
ವಿಭಿನ್ನ ಟಾಸ್ಕ್‌ಗಳ ಮೂಲಕ ಸದಾ ಪ್ರೇಕ್ಷಕರನ್ನು ಮನರಂಜಿಸುತ್ತಿರುವ ರಿಯಾಲಿಟಿ ಶೋ ಅಂದ್ರೆ ಬಿಗ್ ಬಾಸ್ ಸೀಸನ್-7. ಹಂತ ಹಂತದಲ್ಲೂ ತನ್ನದೇ ಶೈಲಿಯಲ್ಲಿ ವೀಕ್ಷಕರ ಪ್ರೀತಿ ಗಿಟ್ಟಿಸಿಕೊಂಡರುವ ಚಂದನ್ ಆಚಾರ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.
ಅತಿ ಹೆಚ್ಚು ವೋಟ್ ಗಿಟ್ಟಿಸಿದ ಚಂದನ್ ಆಚಾರ್ ಗೇಮ್ ಪ್ಲ್ಯಾನ್‌ಗೆ ಮನಸೋತ ಜನ!
ಕಳೆದ ವಾರ ಡಬಲ್ ನಾಮಿನೇಷ್ ಎಂದು ಸುದೀಪ್ ಚಮಕ್ ಕೊಟ್ಟು ಕೊನೆ ಹಂತದಲ್ಲಿ ಭೂಮಿ ಮತ್ತು ಪ್ರಿಯಾಂಕಾರನ್ನು ಸೇಫ್ ಮಾಡಿದರು. ಆದರೆ ಈ ವಾರ ಡಬಲ್ ಎಲಿಮನೇಷನ್ ಮಾಡಿದ್ದಾರೆ. 98 ನೇ ದಿನದಂದು ಡ್ಯಾನ್ಸರ್ ಕಿಶನ್ ಹೊರ ಬಂದರು. 99 ದಿನದಂದು ಚಂದನ್ ಹೊರ ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
BB7 ನಲ್ಲಿ ಚಂದನ್ ಆಚಾರ್ ಶೋ ಆಫ್ ಮಾಡ್ತಾ ಇದ್ದಾರಾ?
ಬಿಗ್ ಬಾಸ್ ಮೊದಲ ದಿನದಂದಲೂ ಒಂಟಿಯಾಗಿ ಸ್ಪರ್ಧಿಸುತ್ತಾ ಜನರ ಮನಸ್ಸು ಗೆದ್ದಿರುವ ಚಂದನ್ ವಿಭಿನ್ನ ಸ್ಪರ್ಧಿಯಾಗಿ ಉಳಿದರು. ಅಷ್ಟೇ ಅಲ್ಲದೆ ಚಂದನ್ ತಾಯಿ ಮನೆಯೊಳಗೆ ಬಂದಾಗ ಇನ್ನಿತ್ತರ ಸ್ಪರ್ಧಿಗಳೊಂದಿಗೆ ವರ್ತಿಸಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.