
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್-7 ಈಗಾಗಲೇ 50 ದಿನಗಳನ್ನು ಪೂರೈಸಿದೆ. ಸ್ಪರ್ಧಿಗಳ ಬಿಂದಾಸ್ ಆಟ ಹಾಗೂ ಟಾಸ್ಕ್‌ನಿಂದ ಎಲ್ಲರೂ ಎಂಜಾಯ್ ಮಾಡುವಂತಾಗಿದೆ. ಅದರೊಟ್ಟಿದೆ ಈ ಸಾರಿ ವಿಭಿನ್ನ ಪ್ರಯತ್ನವೊಂದಕ್ಕೆ ಈ ಶೋ ಕೈ ಹಾಕಿದ್ದು, ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಸಿದೆ.
ಎಲ್ಲಿರಿಗೂ ತಿಳಿದಿರುವ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಲ್ಮಾನ್ ಖಾನ್‌ಗೆ ಎದುರಾಗಿ 'ದಬಾಂಗ್-3' ಚಿತ್ರದಲ್ಲಿ ಬಲ್ಲೀಸಿಂಗ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಪಾತ್ರದ ಖದರ್ ಹೆಚ್ಚಿಸಲೆಂದು ಸುದೀಪ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿಕೊಂಡು, ದೇಹವನ್ನೂ ದಂಡಿಸಿದ್ದಾರೆ.
ಸುದೀಪ್ ಮಗಳ ಆಸೆ ಈಡೇರಿಸಿದ ಸಲ್ಮಾನ್ ಖಾನ್!
ವಾರ-ವಾರ ನಡೆಯುವ 'ವೀಕೆಂಡ್ ವಿತ್ ಸುದೀಪ್'ನಲ್ಲಿ ಸಲ್ಮಾನ್ ಖಾನ್, ಪ್ರಭುದೇವ್ ಮತ್ತು ದಬಾಂಗ್-3 ಟೀಂ ಅನ್ನು ಕಿಚ್ಚ ನೇರವಾಗಿ ಸಂದರ್ಶಿಸಿದ್ದಾರೆ. ಬಿಗ್‌ಬಾಸ್-ಹಿಂದಿ ಸೀಸನ್ 13 ಕಾರ್ಯಕ್ರಮದಲ್ಲಿ ಸಲ್ಮಾನ್ ಭಾಗಿಯಾಗಿದ್ದರು. ಕನ್ನಡ ಬಿಗ್‌ಬಾಸ್‌ನಲ್ಲಿ ಶೂಟಿಂಗ್‌ನಲ್ಲಿದ್ದರು ಸುದೀಪ್. ಬೇರೆ ಬೇರೆ ಸೆಟ್‌ನಿಂದಲೇ ವಿಡಿಯೋ ಕಾಲ್ ಮೂಲಕ ಈ ಇಬ್ಬರು ನಟರು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಸಲ್ಮಾನ್ ಕನ್ನಡದಲ್ಲಿ ' ಬಿಗ್ ಬಾಸ್ ಅಪೇಕ್ಷಿಸುತ್ತಾರೆ...' ಎಂದು ಹೇಳಿರುವ ಪ್ರೋಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿ ಕೊಂಡಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.