
ಮುಂಬೈ (ಅ.14) ಕಾಂತಾರಾ ಚಾಪ್ಟರ್ 1 ಸಿನಿಮಾ ಭರ್ಜರಿ ಯಶಸ್ಸು ದಾಖಲಿಸಿದೆ. ದಾಖಲೆಯ ಕಲೆಕ್ಷನ್‌ನೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ದೀಪಾವಳಿ ರಜೆ ಆಗಮಿಸುತ್ತಿರುವ ಕಾರಣ ಕಲೆಕ್ಷನ್ ಜೋರಾಗುವ ಸಾಧ್ಯತೆ ಇದೆ. ಕಾಂತಾರಾ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಎಲ್ಲೆಡೆಗಳಿಂದ ಪ್ರಶಂಸೆ ಮಾತುಗಳೇ ಕೇಳಿಬರುತ್ತಿದೆ. ಇದರ ನಡುವೆ ರಿಷಬ್ ಶೆಟ್ಟಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹಾಟ್ ಸೀಟಿನಲ್ಲಿ ಕುಳಿತು ಅಮಿತಾಬ್ ಬಚ್ಚನ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೇ ವೇಳೆ ಅಮಿತಾಬ್ ಬಚ್ಚನ್‌ಗೆ ರಿಷಬ್ ಶೆಚ್ಟಿ , ಪಂಚೆ ಉಡುಗೊರೆಯಾಗಿ ನೀಡಿದ್ದಾರೆ. ಈ ಪಂಚೆ ಜಾರಿದ್ರೆ ಮಾತ್ರ ಅಂತಾರಾಷ್ಟ್ರೀಯ ಸಮಸ್ಯೆ ಎಂದು ಅಮಿತಾಬ್ ಬಚ್ಚನ್ ಹಾಸ್ಯ ಮಾಡಿದ್ದಾರೆ.
ರಿಷಬ್ ಶೆಟ್ಟಿ ಕೌನ್ ಬನೇಗಾ ಕರೋಡ್ ಪತಿ ವೇದಿಕೆಯಲ್ಲಿ ಅಮಿತಾಬ್ ಬಚ್ಚನ್‌ಗೆ ಪಂಚೆ ಉಡುಗೊರೆಯಾಗಿ ನೀಡಿದ್ದಾರೆ. ಬಳಿಕ ಹಾಟ್ ಸೀಟಿನಲ್ಲಿ ಮಾತುಕತೆ ಮುಂದವರಿಸಿದ್ದಾರೆ. ಇದೇ ವೇಳೆ ಪಂಚೆ ಕುರಿತು ಅಮಿತಾಬ್ ಬಚ್ಚನ್ ಮಾತನಾಡಿದ್ದಾರೆ. ಪಂಚೆ ಉಡುವುದು ಒಂದು ಕಲೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ. ರಿಷಬ್ ಶೆಟ್ಟಿ ನೀಡಿದ ಪಂಚೆಯನ್ನು ಖಂಡಿತವಾಗಿ ನಾನು ಉಡುತ್ತೇನೆ. ಆದರೆ ಅದಕ್ಕೂ ಮುಂಚೆ ಪಂಚೆ ಉಡುವುದು ಹೇಗೆ ಎಂದು ನೀವು ಹೇಳಿಕೊಡಬೇಕು. ಇಲ್ಲದಿದ್ದರೆ ಪಂಚೆ ಅಲ್ಲಿ ಇಲ್ಲಿ ಜಾರಲಿದೆ. ಎಲ್ಲಾದರೂ ಪಂಚೆ ಜಾರಿದರೆ ಅಂತಾರಾಷ್ಟ್ರೀಯ ಸಮಸ್ಸೆಯಾಗಲಿದೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಅಮಿತಾ ಬಚ್ಚನ್ ಮಾತಿಗೆ ರಿಷಬ್ ಶೆಟ್ಟಿ ಹಾಗೂ ನೆರೆದ ಪ್ರೇಕ್ಷಕರು ನಕ್ಕು ಸುಸ್ತಾಗಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಪ್ರೋಮ್ ರಿಲೀಸ್ ಮಾಡಲಾಗಿದೆ. ಅಮಿತಾಬ್ ಬಚ್ಚನ್ ಅದ್ಧೂರಿಯಾಗಿ ರಿಷಬ್ ಶೆಟ್ಟಿ ಸ್ವಾಗತಿಸಿದ್ದಾರೆ. ಇದೇ ವೇಳೆ ಇತ್ತೀಚೆಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಮೋಹನ್‌ಲಾಲ್ ಶೈಲಿಯಲ್ಲಿ ಪಂಚೆ ಮಡಚಿ ಕಟ್ಟಿ ವೇದಿಕೆ ಹತ್ತಿದ್ದಾರೆ. ಇಷ್ಟೇ ಅಲ್ಲ ಮೋಹನ್‌ಲಾಲ್ ಜನಪ್ರಿಯ ಡೈಲಾಗ್ ಹೇಳಿದ್ದಾರೆ.
ಕಾಂತಾರಾ ಚಾಪ್ಟರ್ 1 ಸಿನಿಮಾ ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಯಶಸ್ಸಿನಲ್ಲಿರುವ ರಿಷಬ್ ಶೆಟ್ಟಿ ದೇಶದ ಹಲವು ನಗರಗಳಿಗೆ ತೆರಳಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಇಷ್ಟೇ ಅಲ್ಲ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಿವಿ ಶೋಗಳು ಸೇರಿದಂತೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕಾಂತಾರಾ ಚಾಪ್ಟರ್ 1 ಸಿನಿಮಾ ಅದ್ಧೂರಿ ಯಶಸ್ಸು ಕಂಡಿದೆ. ಈಗಾಗಲೇ 600 ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹ ಮಾಡಿದೆ. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.