ಬಿಗ್ ಬಾಸ್ ವಿನ್ನರ್‌ಗೆ ವಿಧಾನಸಭೆ ಚುನಾವಣೆ ಟಿಕೆಟ್, ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ

Published : Mar 16, 2026, 10:14 PM IST
Bigg boss Akhil Marar

ಸಾರಾಂಶ

ಬಿಗ್ ಬಾಸ್ ವಿನ್ನರ್‌ಗೆ ವಿಧಾನಸಭೆ ಚುನಾವಣೆ ಟಿಕೆಟ್, ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ, ನಿರ್ದೇಶಕ, ನಟ ಹಾಗೂ ಬಿಗ್ ಬಾಸ್ ವಿನ್ನರ್ ಚನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಈಗಾಗಲೇ ಭರ್ಜರಿ ಗೆಲುವಿಗೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. 

ತಿರುವಂತಪುರಂ (ಮಾ.16) ಬಿಗ್ ಬಾಸ್ ಸ್ಪರ್ಧಿಗಳು ಸಿನಿಮಾ, ಸೀರಿಯಲ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಇದೀಗ ಮಾಜಿ ಬಿಗ್ ಬಾಸ್ ವಿನ್ನರ್ ವಿಧಾನಸಭಾ ಚುನಾವಣೆಗೆ ಧುಮುಕಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕೇರಳದಲ್ಲಿ ಬಿರಿಸಿನ ಸ್ಪರ್ಧೆ ಎರ್ಪಡಲಿದೆ. ಇದೀಗ ಕೇರಳದ ಬಿಗ್ ಬಾಸ್ 5ನೇ ಆವೃತ್ತಿ ಗೆದ್ದ ಅಖಿಲ್ ಮಾರಾರ್ ವಿಧಾನಸಭೆ ಚನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಎನ್‌ಡಿಎ ಮೈತ್ರಿ ಪಕ್ಷವಾಗಿರುವ ಟ್ವೆಂಟಿ20 ಪಕ್ಷದಿಂದ ಅಖಿಲ್ ಮಾರಾರ್ ಸ್ಪರ್ಧಿಸುತ್ತಿದ್ದಾರೆ.

ಬಿಗ್ ಬಾಸ್ ವಿನ್ನರ್‌ಗೆ ಟಿಕೆಟ್ ಘೋಷಣೆ

ಕೇರಳ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಟ್ವೆಂಟಿ20 ಪಕ್ಷವು ಮೂರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ತ್ರಿಕ್ಕಾಕರ ಕ್ಷೇತ್ರದಿಂದ ಖ್ಯಾತ ನಿರ್ದೇಶಕ, ಬಿಗ್ ಬಾಸ್ ವಿನ್ನರ್ ಅಖಿಲ್ ಮಾರಾರ್ ಅವರನ್ನು ಕಣಕ್ಕಿಳಿಸಿದೆ. ಅಖಿಲ್ ಮಾರಾರ್ ಇತ್ತೀಚೆಗಷ್ಟೇ ಟ್ವೆಂಟಿ20 ಪಕ್ಷ ಸೇರಿಕೊಂಡಿದ್ದರು. ಕೇರಳದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ಟ್ಪೆಂಟಿ20 ಪಕ್ಷ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ.

ಬಿಗ್ ಬಾಸ್‌ನಲ್ಲಿ ದಾಖಲೆ ಮತ ಪಡೆದಿದ್ದ ವಿನ್ನರ್

ಬಿಗ್ ಬಾಸ್ 5ನೇ ಆವೃತ್ತಿಯಲ್ಲಿ ದಾಖಲೆಯ ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದರು. ಈ ಮೂಲಕ ಅಖಿಲ್ ಮಾರಾರ್ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ರಾಜಕೀಯವಾಗಿ ಪ್ರಖರ ವಿಶ್ಲೇಷಣೆ ಮೂಲಕವೂ ಗಮನಸೆಳೆದಿದ್ದರು. ಈ ಬಾರಿ ಕೇರಳದಲ್ಲಿ ಬಿಜೆಪಿ ಭಾರಿ ಬದಲಾವಣೆ ನಿರೀಕ್ಷೆಯಲ್ಲಿದೆ. ಇದೀಗ ಅಖಿಲ್ ಮಾರಾರ್ ಸ್ಪರ್ಧೆಯಿಂದ ಕೇರಳದಲ್ಲಿ ಚುನಾವಣೆ ಕಣ ರಂಗೇರಿದೆ. ಸ್ಪರ್ಧೆ ತೀರ್ವಗೊಂಡಿದೆ. ಇತ್ತ ಸಿನಿಮಾ ನಿರ್ದೇಶ, ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಮೇಜರ್ ರವಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ 47 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

ಬಿಜೆಪಿ ಕೂಡ ತನ್ನ ಮೊದಲ ಹಂತದ 47 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನೇಮಂ ಕ್ಷೇತ್ರದಿಂದ ರಾಜೀವ್ ಚಂದ್ರಶೇಖರ್ ಅವರೇ ಸ್ಪರ್ಧಿಸಲಿದ್ದಾರೆ. ವಟ್ಟಿಯೂರ್‌ಕಾವುನಲ್ಲಿ ಆರ್. ಶ್ರೀಲೇಖಾ, ಮಂಜೇಶ್ವರದಲ್ಲಿ ಕೆ. ಸುರೇಂದ್ರನ್, ಬೇಪ್ಪೂರ್‌ನಲ್ಲಿ ಕೆ.ಪಿ. ಪ್ರಕಾಶ್ ಬಾಬು, ಕಟ್ಟಾಕ್ಕಡದಲ್ಲಿ ಪಿ.ಕೆ. ಕೃಷ್ಣದಾಸ್, ಕಳಕ್ಕೂಟ್ಟಂನಲ್ಲಿ ವಿ. ಮುರಳೀಧರನ್, ತ್ರಿಶೂರ್‌ನಲ್ಲಿ ಪದ್ಮಜಾ, ತಿರುವಲ್ಲಾದಲ್ಲಿ ಅನೂಪ್ ಆಂಟನಿ, ಪಾಲಕ್ಕಾಡ್‌ನಲ್ಲಿ ಶೋಭಾ ಸುರೇಂದ್ರನ್, ಪಿ.ಸಿ. ಜಾರ್ಜ್ ಮತ್ತು ಮೇಜರ್ ರವಿ ಸ್ಪರ್ಧೆ ಮಾಡಲಿದ್ದಾರೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bhagyalakshmi Making Video: ಸೀರೆಯುಟ್ಟು ಭಾಗ್ಯ ಫೈಟಿಂಗ್‌- ಮುಟ್ತಿದ್ದಂತೆಯೇ ಉರುಳಿ ಉರುಳಿ ಬಿದ್ದ ರೌಡಿಗಳು
ಸೀರೆಯಲ್ಲಿ ಕೊಂಚ ಹೆಚ್ಚೇ ಬೋಲ್ಡ್ ಆಗಿ ಕಾಣಿಸಿಕೊಂಡ ಇಶಿತಾ ವರ್ಷ