
ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲ್ಲೊಂದು ಶುಭ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಒಬ್ಬರಾದ ನಂತರ ಮತ್ತೊಬ್ಬರು ಸಪ್ತಪದಿ ತುಳಿಯುತ್ತಿದ್ದಾರೆ. ಈ ಪಟ್ಟಿಗೆ ಕೆಲವು ದಿನಗಳ ಹಿಂದೆ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಸೇರಿಕೊಂಡರು. ಈಗ ಡಿಂಪಲ್ ಹುಡುಗಿ ರಚಿತಾ ರಾಮ್ ಅಕ್ಕ, ಸ್ಮಾಲ್ ಸ್ಕ್ರೀನ್ ನಟಿ ನಿತ್ಯಾ ರಾಮ್ ಸೇರಿಕೊಳ್ಳುತ್ತಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ಈ ಕಿರುತೆರೆ ನಟಿ!
ಆಸ್ಟ್ರೇಲಿಯಾದಲ್ಲಿರುವ ಉದ್ಯಮಿ ಗೌತಮ್ ಜೊತೆ ಡಿ.6ರಂದು ಹಸೆಮಣೆ ಏರಲಿದ್ದಾರೆ. ವಿವಾಹ ಮುಹೋತ್ಸವಕ್ಕೂ ಮುನ್ನ ತಮ್ಮ ಮನೆಯಲ್ಲಿ ಮೆಹಂದಿ, ಅರಿಶಿನ ಶಾಸ್ತ್ರ ಮತ್ತು ಸಂಗೀತಾ ಕಾರ್ಯಕ್ರಮ ನಡೆಯಿತು. ಇದಕ್ಕೆ ಕನ್ನಡ ಕಿರುತೆರೆಯ ಹಲವು ಗಣ್ಯರು ಸಾಕ್ಷಿಯಾಗಿದ್ದರು.
ಅರಿಶಿನ ಶಾಸ್ತ್ರಕ್ಕೆ ಡಿಫರೆಂಟ್ ಆಗಿ ಡ್ರೆಸ್ ಡಿಸೈನ್ ಮಾಡಿಸಲಾಗಿತ್ತು. ಈ ವೇಳೆ ಚಂಡು ಹೂವುಗಳ ನಡುವೆ ಕ್ರೀಮ್ ಸೀರೆ ಧರಿಸಿ ನಿತ್ಯ ಕಂಗೊಳಿಸುತ್ತಿದ್ದರು. ಮೆಹಂದಿ ಕಾರ್ಯಕ್ರಮದಲ್ಲಿ ಹಳದಿ ಡ್ರೆಸ್‌ನಲ್ಲಿ ನಿತ್ಯಾ ಕಾಣಿಸಿಕೊಂಡರೆ, ರಚಿತಾ ರಾಮ್ ನೀಲಿ ಡ್ರಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಗುರು-ಹಿರಿಯರು-ಬಂಧು ಮಿತ್ರರ ಸಮೂಹದಲ್ಲಿ ಇಂದು(ಡಿ 6) ಅದ್ಧೂರಿಯಾಗಿ ದಾಂಪತ್ಯ ಜೀವಕ್ಕೆ ಕಾಲಿಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.