ಯ್ಯಪ್ಪಾ! ಬಿಗ್‌ ಬಾಸ್‌ಯಿಂದ ಬಂದ್ಮೇಲೆ ಚಂದನಾ ಪಡೆಯುತ್ತಿರುವ ಸಂಭಾವನೆ ನೋಡಿ

Kannadaprabha News   | Asianet News
Published : Mar 31, 2020, 08:29 AM IST
ಯ್ಯಪ್ಪಾ! ಬಿಗ್‌ ಬಾಸ್‌ಯಿಂದ ಬಂದ್ಮೇಲೆ ಚಂದನಾ ಪಡೆಯುತ್ತಿರುವ ಸಂಭಾವನೆ ನೋಡಿ

ಸಾರಾಂಶ

ಆ್ಯಕ್ಟಿಂಗ್‌ ಜತೆಗೆ ಆ್ಯಂಕರಿಂಗ್‌ ಕ್ಷೇತ್ರಕ್ಕೂ ಕಾಲಿಟ್ಟಿರುವ ನಟಿ ಮಣಿಯರ ಸಾಲಿನಲ್ಲೀಗ ಹೆಚ್ಚು ಸುದ್ದಿಯಲ್ಲಿದ್ದವರು ಬಿಗ್‌ ಬಾಸ್‌ ಖ್ಯಾತಿಯ ನಟಿ ಹಾಗೂ ಗಾಯಕಿ ಚಂದನಾ ಅನಂತ ಕೃಷ್ಣ. ಕಲರ್ಸ್‌ ಕನ್ನಡದಲ್ಲಿನ ‘ಹಾಡು ಕರ್ನಾಟಕ’ ರಿಯಾಲಿಟಿ ಶೋ ನಿರೂಪಿಸುವ ಈ ಮಾತಿನ ಮಲ್ಲಿಯ ಜತೆಗೆ ಒಂದು ಮಾತುಕತೆ.

ನಟಿಯಾಗಿದ್ದವರು ನೀವು, ಆ್ಯಂಕರಿಂಗ್‌ ಕ್ಷೇತ್ರಕ್ಕೆ ಯಾಕೆ ಬಂದ್ರಿ?

ಅದಕ್ಕೆ ಎರಡು ಕಾರಣ. ಒಂದು ಮನೆಯವರ ಆಸೆ ಮತ್ತು ಪ್ರೇರಣೆ. ಎರಡು ಕಲರ್ಸ್‌ ಕನ್ನಡ ನನ್ನ ಮೇಲಿಟ್ಟಿರುವ ವಿಶ್ವಾಸ. ನಾನು ಆ್ಯಂಕರಿಂಗ್‌ ಕ್ಷೇತ್ರಕ್ಕೆ ಹೋಗಬೇಕು ಅನ್ನೋದು ಮನೆಯವರ ಆಸೆ ಆಗಿತ್ತು. ಟಿವಿಯಲ್ಲಿ ಅನುಶ್ರೀ ಅವರನ್ನು ನೋಡಿದಾಗೆಲ್ಲ ನೀನು ಯಾಕೆ ಹೀಗೆ ಮಾಡಬಾರದು ಅಂತಿದ್ರು. ಅದೇ ಸಮಯಕ್ಕೆ ಕಲರ್ಸ್‌ ಕನ್ನಡದವರು ಕರೆದು ಅವಕಾಶ ಕೊಟ್ಟರು.

ಆ್ಯಕ್ಟಿಂಗ್‌ ಮತ್ತು ಆ್ಯಂಕರಿಂಗ್‌ ನಡುವೆ ನಿಮಗೆ ಸುಲಭ ಎನಿಸಿದ್ದು ಯಾವುದು?

ಯಾವುದು ಸುಲಭ ಅಲ್ಲ. ಎರಡೂ ಸವಾಲಿನ ಕೆಲಸವೇ. ಎರಡಕ್ಕೂ ಆಸಕ್ತಿ ಮತ್ತು ಶ್ರದ್ದೆ ಮುಖ್ಯ. ಹಾಗಂತ ಎರಡು ಒಂದೇ ಅಲ್ಲ. ಸಾಕಷ್ಟುವ್ಯತ್ಯಾಸ ಇದೆ. ಆ್ಯಕ್ಟಿಂಗ್‌ ಕ್ಯಾಮರಾ ಮುಂದೆ ಇದ್ದರೆ, ಆ್ಯಂಕರಿಂಗ್‌ ಸ್ಟೇಜ್‌ನಲ್ಲಿ ಇರುತ್ತೆ. ಅಲ್ಲಿ ನಾವು ನಾವಾಗಿಯೇ ನಮ್ಮ ಪ್ರತಿಭೆ ತೋರಿಸಬೇಕಾಗುತ್ತದೆ. ಆ್ಯಕ್ಟಿಂಗ್‌ ಹಾಗಿರುವುದಿಲ್ಲ. ಒಂದು ಪಾತ್ರಕ್ಕೆ ನಿರ್ದೇಶಕರು ಹೇಳಿದಂತೆಯೇ ಅಭಿನಯಿಸಬೇಕಾಗುತ್ತದೆ.

BB7: ಕಿರುತೆರೆಯ ರಾಣಿ ಚಂದನ ಅನಂತಕೃಷ್ಣಗೆ ನಿಜ್ವಾಗ್ಲೂ ಲವ್‌ ಆಗಿದ್ಯಾ?

ಬಿಗ್‌ ಬಾಸ್‌ನಿಂದ ಬಂದು ಹಾಡು ಕರ್ನಾಟಕ ಸೇರಿದ್ರಿ...

ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆಗಿಹೊರ ಬಂದ ನಂತರ ಹಾಡು ಕರ್ನಾಟಕ ರಿಯಾಲಿಟಿ ಶೋ ರೂಪುರೇಷೆ ಶುರುವಾಗಿತ್ತು. ಹೊರ ಬಂದ ದಿನವೇ ನಂಗೆ ಕಲರ್ಸ್‌ ಕನ್ನಡದಿಂದ ಫೋನ್‌ ಬಂತು. ಒಂದು ಮ್ಯೂಸಿಕ್‌ ರಿಯಾಲಿಟಿ ಶೋಗೆ ನೀವೇ ಆ್ಯಂಕರ್‌ ಅಂದ್ರು.

ಸ್ಟಾರ್‌ ಆ್ಯಂಕರ್‌ಗಳ ಸಂಭಾವನೆ ಸಿಕ್ಕಾಪಟ್ಟೆಇರುತ್ತೆ ಅಂತಾರಲ್ಲ, ಅದು ನಿಜವೇ?

ಅಯ್ಯೋ, ಹೇಳಿಕೊಳ್ಳುವಷ್ಟೇನು ಇಲ್ಲ. ಇಷ್ಟುವರ್ಷದ ನನ್ನ ಅನುಭವ ಮತ್ತು ಟ್ಯಾಲೆಂಟ್‌ಗೆ ಏನು ಬೆಲೆ ಸಿಗಬೇಕೊ ಅಷ್ಟುಸಿಗುತ್ತದೆ. ಅದು ನನಗೆ ಖುಷಿಯೂ ಕೊಟ್ಟಿದೆ. ಅಷ್ಟುಸಾಕು.

ಆ್ಯಂಕರಿಂಗ್‌ನಲ್ಲೀಗ ನೀವು ಎಷ್ಟುಪರ್ಫೆಕ್ಟ್?

ನಾನಿಲ್ಲಿ ಇನ್ನೂ ಲರ್ನರ್‌. ಕಲಿಯುತ್ತಿದ್ದೇನೆ. ಆ ಕಲಿಕೆಗೆ ಜಡ್ಜಸ್‌ಗಳಾದ ಹರಿಕೃಷ್ಣ ಸರ್‌, ರಘು ದೀಕ್ಷಿತ್‌ ಸರ್‌ ಹಾಗೂ ಇಂದು ನಾಗರಾಜ್‌ ಮೇಡಂ ತುಂಬಾ ಸಹಕಾರ ನೀಡುತ್ತಿದ್ದಾರೆ. ಯಾರಾದರೂ ಟೀಕೆ ಮಾಡಿ ಕಮೆಂಟ್‌ ಹಾಕಿದರೆ ಅದೆಲ್ಲವನ್ನು ಹೇಗೆ ಫೇಸ್‌ ಮಾಡಬೇಕು ಅನ್ನೋದನ್ನು ರಘು ಸರ್‌ ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?