ಮನರಂಜನೆಯ ಜೊತೆಗೆ ಹೊರಗಡೆ ಹೋಗಿ ಕಲಿಯುವಂಥದ್ದು ಈ ಸಿನಿಮಾದಲ್ಲಿದೆ. ಈಗಾಗಲೇ ನಮ್ಮ ಚಿತ್ರದ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. 5 ಡಿ ಒಂದು ಪೂರ್ಣಪ್ರಮಾಣದ ಎಂಟರ್‌ಟೈನ್ಮೆಂಟ್ ಸಿನಿಮಾ ಎನ್ನಬಹುದು.
ಸೂರ್ಯವಂಶ, ಚೆಲುವಿನ ಚಿತ್ತಾರದಂದ ಹಿಟ್ ಚಿತ್ರಗಳ ನಿರ್ದೇಶಕ ಎಸ್.ನಾರಾಯಣ್ ಅವರು ೫ ವರ್ಷಗಳ ನಂತರ ನಿರ್ದೇಶಿಸಿರುವ ಚಿತ್ರ '5ಡಿ'. ಒನ್ ಟು ಹಂಡ್ರೆಡ್ ಡ್ರೀಮ್ ಮೂವೀಸ್ ಲಾಂಚನದಲ್ಲಿ ಸ್ವಾತಿ ಕುಮಾರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಆದಿತ್ಯ, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಕಲಾವಿದರ ಸಂಘದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್, ನಾರಾಯಣ್, ನಾಯಕ ಆದಿತ್ಯ, ನಿರ್ಮಾಪಕ ಕುಮಾರ್, ಜೇಂಕಾರ್ ಆಡಿಯೋದ ಭರತ್ ಜೈನ್ ಇತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಕುಮಾರ್ 'ನಮ್ಮ 5ಡಿ ಚಿತ್ರವೀಗ ರಿಲೀಸ್ ಹಂತಕ್ಕೆ ಬಂದಿದ್ದು, ಫೆಬ್ರವರಿ 09, 2024ಕ್ಕೆ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇವೆ. ಆದಿತ್ಯ ಅವರು ನಾನು ತುಂಬಾ ಇಷ್ಟಪಡುವಂಥ ನಟ, ಅವರ ತುಂಬಾ ಸಿನಿಮಾಗಳನ್ನು ನೋಡಿದ್ದೇನೆ, ಈ ಬಗ್ಗೆ ನಾರಾಯಣ್ ಅವರಿಗೆ ಹೇಳಿದಾಗ ಅವರೂ ಒಪ್ಪಿದರು. 5ಡಿ ಆದಿತ್ಯ ಅವರ 25ನೇ ಚಿತ್ರ, ಹಾಗೂ ಎಸ್.ನಾರಾಯಣ್ ಅವರ ೫೦ನೇ ಚಿತ್ರ ಆಗಿರುವುದು ಕಾಕತಾಳೀಯ.
ಮನರಂಜನೆಯ ಜೊತೆಗೆ ಹೊರಗಡೆ ಹೋಗಿ ಕಲಿಯುವಂಥದ್ದು ಈ ಸಿನಿಮಾದಲ್ಲಿದೆ. ಈಗಾಗಲೇ ನಮ್ಮ ಚಿತ್ರದ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. 5 ಡಿ ಒಂದು ಪೂರ್ಣಪ್ರಮಾಣದ ಎಂಟರ್‌ಟೈನ್ಮೆಂಟ್ ಸಿನಿಮಾ ಎನ್ನಬಹುದು. ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ರೀತಿಯ ಅಂಶಗಳು ಚಿತ್ರದಲ್ಲಿವೆ. ಅಲ್ಲದೆ ಚಿತ್ರದ ಹಿಂದಿ ರೈಟ್ಸ್ ಒಂದೊಳ್ಳೇ ಮೊತ್ತಕ್ಕೆ ಸೇಲ್ ಆಗಿದೆ' ಎಂದು ಹೇಳಿದರು.
ನಂತರ ನಿರ್ದೇಶಕ ಎಸ್. ನಾರಾಯಣ್ ಮಾತನಾಡಿ 'ನನ್ನ ಮೊದಲ ಚಿತ್ರವೂ ಇದೇ ತಿಂಗಳಲ್ಲಿ ರಿಲೀಸಾಗಿತ್ತು. ಇದೊಂದು ವಿಶೇಷವಾದ ಚಿತ್ರ. ಎಲ್ಲರಿಗೂ ಹೌದಾ, ಹೀಗೂ ಇರುತ್ತಾ ಅನ್ನುವಂಥ ಒಂದು ಸಬ್ಜೆಕ್ಟ್ ಇದರಲ್ಲಿದೆ, ಡೈಲಾಗ್ ಇಲ್ಲದೆ ಆಕ್ಟ್ ಮಾಡಿ ಪ್ರೇಕ್ಷಕರನ್ನು ಗೆಲ್ಲುವುದು ಕಷ್ಟ. ಆದಿತ್ಯ ಅಂಥ ಪ್ರಯತ್ನವನ್ನ ಮಾಡಿದ್ದಾರೆ' ಎಂದು ಹೇಳಿದರು. ಇಡೀ ಟೀಮ್ ಬಗ್ಗೆ ಮೆಚ್ಚುಗೆ ಮಾತನ್ನಾಡಿದರು ಎಸ್ ನಾರಾಯಣ್.
'ಮುತ್ತಣ್ಣ'ನ ಮಗನಾಗಲು ಹೊರಟೇಬಿಟ್ರು ಪ್ರಣಮ್; ಹರಸಿ ಕಳುಹಿಸಿದ ಕರುನಾಡ ಡೈನಾಮಿಕ್ ಸ್ಟಾರ್
ಇನ್ನು 5ಡಿ ಸಿನಿಮಾ ನಾಯಕ ನಟ ಆದಿತ್ಯ ಮಾತನಾಡಿ 'ನನ್ನ 20 ವರ್ಷಗಳ ಸಿನಿ ಜರ್ನಿಯಲ್ಲಿ ಇದು 25ನೇ ಸಿನಿಮಾ. ಈ ಚಿತ್ರದಲ್ಲಿ ಯಾರೂ ಊಹೆ ಮಾಡದ ಕ್ಲೈಮ್ಯಾಕ್ಸ್ ಇದೆ, ಅದು ನನ್ನ ಫೇವರಿಟ್. ಒಬ್ಬ ಬೋರ್‌ವೆಲ್ ಕಂಟ್ರ‍್ಯಾಕ್ಟರ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ' ಎಂದರು. ಈ ಮೂಲಕ 5ಡಿ ಚಿತ್ರದ ನಾಯಕನ ಪಾತ್ರದ ಪರಿಚಯದ ಗುಟ್ಟು ರಟ್ಟು ಮಾಡಿದ್ದಾರೆ ನಟ ಆದಿತ್ಯ.
ಶಾಹಿದ್ ಕಪೂರ್ ಯಾರಿಗೆ ಡಾಕ್ಟರ್, ಯಾರಿಗೆ ಪದ್ಮಶ್ರೀ; ಗುಟ್ಟು ಬಿಚ್ಚಿಟ್ಟ ಹೆಂಡತಿ ಮೀರಾ ರಜಪೂತ್!
ವೈದ್ಯಕೀಯ ಜಗತ್ತಿನಲ್ಲಿ ಬ್ಲಡ್ ಡೊನೇಷನ್‌ದು ಒಂದು ದೊಡ್ಡ ಮಾಫಿಯಾನೇ ನಡೆಯುತ್ತಿದೆ. ಅದು ಹೇಗೆ, ಇದರ ಹಿಂದೆ ಯಾರ‍್ಯಾರಿದ್ದಾರೆ ಎನ್ನುವುದೇ ಚಿತ್ರದ ಕಥಾವಸ್ತು. ರವಿ ಗುಂಟಿಮಡುಗು ಅವರ ಕಥೆ, ಕುಮಾರಗೌಡ ಅವರ ಛಾಯಾಗ್ರಹಣ, ಶಿವಪ್ರಸಾದ್ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ಇನ್ನು ಈ '5ಡಿ' ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಮೋಶನ್ ಕೂಡ ಶುರುವಾಗಿದೆ ಎನ್ನಬಹುದು.