ಭಾರತೀಯ ತಳಿ ಗೋಮೂತ್ರದಲ್ಲೇ ತಲೆ ತೊಳಿತಾರೆ ಆಫ್ರಿಕನ್ ಆದಿವಾಸಿಗಳು! ಡಾ ಬ್ರೋ ಹೇಳಿದ್ದು ಕೇಳಿ

By Suvarna News  |  First Published Jul 24, 2023, 10:50 AM IST

ಗೋವುಗಳನ್ನು ಗೋ ಮಾತೆಯೆಂದು ಪೂಜಿಸುವ ಪರಂಪರೆ ನಮ್ಮದು. ನಮ್ಮಲ್ಲಿ ಮಾತ್ರ ಇಂಥ ಆಚರಣೆ ಅಂದುಕೊಂಡರೆ ಆಫ್ರಿಕಾದ ಮುಂಡಾರಿ ಆದಿವಾಸಿಗಳು ಗೋಮೂತ್ರದಲ್ಲೇ ಸ್ನಾನ ಮಾಡ್ತಾರೆ. ಮತ್ತೊಂದು ವಿಚಾರ ಅಂದರೆ ಈ ಹಸುಗಳು ಭಾರತದವು. ಇಂಥಾ ಅಚ್ಚರಿ ಬಗ್ಗೆ ಡಾ ಬ್ರೊ ಹೇಳ್ತಾರೆ.


ಭಾರತಕ್ಕಿಂತ ಸಾವಿರಾರು ಮೈಲಿ ದೂರದಲ್ಲಿರೋದು ಆಫ್ರಿಕಾ. ಇಲ್ಲಿನ ಇಲ್ಲಿನ ಮುಂಡಾರಿ ಅನ್ನೋ ಆದಿವಾಸಿಗಳ ಗೋಪ್ರೀತಿ ಮಾತ್ರ ಭಾರತೀಯರನ್ನೂ ಮೀರಿಸುತ್ತದೆ. ಬೆಳಗ್ಗೆ ಬೇಗ ಎದ್ದು ಗಂಜಳದಲ್ಲೇ ಸ್ನಾನ ಮಾಡಿ, ಕೈಯಲ್ಲೇ ಹಸುವನ್ನು ಕಟ್ಟಿರುವ ಜಾಗವನ್ನು ಇವರ ಸಾರಿಸೋ ಕೆಲಸ ಮಾಡ್ತಾರೆ. ಇವರ ಇಡೀ ದಿನ ಗೋಸೇವೆಗೆ ಮೀಸಲು. ಇವರ ಹಸುಗಳಿಗೆ ಯಾರಾದರೂ ತೊಂದರೆ ಕೊಟ್ಟರೆ ಅವರ ಕಥೆ ಕೈಲಾಸ. ಕೋವಿ ತಗೊಂಡು ಹೊಡೆದು ಶೂಟ್‌ ಮಾಡೋದೇ. ಆಫ್ರಿಕಾ ಖಂಡದ ಸೌತ್ ಸುಡಾನ್‌ನಲ್ಲಿರುವ ಈ ಜಾಗದಲ್ಲಿ ಮುಂಡಾರಿ ಅನ್ನೋ ಆದಿವಾಸಿಗಳು ಗುಂಪು ಗುಂಪಾಗಿ ವಾಸ ಮಾಡ್ತಾರೆ. ಗುಂಪಿನಲ್ಲಿರುವ ಪ್ರತಿಯೊಬ್ಬರೂ ಬೆಳಗ್ಗಿಂದ ಸಂಜೆ ತನಕ ಗೋ ಸೇವೆಯಲ್ಲಿ ನಿರತರಾಗಿರುತ್ತಾರೆ. ಬೆಳಗ್ಗೆ ಎದ್ದಾಗಿಂದ ಇವರ ಹಸುವಿನ ಸೇವೆ ಶುರುವಾದರೆ ಮುಂದೆ ಹಸುಗಳನ್ನು ಮೇಯೋದಕ್ಕೆ ತಗೊಂಡು ಹೋಗೋದು, ಅವುಗಳ ದೇಖಾರೇಖಿ ನೋಡ್ಕೊಳ್ಳೋದು, ಅವುಗಳು ಇರುವ ಜಾಗವನ್ನು ಸ್ವಚ್ಚ ಮಾಡೋದು, ಹಸುವಿನ ಸೆಗಣಿಯನ್ನು ಒಟ್ಟು ಮಾಡಿ ಅದನ್ನು ಒಳಗಿಸೋದು. ಸಂಜೆ ಆಗುತ್ತಲೇ ಹಾಗೆ ಒಣಗಿಸಿದ ಸೆಗಣಿಗೆ ಬೆಂಕಿ ಕೊಡೋದು. ಹೀಗೆ ಇವರ ದಿನಚರಿ ಸಾಗ್ತಾ ಇದೆ.

ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನ್ ಗೊತ್ತಾ, ಇವರು ಇಷ್ಟೆಲ್ಲ ಪೂಜ್ಯನೀಯವಾಗಿ ಕಾಣೋ ಈ ಹಸುಗಳು ಭಾರತದಿಂದ ಬಂದವು! ಹೌದು. ಸುಮಾರು ಐನೂರು ಆರು ನೂರು ವರ್ಷಗಳ ಕೆಳಗೇ ಈ ಹಸುಗಳನ್ನು ವ್ಯಾಪಾರ ಮಾಡಿ ಇಲ್ಲಿದೆ ತರಲಾಗಿದೆ. ಅವತ್ತು ಬೆರಳೆಣಿಕೆಯಲ್ಲಿ ಇಲ್ಲಿಗೆ ಬಂದ ಹಸುಗಳ ಸಂಖ್ಯೆ ಇವತ್ತು ಕೋಟಿ ಹತ್ತಿರತ್ತಿರ ಇದೆ ಅಂತಾರೆ ಡಾ ಬ್ರೊ. ಭಾರತದ ಹಸುಗಳು ಸಿಕ್ಕಾಪಟ್ಟೆ ಇಲ್ಲಿ ಕಾಣಸಿಗುತ್ತವೆ. ಹಸುಗಳಿಗಾಗಿ ದೊಡ್ಡ ದೊಡ್ಡ ಮೈದಾನ ಇದೆ. ಮೈದಾನವನ್ನು ಬಹಳ ಸ್ವಚ್ಛವಾಗಿ ಇಟ್ಟಿದ್ದಾರೆ. ಮಕ್ಕಳಿಗೆ ಹಸು ಸಾಕೋದ್ರಲ್ಲೇ ನಿರತರು.

Tap to resize

Latest Videos

ಪ್ರೀತಿ ಅಂದ್ರೆ ಕಟ್ಟಿ ಹಾಕೋದಲ್ಲ, ಫ್ರೀಯಾಗಿ ಬಿಡೋದು, ಬಾಂಡಿಂಗ್ ಪಾಠ ಹೇಳಿದ ಅಮೃತಧಾರೆ

ಇಲ್ಲೇ ಅವರ ಆಟ, ಪಾಟ, ನಿದ್ದೆ ಎಲ್ಲ. 'ನಮ್ಮನೆಯಲ್ಲಿ ಹಸು ಸಾಕುತ್ತಿರುವಾಗ ನಾನು ಸೆಗಣಿಯನ್ನು ಪೊಕರೆಯಿಂದ ಕಷ್ಟ ಬಿದ್ದು ಎತ್ತುತ್ತಿದ್ದೆ. ಆದರೆ ಇಲ್ಲನ ಜನ ಕೈ ಇಂದಲೇ ಸೆಗಣೆ ಸಾರಿಸಿ, ನೆಲವನ್ನು ಸ್ವಚ್ಛಗೊಳ್ತಿಸ್ತಾರೆ' ಅಂತ ಅಚ್ಚರಿಯ ಸಂಗತಿ ಹೇಳ್ತಾರೆ ಬ್ರೋ. ಮತ್ತೊಂದು ವಿಚಾರ ಅಂದರೆ ಈ ಕ್ಲೀನಿಂಗ್ ಕೆಲಸ ಮಾಡೋದೆಲ್ಲ ಮಕ್ಕಳು. ಪೊರಕೆ ಬಳಸದೇ ತಮ್ಮ ಎಳೆಯ ಕೈಗಳಿಂದ ಹಸುಗಳು ವಾಸಿಸೋ ಜಾಗದ ಕಸ ಸೆಗಣಿ ಎಲ್ಲ ಸಾರಿಸ್ತಾರೆ. ಹಸುಗಳು ಮೇದುಕೊಂಡು ವಾಪಾಸ್‌ ಬಂದಾಗ ಅವುಗಳನ್ನು ಕಟ್ಟಿಹಾಕಿ ಅವುಗಳನ್ನು ವಿಶ್ರಾಂತಿಗೆ ಬಿಡಲಾಗುತ್ತದೆ.

ಇನ್ನೊಂದು ಕಡೆ ತಾವು ಶೇಖರಿಸಿ ಒಣಗಿಸಿಟ್ಟ ಹಸುಗಳ ಸೆಗಣಿಗೆ ಬೆಂಕಿ ಹಾಕಿ ಹೊಗೆ ಬರೋ ಹಾಗೆ ಮಾಡ್ತಾರೆ. ಇದು ಇವರಿಗೂ ಹಸುಗಳಿಗೂ ಸೊಳ್ಳೆ ಕಾಟದಿಂದ ಮುಕ್ತಿ ಕೊಡುತ್ತದೆ. ಇಲ್ಲಿ ಕೊಟ್ಟಿಗೆಗೆ ಗೊಂಟಲು ಅಂತಾರೆ. ಈ ಗೊಂಟಲುಗಳಿರೋ ಜಾಗದಲ್ಲೇ ಈ ಮುಂಡಾರಿ ಜನರ ವಾಸ. ಹಸುಗಳ ಜೊತೆಗೇ ಸಣ್ಣ ಜೋಪಾಡಿ ಒಳಗೆ ಇವರ ವಾಸ.

ಪತಿ, ಮಗನ ಜೊತೆ ರಜೆ ಎಂಜಾಯ್​ ಮಾಡ್ತಿರೋ ಪುಟ್ಟಕ್ಕನ ಮಕ್ಕಳು 'ಕಿರಿಕ್​ ರಾಜೇಶ್ವರಿ'!

ಹಾಗೆ ನೋಡಿದರೆ ಭಾರತದಲ್ಲಿ ತುಂಬ ಹಿಂದೆ ನಾಟಿ ಹಸು ಜಾಸ್ತಿ ಇತ್ತು. ಈಗ ದೇಸಿ ಹಸುಗಳು ಕಾಣಸಿಗೋದೇ ಅಪರೂಪ. ಹೈನುಗಾರಿಕೆ ನಮ್ಮಲ್ಲಿ ಕಂಪ್ಲೀಟ್ ಕಮರ್ಷಿಯಲ್ ಆಗಿಬಿಟ್ಟಿದೆ. ಹೀಗಾಗಿ ಸತ್ವಯುತ ಹಾಲು ನಮಗೆ ಸಿಗಲ್ಲ. ದೇಸಿ ಆಕಳ ಹಾಲು, ತುಪ್ಪಕ್ಕೆ ವಿಪರೀತ ದರ. ಹೀಗಾಗಿ ಭಾರತೀಯರೆಲ್ಲ ಹೊರ ದೇಶಗಳ ಹಸುವಿನ ಹಾಲಿಗೆ ಶರಣಾಗಿದ್ದಾರೆ. ಆದರೆ ನಮ್ಮ ದೇಶದಿಂದ ಸಾವಿರಾರು ಕಿಮೀ ದೂರದ ಈ ಜಾಗದಲ್ಲಿ ಮಾತ್ರ ನಮ್ಮ ಹಸುಗಳು ಇವೆ. ಈ ಬುಡಕಟ್ಟು ಜನ ಹಸುವಿನ ಹಾಲು, ಮೊಸರು ಸೇವಿಸಿ ಗಟ್ಟಿಮುಟ್ಟಾಗಿದ್ದಾರೆ. ಅಷ್ಟೇ ಅಲ್ಲ ಗಂಜಳವನ್ನು ನಿರಂತರವಾಗಿ ಸೇವಿಸುತ್ತ ಅದರಲ್ಲೇ ಸ್ನಾನ ಮಾಡುತ್ತ ಇರುವ ಕಾರಣ ರೋಗಗಳು ಇವರ ಸಮೀಪ ಸುಳಿಯೋದಿಲ್ಲ. ಅನಾರೋಗ್ಯ ಸಮಸ್ಯೆ ಬರಲ್ಲ. ಚರ್ಮರೋಗದಿಂದ ಹಿಡಿದು ಅಸ್ತಮಾವರೆಗೆ ಇಲ್ಲಿನ ಜನ ಎಲ್ಲ ರೋಗಗಳಿಂದ ಮುಕ್ತರು. ನಮ್ಮಲ್ಲಿ ಕಾರು, ಮನೆ ನೋಡ ಶ್ರೀಮಂತಿಕೆ ಅಳೆದರೆ ಇಲ್ಲಿ ಶ್ರೀಮಂತಿಕೆ ಅಳೆಯೋದು ಜನರಲ್ಲಿ ಎಷ್ಟು ಹಸುಗಳಿವೆ ಅನ್ನೋದರ ಮೇಲೆ. ಬಹಳ ಪ್ರೀತಿಯಿಂದ ಹಸು ನೋಡಿಕೊಳ್ಳೋ ಈಜನ ನಮ್ಮ ಹಾಗೆ ಹಸುಗಳಿಗಗೆ ಮೂಗು ದಾರ ಹಾಕಲ್ಲ.

click me!