
ಕಾರವಾರ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮ*ಹತ್ಯೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಚಂದ್ರಶೇಖರ್ ತಾಯಿ ಲಕ್ಷ್ಮೀ ಅವರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಚಂದ್ರಶೇಖರ್ ಸಾವಿಗೆ ಪತ್ನಿ ಕಮಲಾಕ್ಷ್ಮಿ ಕಿರುಕುಳ ವೇಳೆ ಕಾರಣನಾ ಎಂಬ ಅನುಮಾನಗಳು ಮೂಡಿವೆ. ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿರುವ ಕೆಲವು ವಿಡಿಯೋಗಳು ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಲಭಿಸಿವೆ. ವಿಡಿಯೋದಲ್ಲಿ ಪತ್ನಿ ಹಾಗೂ ಸಂಬಂಧಿ ಚಂದ್ರಶೇಖರ್‌ಗೆ ಹೊಡೆಯುತ್ತಿರೋದನ್ನು ಕಾಣಬಹುದಾಗಿದೆ. ಚಂದ್ರಶೇಖರ್ ಮದ್ಯಪಾನ ಮಾಡಿ ಮನೆಗೆ ಬಂದಾಗ ಆತನ ಮೇಲೆ ಹಲ್ಲೆ ನಡೆಲಾಗಿದೆ ಎನ್ನಲಾಗಿದೆ.
ಈ ವಿಡಿಯೋ ಬೆನ್ನಲ್ಲೇ ಪತ್ನಿ ಕಮಲಾಕ್ಷಿ ಕಿರುಕುಳದಿಂದ ಬೇಸತ್ತಿದ್ರಾ ಎಂಬ ಅನುಮಾನಗಳು ಮೂಡಿವೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ಚಂದ್ರಶೇಖರ್ ಸಿದ್ಧಿ ಕೆಲಸವಿಲ್ಲದೇ ನಿರುದ್ಯೋಗಿಯಾಗಿದ್ದರು. ಒಂದೆಡೆ ಕೆಲಸ ದೊರೆಯದ ಟೆನ್ಷನ್, ಇನ್ನೊಂದೆಡೆ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ.
ನನ್ನ ಮಗ ಚಂದ್ರಶೇಖರ್ ಮತ್ತು ಆತನ ಪತ್ನಿ ಕಮಲಾಕ್ಷಿಗೂ ಪದೇ ಪದೇ ಜಗಳ ಆಗುತ್ತಿತ್ತು ಎಂದು ಪುತ್ರನ ಸಾವಿನ ಬಗ್ಗೆ ಲಕ್ಷ್ಮೀ ಅನುಮಾನ ವ್ಯಕ್ತಪಡಿಸಿದ್ದರು. ನಂತರ ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಚಂದ್ರಶೇಖರ್ ತಾಯಿ ಲಕ್ಷ್ಮೀ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದಾರೆ.
ನಟನೆಯಲ್ಲಿ ಆಸಕ್ತಿ ಹೊಂದಿದ್ದ ಚಂದ್ರಶೇಖರ್ ಸಿದ್ಧಿ ನಿನಾಸಂನಲ್ಲಿ ನಾಟಕ ತರಬೇತಿ ಪಡೆದುಕೊಂಡಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ನಂತರ ಕೆಲವು ಧಾರವಾಹಿಗಳಲ್ಲಿ ಅಭಿನಯಿಸಿದ್ದರು. ಟಿವಿಯ ರಿಯಾಲಿಟಿ ಶೋಗಳು ಹಾಗೂ ಕಿರುತೆರೆಯಲ್ಲಿ ಹೆಚ್ಚಿನ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ, ಊರಿಗೆ ವಾಪಸಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದರಿಂದಾಗಿ ಕಳೆದ ಜನವರಿ ತಿಂಗಳಿಂದ ಮಾನಸಿಕವಾಗಿ ಜರ್ಜರಿತನಾಗಿದ್ದ ಚಂದ್ರಶೇಖರ್ ಸಿದ್ಧಿ ಪತ್ನಿ ಜತೆ ಗಲಾಟೆ ಮಾಡುತ್ತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.