ನಕ್ಷತ್ರಕ್ಕೆ ಸಾನ್ಯಾ ಅಯ್ಯರ್​ ಹೆಸರು: ಪುನೀತ್​, ಸುದೀಪ್​ ಬಳಿಕ ನಟಿಗೆ ಫ್ಯಾನ್ಸ್​ ಗೌರವ

Published : Oct 05, 2023, 06:06 PM IST
ನಕ್ಷತ್ರಕ್ಕೆ ಸಾನ್ಯಾ ಅಯ್ಯರ್​ ಹೆಸರು: ಪುನೀತ್​, ಸುದೀಪ್​ ಬಳಿಕ ನಟಿಗೆ ಫ್ಯಾನ್ಸ್​ ಗೌರವ

ಸಾರಾಂಶ

ಪುಟ್ಟ ಗೌರಿ ಮದುವೆ ಖ್ಯಾತಿ ಪಡೆದಿರುವ ನಟಿ ಸಾನ್ಯಾ ಅಯ್ಯರ್​ ಅವರ ಹೆಸರನ್ನು ನಕ್ಷತ್ರವೊಂದಕ್ಕೆ ಇಟ್ಟು ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ.   

 ಬಿಗ್ ಬಾಸ್ 9 ಸೀಸನ್ (Bigg Boss Season 9) ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ ಪುಟ್ಟ ಗೌರಿ ಮದ್ವೆ ಖ್ಯಾತಿಯ  ಸಾನ್ಯಾ ಐಯ್ಯರ್ ಸಕತ್​ ಸುದ್ದಿಯಲ್ಲಿರುವ ನಟಿ.  ಪುಟ್ಟ ಗೌರಿ ಮದುವೆಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಸಾನ್ಯಾ, 8ನೇ ತರಗತಿಯವರೆಗೆ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಕೊನೆಗೆ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿರುವ ಈಕೆ, ಮಲಯಾಳಂನಲ್ಲಿಯೂ ಹೆಸರು ಮಾಡಿದರು. ಮಲಯಾಳದ ' ಆರಾರೋ..ನೀಯಾರೋ' ಎಂಬ ಅಲ್ವಮ್ ಸಾಂಗ್​ನಲ್ಲಿ ಕಾಣಿಸಿಕೊಂಡು ಫೇಮಸ್​ ಆದರು. ಅದಾದ ಬಳಿಕ ಕನ್ನಡದ ಡಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಅಭಿನಯಿಸಿ ಜನರಿಗೆ ಮತ್ತಷ್ಟು ಹತ್ತಿರವಾದರು. 'ಗುಲಾಬ್ ಜಾಮೂನ್' ಎಂಬ ಚಿತ್ರದಲ್ಲಿಯೂ ನಟಿಸಿದರು. ಆದರೆ ಹೆಚ್ಚು ಫೇಮಸ್​ ಆಗಿದ್ದು  ಬಿಗ್ ಬಾಸ್ 9 ಸೀಸನ್ ಮೂಲಕ.  ‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿಯೂ ಗಮನ ಸೆಳೆದರು.

ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟಿವ್ ಆಗಿರುವ ನಟಿ ಸಾನ್ಯಾ, ಆಗಾಗ್ಗೆ  ರೀಲ್ಸ್​  ಮಾಡಿ ಫ್ಯಾನ್ಸ್​ ಹೃದಯ ಗೆಲ್ಲುತ್ತಿದ್ದಾರೆ.  ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ.  ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿರೋ ಸಾನ್ಯಾ ಕೆಲ ದಿನಗಳ ಹಿಂದೆ  ಲವ್​ ಬಗ್ಗೆ ಒಂದು ಸಂದೇಶ ನೀಡಿದ್ದು, ಇದಕ್ಕೆ ಸಕತ್​ ರೆಸ್ಪಾನ್ಸ್​ ಬಂದಿತ್ತು.  ನಂತರ  ಪುನೀತ್ ರಾಜ್​ಕುಮಾರ್ ಚಿತ್ರದ ಸಾಂಗ್​ಗೆ ರೀಲ್ಸ್ ಮಾಡಿ, ಎಲ್ಲರ ಮನ ಗೆದ್ದಿದ್ದರು. ಹೀಗೆ ಅಪಾರ ಅಭಿಮಾನಿಗಳನ್ನು ಪಡೆದಿರುವ ಸಾನ್ಯಾ ಅಯ್ಯರ್​ ಅವರ ಹೆಸರನ್ನು ಅವರ ಫ್ಯಾನ್ಸ್​ ನಕ್ಷತ್ರ ಒಂದಕ್ಕೆ ಇಟ್ಟಿದ್ದಾರೆ. 

ಸಸ್ಯಾಹಾರದ ಪ್ರಚಾರಕ್ಕೆ ಮತ್ಸ್ಯಕನ್ಯೆಯಾದ ಪಾಲಕ್​: ಸೈಫ್​ ಅಲಿ ಪುತ್ರಂಗೂ ನಾನ್​ವೆಜ್​ ಬಿಡಿಸುವೆಯಾ ಅಂದ ಫ್ಯಾನ್ಸ್​!

ಅಂದಹಾಗೆ, ಚಿತ್ರನಟ ಹೆಸರನ್ನು ನಕ್ಷತ್ರಕ್ಕೆ ಇಡುವ  ಟ್ರೆಂಡ್​ ಕನ್ನಡದಲ್ಲಿ  ಶುರುವಾಗಿದ್ದು  ಪುನೀತ್ ರಾಜ್ ಕುಮಾರ್ ಅವರಿಂದ. ಅವರ  ಅಭಿಮಾನಿಗಳು ಪುನೀತ್ ಅಗಲಿದಾಗ ನಕ್ಷತ್ರವೊಂದಕ್ಕೆ ಪುನೀತ್  ಹೆಸರು ಇಟ್ಟಿದ್ದರು.  ಅದಾ ಬಳಿಕ   ಸುದೀಪ್ ಅವರ ಹುಟ್ಟು ಹಬ್ಬದಂದು ಹರೀಶ್ ಅರಸು ಅವರು ಇದೇ ರೀತಿ ನಕ್ಷತ್ರವೊಂದಕ್ಕೆ ಸುದೀಪ್ ಹೆಸರು ಇಟ್ಟಿದ್ದರು. ಮೀನ ರಾಶಿಯ ನಕ್ಷತ್ರಪುಂಜದಲ್ಲಿ ಕಾಣಸಿಗುವ ನಕ್ಷತ್ರವೊಂದಕ್ಕೆ ಸುದೀಪ್ ಹೆಸರು ಇಡಲಾಗಿದೆ. ಇದೀಗ ಸಾನ್ಯಾ ಅಯ್ಯರ್​ ಸರದಿ.  ಅವರ ಹುಟ್ಟುಹಬ್ಬದ ಬೆನ್ನಲ್ಲೇ ಈ ಒಂದು ಕೆಲಸ ಮಾಡಿದ್ದಾರೆ ಅಭಿಮಾನಿಗಳು. ಸೆಪ್ಟೆಂಬರ್​ 21ರಂದು ಸಾನ್ಯಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಇದರ ಸವಿನೆನಪಿಗಾಗಿ ಫ್ಯಾನ್ಸ್​ ನಕ್ಷತ್ರವೊಂದಕ್ಕೆ ಅವರ ಹೆಸರು ಇಟ್ಟಿದ್ದಾರೆ. 

ಇದನ್ನು ಕೇಳಿ ಖುದ್ದು ನಟಿ ಅಚ್ಚರಿ ವ್ಯಕ್ತಪಡಿಸಿದ್ದು, ಹೀಗೆಲ್ಲಾ ಇಡುತ್ತಾರೆ ಎಂದು ಗೊತ್ತೇ ಇರಲಿಲ್ಲ ಎಂದಿದ್ದಾರೆ. ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಸಾನ್ಯಾ ಅಯ್ಯರ್ ಅವರು ಗಿಫ್ಟ್ ಓಪನ್ ಮಾಡುವ ವಿಡಿಯೋದ ತುಣುಕೊಂದು ಇನ್‌ಸ್ಟಾಗ್ರಾಂನಲ್ಲಿ ಸಖತ್ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ ಅಭಿಮಾನಿಯಿಂದ ಪಡೆದ ಗಿಫ್ಟ್ ಅನ್ನು ಸಾನ್ಯಾ ಓಪನ್ ಮಾಡುವುದನ್ನು ಕಾಣಬಹುದು. ಇದರ ಜೊತೆಗೆ ವಿಡಿಯೋದ ಆರಂಭದಲ್ಲಿ ಇದೊಂದು ಫೋಟೋ ಫ್ರೇಮ್‌ನ ರೀತಿ ಕಾಣಿಸುತ್ತದೆ. ಆದರೆ ಕೊನೆಯಲ್ಲಿ ಅದು ತನ್ನ ಹೆಸರಿನ ನಕ್ಷತ್ರದ ಫೋಟೋ ಎಂದು ತಿಳಿದಾಗ ಸಾನ್ಯಾ ಅವರ ಸಂತಸ ಜಾಸ್ತಿಯಾಗುತ್ತದೆ. ಇನ್ನು ಇವರ ಸಿನಿ ಪಯಣಕ್ಕೆಬರುವುದಾದರೆ,  ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ಅವರು ನಾಯಕಿಯಾಗಿ ನಟಿಸಲಿದ್ದು ಇಂದ್ರಜಿತ್ ಅವರ ಮಗ ಸರ್ಮಜಿತ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
ರೋಚಕ ವಿಧಾನದಿಂದ ಕನ್ನಡ ಕಲಿತ ಸಾನ್ಯಾ ಅಯ್ಯರ್! ಅಜ್ಜಿಯ ಪಾಠ ವಿಧಾನ ತಿಳಿಸಿದ ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!