
ರೋಮ್ಯಾಂಟಿಕ್ ಹೀರೋ ವಿಜಯ್ ಸೂರ್ಯ (Romantic hero Vijay Surya) ಈ ಬಾರಿ ಖಡಕ್ ಲುಕ್ ನಲ್ಲಿ ಸೀರಿಯಲ್ ಗೆ ಎಂಟ್ರಿ ನೀಡಿದ್ರು. ದತ್ತಬಾಯ್, ಬಳ್ಳಾರಿ ಡಾನ್ ಅಂತಾನೇ ಫೇಮಸ್ ಆದವರು ವಿಜಯ್ ಸೂರ್ಯ ಅಲಿಯಾಸ್ ದತ್ತ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ದೃಷ್ಟಿಬೊಟ್ಟು ಸೀರಿಯಲ್ ನಲ್ಲಿ ವಿಜಯ್ ಸೂರ್ಯ ಕಾಣಿಸಿಕೊಳ್ತಿದ್ದಾರೆ ಅಂದಾಗ್ಲೆ ಹುಡುಗಿಯರ ಹೃದಯದಲ್ಲಿ ಚಿಟ್ಟೆ ಹಾರಾಟ ಶುರು ಮಾಡಿತ್ತು. ಲಕ್ಷಾಂತರ ಹುಡುಗಿಯರ ಫೆವರೆಟ್ ಹೀರೋ ವಿಜಯ್ ಸೂರ್ಯ. ಅವ್ರ ಸ್ಟೈಲ್, ಹೈಟ್ ಜೊತೆ ರೋಮ್ಯಾನ್ಸ್ ದೃಶ್ಯಗಳು ವೀಕ್ಷಕರನ್ನು ಹಿಡಿದಿಡೋದ್ರಲ್ಲಿ ಡೌಟೇ ಇಲ್ಲ.
ಕಲರ್ಸ್ ಕನ್ನಡ (Colors Kannada)ದಲ್ಲಿ ಈ ಹಿಂದೆ ಪ್ರಸಾರ ಆಗ್ತಿದ್ದ ಅಗ್ನಿಸಾಕ್ಷಿ (Agnisakshi) ಸೀರಿಯಲ್ ನಲ್ಲಿ ವಿಜಯ್ ಸೂರ್ಯ, ಸಿದ್ಧಾರ್ಥ್ ಆಗಿ ಕಾಣಿಸಿಕೊಂಡಿದ್ದರು. ವೈಷ್ಣವಿ ಗೌಡ ಜೊತೆ ವಿಜಯ್ ಸೂರ್ಯ ನಟಿಸಿದ್ದರು. ಸನ್ನಿಧಿ ಹಾಗೂ ಸಿದ್ಧಾರ್ಥ್ ನಡುವಿನ ಪ್ರೀತಿ, ರೋಮ್ಯಾನ್ಸ್, ಕಚುಗುಳಿ ಇಡುವ ಹುಸಿ ಮುನಿಸು, ಕಣ್ಸನ್ನೆಯ ಸಲಿಗೆ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಎಷ್ಟೋ ವೀಕ್ಷಕರು, ಸನ್ನಿಧಿ ಹಾಗೂ ಸಿದ್ಧಾರ್ಥ್ ರೋಮ್ಯಾನ್ಸ್ ನೋಡೋಕೆ ಸೀರಿಯಲ್ ನೋಡ್ತಿದ್ರು. ಅಗ್ನಿಸಾಕ್ಷಿ ಸೀರಿಯಲ್ ನಂತ್ರ ರೋಮ್ಯಾಂಟಿಕ್ ಹೀರೋ ಅಂತಾನೆ ಪ್ರಸಿದ್ಧಿ ಪಡೆದ ವಿಜಯ್ ಸೂರ್ಯ, ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ವಿಜಯ್ ಸೂರ್ಯ ಮತ್ತೆ ಬರ್ತಿದ್ದಾರೆ ಎಂದಾಗ ಎಲ್ಲ ಹೆಣ್ಮಕ್ಕಳು, ಅವ್ರ ರೋಮ್ಯಾನ್ಸ್ ನೋಡೋಕೆ ಕಾತುರರಾಗಿದ್ರು. ಆದ್ರೆ ದೃಷ್ಟಿಬೊಟ್ಟು ಸೀರಿಯಲ್ ನಲ್ಲಿ ದತ್ತನದ್ದು ಸ್ವಲ್ಪ ಡಿಫರೆಂಟ್ ಗೆಟಪ್. ರೌಡಿ ಲುಕ್ ನಲ್ಲಿ ಕಾಣಿಸಿಕೊಂಡಿರುವ ದತ್ತಬಾಯ್ ರೋಮ್ಯಾನ್ಸ್, ಪ್ರೀತಿಯಿಂದ ದೂರ ದೂರ. ಪ್ರೀತಿ ಮಾಡಿ ಮೋಸ ಹೋದ ದತ್ತ ಮತ್ತೆ ಆ ಕಡೆ ತಲೆ ಹಾಕಿ ಮಲಗೋದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದ. ಆದ್ರೆ ಅವನ ದೃಷ್ಟಿಯನ್ನು ದೃಷ್ಟಿ ಸಂಪೂರ್ಣ ಬದಲಿಸಿದ್ದಾಳೆ. ದತ್ತ ಹಾಗೂ ದೃಷ್ಟಿ ಲೈಫ್ ಬದಲಾಗ್ತಿದೆ. ದೃಷ್ಟಿ ಬಯಸಿದಂತೆ ದತ್ತ ರೋಮ್ಯಾಂಟಿಕ್ ಆಗ್ತಿದ್ದಾನೆ.
ದತ್ತನ ಕಾಲೆಳೆಯೋದ್ರಲ್ಲಿ ದೃಷ್ಟಿ ನಂಬರ್ ಒನ್. ಅವನನ್ನು ಕೆಣಕಿ ಮಜಾ ನೋಡುವ ದೃಷ್ಟಿ ಈ ಬಾರಿ ತಾನೇ ಸಿಕ್ಕಿ ಬಿದ್ದಿದ್ದಾಳೆ. ಸೀರಿಯಲ್ ನಿಧಾನವಾಗಿ ರೋಮ್ಯಾನ್ಸ್ ಗೆ ಟರ್ನ್ ಆಗ್ತಿದೆ. ದತ್ತನಿಗೆ ಪ್ರೀತಿ ಮಾಡೋಕೆ ಬರೋದಿಲ್ಲ, ಭಾವನೆ ಹೇಳಿಕೊಳ್ಳೋಕೆ ಬರೋದಿಲ್ಲ ಅಂತ ದೃಷ್ಟಿ ಹೇಳ್ತಿದ್ದಂತೆ ಅಡುಗೆ ಮನೆಗೆ ನುಗ್ಗಿದ ದತ್ತ, ನಾನು ರೌಡಿ ಮಾತ್ರ ಅಲ್ಲ, ಪ್ರೀತಿ ಕೂಡ ಮಾಡ್ತೇನೆ ಅನ್ನೋದನ್ನು ತೋರಿಸೋಕೆ ಹೊರಟಿದ್ದಾನೆ. ದೃಷ್ಟಿಯನ್ನು ಹಗ್ ಮಾಡಿ, ತನ್ನ ಪ್ರೀತಿ ಮಾತು ಶುರು ಮಾಡಿದ್ದಾನೆ.
ಕಲರ್ಸ್ ಕನ್ನಡ ಪ್ರೋಮೋ ಪೋಸ್ಟ್ ಮಾಡ್ತಿದ್ದಂತೆ ಫ್ಯಾನ್ಸ್ ಖುಷಿಯಾಗಿದ್ದಾರೆ. ಇಷ್ಟು ದಿನ ಇದು ಮಿಸ್ ಆಗ್ತಿತ್ತು. ಇನ್ಮುಂದೆ ಸೀರಿಯಲ್ ನೋಡೋಕೆ ಮಜ ಬರುತ್ತೆ ಅಂತ ಕಮೆಂಟ್ ಹಾಕಿದ್ದಾರೆ. ಬಹುತೇಕರು ದತ್ತ, ಸಿದ್ಧಾರ್ಥ್ ಆಗಿ ಬದಲಾಗ್ತಿದ್ದಾನೆ. ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ. ಸೀರಿಯಲ್ ನಲ್ಲಿ ರೋಮ್ಯಾನ್ಸ್ ನೋಡಿದ ವೀಕ್ಷಕರಿಗೆ ಅಗ್ನಿಸಾಕ್ಷಿ ನೆನಪಾಗಿದೆ. ಬೆಂಗಳೂರಿಗೆ ಹೋಗಿ ಬರ್ತೇನೆ ಅಂತ ಮನೆಯಿಂದ ಹೋಗಿದ್ದ ದತ್ತನ ಸ್ಟೈಲ್ ಕೂಡ ಸ್ವಲ್ಪ ಬದಲಾಗಿದೆ. ಹಾಗಾಗಿ ಫ್ಯಾನ್ಸ್, ವಿಜಯ್ ಸೂರ್ಯ ಮತ್ತೆ ಚಾಕೋಲೇಟ್ ಹೀರೋ ಆಗಿದ್ದಾರೆ ಎಂದಿದ್ದಲ್ಲದೆ, ದತ್ತನ ರೋಮ್ಯಾನ್ಸ್ ಗೆ ಟಿವಿ ನೋಡ್ತಾ ಬ್ಲಶ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.