ಮ ಜೀವನ ನಿರ್ವಹಣೆಗಾಗಿ ಚಿಕ್ಕಪುಟ್ಟ ಕೆಲಸಕ್ಕೆ ಸೇರಿಕೊಂಡು ಸಂಸಾರ ನಿಭಾಯಿಸುತ್ತಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಕೆಲವೊಂದು ಕೆಲಸಗಳು ಎಂದರೆ ದೊಡ್ಡವರು ಎನಿಸಿಕೊಂಡವರ ಬಾಯಲ್ಲಿ ಕೆಳಮಟ್ಟದ್ದು ಎನಿಸಿಕೊಳ್ಳುವುದು ಇದೆ. ಮಾಡುವ ಯಾವುದೇ ಕೆಲಸಕ್ಕೆ ಅದರದ್ದೇ ಆದ ಘನತೆ, ಗೌರವ ಇದ್ದರೂ ಹಣದ ಅಮಲಿನಲ್ಲಿ ಮೆರೆಯುವವರಿಗೆ ಚಿಕ್ಕಪುಟ್ಟ ಕೆಲಸಗಳು, ಈ ಕೆಲಸ ಮಾಡುವ ನೌಕರರು ಅಂದರೆ ಅಸಡ್ಡೆಯೇ. ಸೀರಿಯಲ್​ಗಳು ಇಂದು ಜನರ ಮನಸ್ಸಿಗೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಅವುಗಳ ಜನರ ಪಾಲಿಗೆ ಆದರ್ಶವಾಗಲಿ ಎಂದೇ ಬಯಸುವವರು ಪ್ರೇಕ್ಷಕರು. ಇದೀಗ ಚಿಕ್ಕ ಪುಟ್ಟ ಕೆಲಸಗಾರರ ಘನತೆಯನ್ನು ಕಾಪಾಡುವ ಕೆಲಸವಾಗಲಿ ಎಂದು ಆಶಿಸುತ್ತಿದ್ದಾರೆ ಸೀರಿಯಲ್​ ಫ್ಯಾನ್ಸ್​.

Tap to resize

Latest Videos

ತಾಯಿಯಿಂದ ಕಿಡ್ನಿ ದಾನ, ಬೇರೆಯವರಿಗೆ ಕೊಟ್ಟರು ದೃಷ್ಟಿದಾನ: ಇದು ರಾಣಾ ದುಗ್ಗುಬಾಟಿ ಸೀಕ್ರೇಟ್​!

ಅಷ್ಟಕ್ಕೂ, ಈಗ ಸೀರಿಯಲ್​ಗಳಲ್ಲಿಯೂ ಉದ್ಯೋಗ ಕಡಿತ ಶುರುವಾಗಿದೆ. ಅಮೃತಧಾರೆಯಲ್ಲಿ ರಿಸೆಷನ್​ ಎನ್ನುವ ಕಾರಣಕ್ಕೆ ಭೂಮಿಕಾ ಅಣ್ಣ ಜೀವಾ ಕೆಲಸ ಕಳೆದುಕೊಂಡಿದ್ದಾನೆ. ಲಕ್ಷ್ಮಿ ನಿವಾಸದಲ್ಲಿ ಶ್ರೀನಿವಾಸ್​ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಅದೇ ಇನ್ನೊಂದೆಡೆ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ತುಳಸಿ ಮಗ ಸಮರ್ಥ್​ ಕೆಲಸ ಕಳೆದುಕೊಂಡಿದ್ದಾನೆ. ಕಾರಣಗಳು ಏನೇ ಇರಬಹುದು. ಆದರೆ ಕೆಲಸ ಹೋಗಿರುವುದು ನಿಜ. ಇದೀಗ ಜೀವಾ ಫುಡ್​ ಡೆಲವರಿ ಬಾಯ್​ ಆಗಿ ಕೆಲಸಕ್ಕೆ ಸೇರಿದ್ದಾನೆ. ತನ್ನ ಮನೆಯಲ್ಲಿ ಕೆಲಸ ಹೋಗಿರುವ ಬಗ್ಗೆ ಆತ ಹೇಳಲಿಲ್ಲ. ಗಂಡನಿಗೆ ಗಿಫ್ಟ್​ ಪರ್ಚೇಸ್​ ಮಾಡಲು ಬಂದ ಭೂಮಿಕಾ ಕಣ್ಣಿಗೆ ಜೀವಾ ಬಿದ್ದಿದ್ದಾನೆ. ಅವನನ್ನು ನೋಡಿ ಭೂಮಿಕಾಗೆ ಶಾಕ್​ ಆಗಿದೆ.

ಇದಾಗಲೇ ಶ್ರೀರಸ್ತು ಶುಭಮಸ್ತು ಸೀರಿಯಲ್ ಸಮರ್ಥ್​ ಖುದ್ದು ಅಮ್ಮನ ಮನೆಯ ಡ್ರೈವರ್​ ಆಗಿ ಸೇರಿದ್ದಾನೆ. ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ ಎನ್ನುವ ಬಗ್ಗೆ ಆ ಸಮಯದಲ್ಲಿ ತಾತ ಹಾಗೂ ಸಮರ್ಥ್​ ಪತ್ನಿ ಸಿರಿ ಚೆನ್ನಾಗಿ ಮಾತನಾಡಿದ್ದು, ಅದು ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು. ಕಳ್ಳತನ, ಸುಳ್ಳತನದಿಂದಲೇ ಮೋಸ ಮಾಡಿ ದುಡ್ಡು ಮಾಡುವವರ ನಡುವೆ ಗೌರವದಿಂದ ಸಂಪಾದನೆ ಮಾಡುವಾಗ ಯಾವ ಕೆಲಸವೂ ಕೀಳು-ಮೇಲಲ್ಲ ಎನ್ನುವ ಮಾತು ಸೀರಿಯಲ್​ ಪ್ರಿಯರಿಗೆ ಅಚ್ಚುಮೆಚ್ಚು ಎನ್ನಿಸಿತ್ತು. ಇದೀಗ ಜೀವಾ ಸರದಿ. ಈ ಸೀರಿಯಲ್​ನಲ್ಲಿಯೂ ಒಂದಿಷ್ಟು ಒಳ್ಳೆಯ ಮಾತುಗಳನ್ನಾಡಿ ಚಿಕ್ಕಪುಟ್ಟ ಕೆಲಸ ಮಾಡುವವರಿಗೆ ಉತ್ತೇಜನ ನೀಡಿ, ಗೌರವದ ದುಡಿಯುವವರಿಗೆ ಧಾರಾವಾಹಿಗಳು ದಾರಿದೀವಿಗೆ ಆಗಲಿ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಬಿಗ್​ಬಾಸ್​ನಲ್ಲಿ ಅವಕಾಶ ಕೊಡ್ತೆನಂದ, ವಿಡಿಯೋ ಕಳಿಸಿದೆ, ಮಧ್ಯರಾತ್ರಿ ಕರೆದ.. ಆಮೇಲೆ.. ಮನಿಷಾ ಕಹಿ ನೆನಪು


click me!