'ಬಿಗ್ ಬಾಸ್' ಹೋಸ್ಟ್ ಮಾಡ್ತಾರಾ ರಣ್ವೀರ್ ಸಿಂಗ್? ಹಾಗಾದ್ರೆ ಸಲ್ಮಾನ್ ಕಥೆ ಏನು?

By Suvarna News  |  First Published Jul 5, 2022, 3:43 PM IST

ಬಿಗ್ ಬಾಸ್ OTT ಸೀಸನ್ 2ಅನ್ನು ರಣ್ವೀರ್ ಸಿಂಗ್ (Ranveer Singh) ನಡೆಸಿಕೊಡಲಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ. ಕರಣ್ ಜೋಹರ್ ಸ್ಥಾನವನ್ನು ರಣ್ವೀರ್ ಸಿಂಗ್ ಕಿತ್ತುಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ರಣ್ವೀರ್ ಸಿಂಗ್ ಟೀಂ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿದ್ದು ರಣ್ವೀರ್ ಸಿಂಗ್ ಬಿಗ್ ಬಾಸ್ ನಡೆಸಿಕೊಡಲಿದ್ದಾರೆ ಎನ್ನು ವದಂತಿಗೆ ಬ್ರೇಕ್ ಹಾಕಿದ್ದಾರೆ.


ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ (Bigg Boss) ಕಳೆದ ವರ್ಷದಿಂದ ಟಿವಿ ಜೊತೆಗೆ OTTಯಲ್ಲೂ ಪ್ರಸಾರವಾಗುತ್ತಿದೆ. ಹಿಂದಿಯಲ್ಲಿ ಮೊದಲು ಈ ಪ್ರಯೋಗ ಮಾಡಿ ಯಶಸ್ಸು ಕಂಡಿದೆ. ಹಿಂದಿ ಬಿಗ್ ಬಾಸ್ ಒಟಿಟಿಯನ್ನು ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ (Karan Johar) ನಡೆಸಿಕೊಟ್ಟಿದ್ದರು. ಟಿವಿಯಲ್ಲಿ ಸಲ್ಮಾನ್ ಖಾನ್ (Salman Khan) ಹೋಸ್ಟ್ ಮಾಡಿದ್ದರು. ಮೊದಲು ಬಿಗ್ ಬಾಸ್ ಒಟಿಟಿ ಪ್ರಸಾರವಾಗಿತ್ತು. ನಂತರ ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಿತ್ತು. ಬಿಗ್ ಬಾಸ್ ಪ್ರಿಯರು ಎರೆಡೆರಡು ಬಿಗ್ ಬಾಸ್ ನೋಡಿ ಎಂಜಾಯ್ ಮಾಡಿದ್ದರು. ಈ ಬಾರಿ ಕೂಡ ಬಿಗ್ ಬಾಸ್ ಪ್ರಸಾರಕ್ಕೆ ಮತ್ತೆ ಸಜ್ಜಾಗುತ್ತಿದೆ ಹಿಂದಿ ಕಿರುತೆರೆ. ಎಂದಿನಂತೆ ಬಿಗ್ ಬಾಸ್ ಯಾರು ಹೋಸ್ಟ್ ಮಾಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. 

ಈ ಬಾರಿ ಸಲ್ಮಾನ್ ಖಾನ್, ಕರಣ್ ಜೋಹರ್ ಜೊತೆ ಮತ್ತೋರ್ವ ಖ್ಯಾತ ನಟನ ಹೆಸರು ಕೇಳಿಬರುತ್ತಿದೆ.  ಮತ್ತೋರ್ವ ನಟ ಮತ್ಯಾರು ಅಲ್ಲ ರಣ್ವೀರ್ ಸಿಂಗ್.  ಹೌದು ಬಿಗ್ ಬಾಸ್ OTT ಸೀಸನ್ 2ಅನ್ನು ರಣ್ವೀರ್ ಸಿಂಗ್ (Ranveer Singh) ನಡೆಸಿಕೊಡಲಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ. ಕರಣ್ ಜೋಹರ್ ಸ್ಥಾನವನ್ನು ರಣ್ವೀರ್ ಸಿಂಗ್ ಕಿತ್ತುಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ರಣ್ವೀರ್ ಸಿಂಗ್ ಟೀಂ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿದ್ದು ರಣ್ವೀರ್ ಸಿಂಗ್, ಬಿಗ್ ಬಾಸ್ ನಡೆಸಿಕೊಡಲಿದ್ದಾರೆ ಎನ್ನು ವದಂತಿಗೆ ಬ್ರೇಕ್ ಹಾಕಿದ್ದಾರೆ.

Tap to resize

Latest Videos

ಬಿಗ್ ಬಾಸ್ OTT ಸೀಸನ್ 2 ಅನ್ನು ರಣ್ವೀರ್ ಹೋಸ್ಟ್ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದರು. ಆದರೀಗ ರಣ್ವೀರ್ ಸಿಂಗ್ ಕಾರ್ಯಕ್ರಮವನ್ನು ಹೋಸ್ಟ್ ಮಾಡುವುದಿಲ್ಲ ಎಂದು ಖಚಿತಪಡಿಸಲಾಗಿದೆ. ಈ ಬಗ್ಗೆ ಆಂಗ್ಲ ಮಾದ್ಯಮ ವರದಿ ಮಾಡಿದ್ದು, 'ಇದು ಸಂಪೂರ್ಣವಾಗಿ ಸುಳ್ಳು. ರಣ್ವೀರ್ ಸದ್ಯ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ' ಎಂದು ರಣ್ವೀರ್ ಸಿಂಗ್ ಆಪ್ತರು ಹೇಳಿರುವ ಮಾತು ಇದಾಗಿದೆ.

ಬಿಗ್ ಬಾಸ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ ಕಿಚ್ಚ; ಆಗಸ್ಟ್‌‌ನಲ್ಲಿ ಆರಂಭ, ಈ ಬಾರಿ ಇದೆ ಹಲವು ವಿಶೇಷ

ಅಂದ್ಮೇಲೆ ಈ ಬಾರಿಯೂ ಬಿಗ್ ಬಾಸ್ ಒಟಿಟಿಯನ್ನು ಕರಣ್ ಜೋಹರ್ ನಡೆಸಿಕೊಡಲಿದ್ದಾರೆ. ಇನ್ನು ಟಿವಿ ಬಿಗ್ ಬಾಸ್ ಅನ್ನು ಸಲ್ಮಾನ್ ಖಾನ್ ಅವರೇ ನಡೆಸಿಕೊಡಲಿದ್ದಾರೆ. ಇನ್ನೇನು ಸದ್ಯದಲ್ಲೇ ಬಿಗ್ ಬಾಸ್ ಒಟಿಟಿ ಸೀಸನ್ 2 ಪ್ರಾರಂಭವಾಗಲಿದೆ. ಬಳಿಕ ಟಿವಿ ಬಿಗ್ ಬಾಸ್ ಪ್ರಾರಂಭವಾಗಲಿದೆ.

ಉಪವಾಸ ಮಾಡಿ ಆಸ್ಪತ್ರೆ ಸೇರಿದ ಬಿಗ್ ಬಾಸ್ ಖ್ಯಾತಿಯ ಸೋಫಿಯಾ

ಬಿಗ್ ಬಾಸ್ ಕನ್ನಡ ಸೀಸನ್ 9

ಇನ್ನು ಕನ್ನಡದಲ್ಲೂ ಬಿಗ್ ಬಾಸ್ ಮುಂದಿನ ತಿಂಗಳು ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕನ್ನಡದಲ್ಲೂ ಈ ಬಾರಿ ಒಟಿಟಿಯಲ್ಲಿ ಪ್ರತ್ಯೇಕ ಬಿಗ್ ಬಾಸ್ ಮಾಡಲು ನಿರ್ಧರಿಸಲಾಗಿದೆ. ಒಟಿಟಿ ಬಿಗ್ ಬಾಸ್ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಒಟಿಟಿ ಬಳಿಕ ಟಿವಿ ಬಿಗ್ ಬಾಸ್ ಪ್ರಾರಂಭವಾಗಲಿದೆ. ಮುಂದಿನ ತಿಂಗಳು ಮೊದಲ ವಾರದಲ್ಲೇ ಬಿಗ್ ಬಾಸ್ ಪ್ರಾರಂಭವಾಗಲಿದೆ. 
 

click me!