
ಮುಂಬೈ (ಫೆ.10): ಪ್ರಖ್ಯಾತ ಯೂಟ್ಯೂಬರ್, ಬೀರ್ ಬೈಸೆಪ್ಸ್ ಖ್ಯಾತಿಯ ರಣವೀರ್ ಅಲ್ಲಾಬಾಡಿಯಾ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಅದಕ್ಕೆ ಕಾರಣವಾಗಿದ್ದು ಕಾಮಿಡಿ ಶೋವೊಂದರಲ್ಲಿ ಅವರು ಮಾಡಿದ ಒಂದು ಸ್ಟೇಟ್‌ಮೆಂಟ್. ಈ ಹೇಳಿಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆ ಬಂದಿದೆ. ತಮ್ಮ ಹೇಳಿಕೆಯ ಬಗ್ಗೆ ಸ್ವತಃ ರಣವೀರ್ ಕೂಡ ಕ್ಷಮೆಯಾಚನೆ ಮಾಡಿದ್ದಾರೆ. ಈತನ ವಿರುದ್ಧ ಪೊಲೀಸ್ ದೂರು ದಾಖಲಾದ ಬೆನ್ನಲ್ಲಿಯೇ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ರಣವೀರ್ ಅಲ್ಲಾಬಾಡಿಯಾಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಂದ ನ್ಯಾಷನ್ ಕ್ರಿಯೇಟರ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು. ಇದನ್ನೂ ಉಲ್ಲೇಖಿಸಿ ರಣವೀರ್ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ರಣವೀರ್ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅಪೂರ್ವ ಮಖೀಜಾ, ಕಾಮಿಡಿಯನ್ ಸಮಯ್ ರೈನಾ ಹಾಗೂ ಇಂಡಿಯಾಸ್ ಗಾಟ್ ಲಾಟೆಂಟ್‌ನ ಆಯೋಜಕರ ವಿರುದ್ಧವೂ ದೂರು ದಾಖಲಾಗಿದೆ. ಸಮಯ್ ರೈನಾ ಹೋಸ್ಟ್ ಮಾಡಿದ್ದ ಎಪಿಸೋಡ್‌ನಲ್ಲ ರಣವೀರ್ ಈ ಹೇಳಿಕೆ ನೀಡಿದ್ದರು.
ಬೀರ್‌ಬೈಸೆಪ್ಸ್ ಎಂದೇ ಜನಪ್ರಿಯವಾಗಿರುವ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ, ಹಾಸ್ಯ ಕಾರ್ಯಕ್ರಮವೊಂದರಲ್ಲಿ ಮಾಡಿದ ಅಶ್ಲೀಲ ಹಾಸ್ಯಕ್ಕಾಗಿ ಕ್ಷಮೆಯಾಚಿಸಿದ್ದು, ತಮ್ಮ ನಿರ್ಣಯದಲ್ಲಿ ತಪ್ಪಾಗಿದೆ ಎಂದು ಹೇಳಿದ್ದಾರೆ.
"ನನ್ನ ಕಾಮೆಂಟ್ ಕೇವಲ ಅನುಚಿತವಾಗಿರಲಿಲ್ಲ, ಅದು ತಮಾಷೆಯೂ ಆಗಿರಲಿಲ್ಲ. ಹಾಸ್ಯ ನನ್ನ ಶಕ್ತಿಯೂ ಅಲ್ಲ. ನಾನು ಕ್ಷಮಿಸಿ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ನಿಮ್ಮಲ್ಲಿ ಹಲವರು ನಾನು ನನ್ನ ವೇದಿಕೆಯನ್ನು ಹೀಗೆ ಮಾತನಾಡುತ್ತೇನಾ ಎಂದು ಕೇಳಿದ್ದಾರೆ. ಆದರೆ, ನಾನು ಈ ಮಾತುಗಳನ್ನು ಎಂದಿಗೂ ಬಳಸೋದಿಲ್ಲ. ಏನಾಯಿತು ಎಂಬುದರ ಹಿಂದೆ ನಾನು ಯಾವುದೇ ಸಂದರ್ಭ ಅಥವಾ ಸಮರ್ಥನೆ ಅಥವಾ ತಾರ್ಕಿಕತೆಯನ್ನು ನೀಡುವುದಿಲ್ಲ" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಅಷ್ಟಕ್ಕೂ ವೇದಿಕೆಯಲ್ಲಿ ಹೇಳಿದ್ದೇನು: ಇಂಡಿಯಾಸ್ ಗಾಟ್ ಲಾಟೆಂಟ್ ಶೋನಲ್ಲಿ ಸ್ಪರ್ಧಿಯೊಬ್ಬರ ಜೊತೆ ಮಾತನಾಡುವ ರಣವೀರ್, 'ನೀವು ಜೀವನಪೂರ್ತಿ ನಿಮ್ಮ ಅಪ್ಪ-ಅಮ್ಮ ಸೆಕ್ಸ್ ಮಾಡೋದನ್ನ ನೋಡೋಕೆ ಇಷ್ಟಪಡ್ತೀರಾ? ಅಥವಾ ಒಮ್ಮೆ ಈ ಸೆಕ್ಸ್‌ನಲ್ಲಿ ಭಾಗಿಯಾಗುವ ಮೂಲಕ ಅವರ ನಡುವಿನ ಸೆಕ್ಸ್‌ಅನ್ನು ಶಾಶ್ವತವಾಗಿ ಬಂದ್ ಮಾಡಲು ಇಷ್ಟಪಡುತ್ತೀರಾ? ಎಂದು ಕೇಳಿದ್ದಾರೆ. ಇನ್ನೂ ಕೆಲ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಆತ ಕೇಳಿದ್ದ ಪ್ರಶ್ನೆಯನ್ನು ಆತನಿಗೇ ಕೇಳಿದ್ದಾರೆ.
ಗರ್ಲ್ ಫ್ರೆಂಡ್ ಜೊತೆ ಸಮುದ್ರ ಪಾಲಾಗ್ತಿದ್ದ ಯುಟ್ಯೂಬರ್ ರಣವೀರ್ ಅಲ್ಹಾಬಾದಿಯಾ, ಫ್ಯಾನ್ಸ್ ಶಾಕ್
ಸಾಮಾನ್ಯವಾಗಿ ಯೂಟ್ಯೂಬ್‌ನಲ್ಲಿ ಇಂಥ ಕಂಟೆಂಟ್‌ಗಳು ಧಾರವಾಳವಾಗಿ ಸಿಗುತ್ತವೆಯಾದರೂ ರಣವೀರ್ ಅವರ ಬಾಯಿಂದ ಇಂಥ ಮಾತುಗಳು ಬಂದಿದ್ದಕ್ಕೆ ಆಕ್ರೋಶಕ್ಕೆ ಕಾರಣವಾಗಿದೆ. ರಣವೀರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೈಗಳಿಂದಲೇ ನ್ಯಾಷನಲ್ ಕ್ರಿಯೇಟರ್ ಅವಾರ್ಡ್ ನೀಡಿದ್ದರು. ಅದಲ್ಲದೆ, ಅವರ ಪಾಡ್ ಕಾಸ್ಟ್ ಬೀರ್ ಬೈಸೆಪ್ಸ್‌ನಲ್ಲಿ ದೇಶದ ಪ್ರಖ್ಯಾತ ವ್ಯಕ್ತಿಗಳು ಭಾಗವಹಿಸುತ್ತಾರೆ. ಕೇಂದ್ರ ಮಂತ್ರಿಮಂಡಲದ ಸಚಿವರು ಕೂಡ ಇವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ರಾಷ್ಟ್ರೀಯ ಮಹಿಳಾ ಆಯೋಗ ಕೂಡ ರಣವೀರ್ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪುಗಳಿಗೆ ಕಾನೂನು ಕ್ರಮ ಖಂಡಿತಾ ಆಗಲಿದೆ ಎಂದು ಹೇಳಿದ್ದಾರೆ.
ಪ್ರಸಿದ್ಧ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಚಾನೆಲ್ ಹ್ಯಾಕ್, ಎಲ್ಲ ವಿಡಿಯೋ ಡಿಲೀಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.