ಆವೇಶದಲ್ಲಿ ನಿಜವಾಗ್ಲೂ ಕೆನ್ನೆಗೆ ಹೊಡೆದೇ ಬಿಡೋದಾ ಪುಟ್ಟಕ್ಕನ ಮಗಳು ಸಹನಾ? ವಿಲನ್​ ಕಲಿ ಸುಸ್ತೋ ಸುಸ್ತು!

By Suchethana D  |  First Published Jan 11, 2025, 12:52 PM IST

ಪುಟ್ಟಕ್ಕನ ಮಕ್ಕಳು ಶೂಟಿಂಗ್​ ಸಮಯದಲ್ಲಿ ವಿಲನ್​ ಕಲಿಗೆ ನಿಜವಾಗಿಯೂ ಏಟು ಕೊಟ್ಟಿದ್ದಾಳೆ ಸಹನಾ. ಇದರ ವಿಡಿಯೋ ವೈರಲ್​ ಆಗಿದೆ.
 


ಶೂಟಿಂಗ್​ ಮಾಡುವ ಸಮಯದಲ್ಲಿ ಏನೇನೋ ಎಡವಟ್ಟುಗಳಾಗುವುದು ಸಹಜ. ಆ ಪಾತ್ರದ ಒಳಹೊಕ್ಕು ತಮ್ಮನ್ನು ತಾವು ಮರೆತು ಶೂಟಿಂಗ್​ನಲ್ಲಿ ನಿರತರಾಗಿರುತ್ತಾರೆ ನಟ-ನಟಿಯರು. ಕೆಲವೊಮ್ಮೆ ಸಹಜವಾಗಿ ಎಲ್ಲವೂ ಕಾಣಬೇಕು ಎನ್ನುವ ನಿಟ್ಟಿನಲ್ಲಿ ಸಹಜತನ ತೋರಿಸಲು ಹೋಗಿ ಎಡವಟ್ಟು ಆಗುವುದು ಇದೆ. ಇದಾಗಲೇ ಸಿನಿಮಾ ಶೂಟಿಂಗ್​ ಸಮಯದಲ್ಲಿ ಸಾಹಸ ದೃಶ್ಯಗಳನ್ನು ಡ್ಯೂಪ್​ ಇಲ್ಲದೇ  ಮಾಡಲು ಹೋಗಿ ಎಷ್ಟೋ ನಟ-ನಟಿಯರು ಭಾರಿ ಗಾಯ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ಕೂಲಿ ಚಿತ್ರದ ಸಮಯದಲ್ಲಿ ಅಮಿತಾಭ್​ ಬಚ್ಚನ್​ ಅವರ ಹೊಟ್ಟೆಗೆ ಚಾಕು ಇರಿದು ಸಾವು ನೋವಿನ ನಡುವೆ ನರಳಾಡಿರುವ ಘಟನೆಗಳೂ ನಡೆದಿವೆ.  ಕೆಲವೊಮ್ಮೆ ನಾಯಕರ ಡ್ಯೂಪ್​ ಆಗಿ ಸಾಹಸ ದೃಶ್ಯ ಮಾಡಲು ಹೋದವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಇವೆಲ್ಲಾ ಅವಘಡಗಳು ಶೂಟಿಂಗ್​ ಸಮಯದಲ್ಲಿ ಸಾಮಾನ್ಯವಾಗಿದೆ. ಇದೀಗ ಸೀರಿಯಲ್​ಗಳು ಕೂಡ ಸಿನಿಮಾಗಳಿಗೆ ಪೈಪೋಟಿ ಒಡ್ಡುತ್ತಿವೆ. ಒಂದೊಂದು ದೃಶ್ಯವನ್ನೂ ಸೂಕ್ಷ್ಮವಾಗಿ, ಬಲು ಪ್ರಯಾಸದಿಂದಲೇ ಶೂಟಿಂಗ್​ ಮಾಡಲಾಗುತ್ತದೆ. ಇಂಥ ಸಂದರ್ಭಗಳಲ್ಲಿಯೂ ಎಡವಟ್ಟು ಆಗುವುದು ಇದೆ. ಅಂಥದ್ದೇ ಒಂದು ಎಡವಟ್ಟು ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ನಡೆದಿದೆ. ವಿಲನ್​ ಕಲಿಯನ್ನು ಕಟ್ಟಿಹಾಕಿ, ಸಹನಾ ಕಲಿಯ ಕೆನ್ನೆಗೆ ಬಲವಾಗಿ ಹೊಡೆಯುವ ದೃಶ್ಯವಿದೆ. ಶೂಟಿಂಗ್ ಸಮಯದಲ್ಲಿ, ಆವೇಶದಲ್ಲಿದ್ದ ಸಹನಾ ಪಾತ್ರಧಾರಿ ಅಕ್ಷರಾ ಅವರು ನಿಜವಾಗಿಯೂ ಕಲಿ ಪಾತ್ರಧಾರಿಯ ಕೆನ್ನೆಗೆ ಬಲವಾಗಿ ಹೊಡೆದೇ ಬಿಟ್ಟಿದ್ದಾರೆ. ಕೊನೆಗೆ ಅಯ್ಯೋ ಸಾರಿ.. ಸಾರಿ.. ಹೇಳಿದ್ದಾರೆ. ಕಲಿ ಪಾತ್ರಧಾರಿ ಸಾವರಿಸಿಕೊಂಡು ಇರಲಿ ಬಿಡಿ ಎಂದಿದ್ದಾರೆ.

Tap to resize

Latest Videos

ಪುಟ್ಟಕ್ಕನ ಮಗಳು ಸ್ನೇಹಾ ಮತ್ತೆ ವಾಪಸ್​! ಸೀರಿಯಲ್​ ತಂಗಿ ಸುಮಾ ಜೊತೆ ನೋಡಿ ಫ್ಯಾನ್ಸ್​ ಫುಲ್​ ಖುಷ್​...

ಇದರ ವಿಡಿಯೋ ಅನ್ನು ಡಿ.ವಿ.ಡ್ರೀಮ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಪುಟ್ಟಕ್ಕನ ಮಕ್ಕಳು ತೆರೆಮರೆಯ ಕಥೆ ಎಂದು ಇದರ ವಿಡಿಯೋ ಅನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ಶೂಟಿಂಗ್​ ವೇಳೆ ಆಗಿರುವ ಆವಾಂತರವನ್ನು ನೋಡಬಹುದಾಗಿದೆ. ಅಸಲಿಗೆ ಈಗ ಪುಟ್ಟಕ್ಕನ ಮಕ್ಕಳು ಕಥೆಯಲ್ಲಿ, ಸ್ನೇಹಾ ಮತ್ತು ಬಂಗಾರಮ್ಮನಿಗೆ ಅಪಘಾತ ಮಾಡಿಸಿದ್ದು ಸಿಂಗಾರಮ್ಮ ಮತ್ತು ಕಲಿ ಎನ್ನುವ ಸತ್ಯ ತಿಳಿದಿದೆ. ಈ ಅಪಘಾತದಲ್ಲಿ ಸ್ನೇಹಾ ಸಾವನ್ನಪ್ಪಿದ್ದಾಳೆ. ಕಲಿ ಸಹನಾ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಆತನನ್ನು ತಂದು ಕಟ್ಟಿಹಾಕಿ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ. ಆಗ ಸಹನಾ ಕಲಿಯ ಕೆನ್ನೆಗೆ ಏಟು ಹಾಕುವ ದೃಶ್ಯವಿದೆ. ಆ್ಯಕ್ಷನ್​ ಹೇಳುತ್ತಿದ್ದಂತೆಯೇ ಸಹನಾ ಡೈಲಾಗ್​ ಹೇಳಿ, ಕಲಿಯ ಕೆನ್ನೆಗೆ ಬಾರಿಸಿದ್ದಾಳೆ. ಆದರೆ, ಏಟು ನಿಜವಾಗಿಯೂ ಬಿದ್ದು ಬಿಟ್ಟಿದೆ. ಕೊನೆಗೆ ಸಾರಿ ಸಾರಿ ಎಂದು ಕೆನ್ನೆ ಸವರಿದ್ದಾಳೆ. ಕಲಿ ಪಾತ್ರಧಾರಿ ಇರಲಿ ಬಿಡಿ ಎಂದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. 

ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ

click me!