
ಬೆಂಗಳೂರು (ಮಾ.17): ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಬೈಕ್ ಮೇಲೆ ಇಬ್ಬರು ಯುವತಿಯರನ್ನು ಕೂರಿಸಿಕೊಂಡು ರೀಲ್ಸ್ ಮಾಡಿದ ವ್ಯಕ್ತಿಗೆ ಈಗ ಸಂಚಾರಿ ಪೊಲೀಸರು 2,000 ರೂಪಾಯಿ ದಂಡದ ಶಾಕ್ ನೀಡಿದ್ದಾರೆ. ದೊಡ್ಡಬಳ್ಳಾಪುರ ಮೂಲದ ದಿನಗೂಲಿ ಕಾರ್ಮಿಕ ಮಂಜುನಾಥ್ ಜಿ. ಎಂಬಾತನಿಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ. ಈತನಿಗೆ ಸದಾ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಅಪ್‌ಲೋಡ್ ಮಾಡುವ ಹುಚ್ಚು. ಇದೇ ಕಾರಣಕ್ಕೆ ಈತನಿಗೆ ಈ ಸೋಶಿಯಲ್ ಮೀಡಿಯಾದಲ್ಲಿ 'ರೀಲ್ಸ್ ಮಂಜ' ಎಂಬ ಅಡ್ಡಹೆಸರೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಜುನಾಥ್ ಇತ್ತೀಚೆಗೆ ಮಡಗೊಂಡನಹಳ್ಳಿ ಮುಖ್ಯ ರಸ್ತೆಯಲ್ಲಿ ತನ್ನ ಬೈಕ್ ಮೇಲೆ ಇಬ್ಬರು ಯುವತಿಯರನ್ನು ಕೂರಿಸಿಕೊಂಡು (ತ್ರಿಪಲ್ ರೈಡಿಂಗ್) ವಿಡಿಯೋ ರೆಕಾರ್ಡ್ ಮಾಡಿದ್ದ. ವಿಡಿಯೋದಲ್ಲಿ ಯಾರೊಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಅಷ್ಟೇ ಅಲ್ಲದೆ, ಬೈಕ್ ಚಲಾಯಿಸುವಾಗ ಮಂಜುನಾಥ್ ಜೋರಾಗಿ "ಹುಲಿ.. ಹುಲಿ.." ಎಂದು ಕಿರುಚಾಡುತ್ತಾ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದ್ದ.
ಈ ವಿಡಿಯೋ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಕಣ್ಣಿಗೆ ಬೀಳುತ್ತಿದ್ದಂತೆ, ಅವರು ಮಂಜುನಾಥ್ ವಿರುದ್ಧ BNS ಸೆಕ್ಷನ್ 281 (ಅತಿವೇಗ ಮತ್ತು ಅಜಾಗರೂಕ ಚಾಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಲ್ಮೆಟ್ ಧರಿಸಿದೇ ಬೈಕ್ ರೈಡ್ ಮಾಡಿದ್ದಕ್ಕೆ 500 ರೂಪಾಯಿ, ಹಿಂದಿದ್ದ ಇಬ್ಬರೂ ಯುವತಿಯರೂ ಹೆಲ್ಮೆಟ್ ಧರಿಸದ ಕಾರಣಕ್ಕೆ ತಲಾ 500 ರೂಪಾಯಿ ಹಾಗೂ. ಇತರ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಉಳಿದ ಮೊತ್ತ ಸೇರಿ ಒಟ್ಟು ₹2,000 ದಂಡವನ್ನು ಆತ ಪಾವತಿಸಿದ್ದಾನೆ. ಪೊಲೀಸರು ದಂಡ ಹಾಕುತ್ತಿದ್ದಂತೆ ಸೋಶಿಯಲ್ ಮೀಡಿಯಾದಿಂದ ಅವರು ತಮ್ಮ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.