ಸೀತಾ ಒಂದು ಮಗುವಿನ ಅಮ್ಮ ಎನ್ನುವ ಸತ್ಯ ಭಾರ್ಗವಿಗೆ ತಿಳಿದಿದೆ. ಸಿಹಿಯ ಮೂಲ ಹುಡುಕಲು ರುದ್ರಪ್ರತಾಪನನ್ನು ಛೂ ಬಿಟ್ಟಿದ್ದಾಳೆ. ಸಿಹಿಯ ಹುಟ್ಟಿನ ರಹಸ್ಯ ಏನು?
ಸೀತಾ- ರಾಮ ಕಲ್ಯಾಣ ಇನ್ನೇನು ಆಗುತ್ತಿದೆ ಎಂದು ಪ್ರೇಕ್ಷಕರು ಖುಷಿ ಪಡುವ ಹೊತ್ತಿನಲ್ಲಿಯೇ ಏನೇನೋ ಸಮಸ್ಯೆಗಳು ನಡೆಯುತ್ತಲೇ ಇವೆ. ಅತ್ತ ರಾಮ್ನ ಚಿಕ್ಕಮ್ಮ ತಾತನ ಎದುರು ಚಾಂದನಿ ಮತ್ತು ರಾಮ್ನ ಮದುವೆಯ ಬಗ್ಗೆ ಮಾತನಾಡಿದ್ದಾಳೆ. ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪ ಹುಡುಕುವುದು ಯಾಕೆ ಎಂದು ಪ್ರಶ್ನಿಸಿದ್ದಾಳೆ. ತಾತನೂ ಅದಕ್ಕೆ ಸಮ್ಮತಿ ಸೂಚಿಸಿದಂತೆ ತೋರುತ್ತಿದೆ. ಚಿಕ್ಕಮ್ಮಗೆ ಸೀತಾ ಮತ್ತು ರಾಮ್ ಪ್ರೀತಿ ಮಾಡುತ್ತಿರುವ ವಿಷಯ ತಿಳಿದಿದ್ದರೂ, ಅದನ್ನು ತಪ್ಪಿಸುವುದಕ್ಕಾಗಿ ಕುತಂತ್ರ ರೂಪಿಸುತ್ತಿದ್ದಾಳೆ. ಆದರೆ ಸೀತಾ-ರಾಮರ ಲವ್ ಸ್ಟೋರಿ ಏನೋ ಶುರುವಾಗಿಬಿಟ್ಟಿದೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್ನಲ್ಲಿ ಬಿದ್ದಿದ್ದಾರೆ.
ಇದೀಗ, ಸಿಹಿ ಕೂಡ ನನ್ನ ಮಗಳೇ ಎಂದು ರಾಮ್ ಹೇಳಿದ್ದಾನೆ. ಆದರೆ ಸಿಹಿಯ ಹುಟ್ಟಿನ ರಹಸ್ಯದ ಬಗ್ಗೆ ನಿಮಗೆ ಹೇಳಲೇಬೇಕು ಎಂದು ಸೀತಾ ಹಠ ಮಾಡಿದ್ದಾಳೆ. ರೆಸ್ಟೋರೆಂಟ್ ಒಂದರಲ್ಲಿ ಹಿಂದಿನ ಘಟನೆಗಳ ಕುರಿತು ಸೀತಾ ಹೇಳುತ್ತಿರುವಾಗಲೇ, ಇವರಿಬ್ಬರೂ ಹೋಗಿದ್ದನ್ನು ನೋಡಿ ಹಿಂಬಾಲಿಸಿಕೊಂಡು ಬಂದಿರುವ ಚಾಂದನಿ ಅಷ್ಟರಲ್ಲಿಯೇ ಎಂಟ್ರಿ ಕೊಟ್ಟಿದ್ದಾಳೆ. ರಾಮ್ನನ್ನು ಬಿಟ್ಟುಬಿಡುವಂತೆ ಹೇಳಿದ್ದಾಳೆ.
'ಟಾಕ್ಸಿಕ್' ಬಿಗ್ ಟ್ವಿಸ್ಟ್: ತಂಗಿಯಾಗಿ ಕರೀನಾ, ಯಶ್ಗೆ ಜೋಡಿಯಾಗಲಿರೋ ಬಾಲಿವುಡ್ ಬೆಡಗಿ ಇವರೇ ನೋಡಿ?
ಇವುಗಳ ನಡುವೆಯೇ, ರಾಮ್ ಚಿಕ್ಕಮ್ಮ ಭಾರ್ಗವಿಗೆ ಸೀತಾಳಿಗೆ ಮಗಳು ಇರುವ ವಿಷಯ ತಿಳಿದುಬಿಟ್ಟಿದೆ. ಎಲ್ಲರನ್ನೂ ಬಿಟ್ಟು ಒಂದು ಮಗು ಇರುವವಳನ್ನು ರಾಮ್ ಏಕೆ ಪ್ರೀತಿ ಮಾಡಿದ ಎಂದು ಕೇಳುತ್ತಿದ್ದಾಳೆ. ಮೊದಲೇ ಸೀತಾ ಮತ್ತು ರಾಮ್ರ ಪ್ರೀತಿಯನ್ನು ದೂರ ಮಾಡುವ ಹೊಂಚು ಹಾಕಿದ್ದ ಭಾರ್ಗವಿಗೆ ಇದೀಗ ಸಿಹಿ ಅಸ್ತ್ರವಾಗಿ ಸಿಕ್ಕಿದ್ದಾಳೆ. ಸೀತಾಳ ಮೂಲ ಹುಡುಕುವಲ್ಲಿ ಯಶಸ್ವಿಯಾಗ್ತಾಳಾ ಎನ್ನುವುದು ಪ್ರಶ್ನೆ. ಸೀತಾಳ ಗಂಡ ಯಾರು? ಸಿಹಿಯ ಅಪ್ಪನ ಹಿನ್ನೆಲೆ ಏನು? ಅವನು ಎಲ್ಲಿದ್ದಾನೆ. ಏಕೆ ದೂರವಾದ್ರು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಭಾರ್ಗವಿ ರುದ್ರಪ್ರತಾಪ್ನಿಗೆ ಹೇಳಿದ್ದಾಳೆ. ಮೊದಲೇ ಸೀತಾಳ ಮೇಲೆ ಕಣ್ಣು ನೆಟ್ಟಿರೋ ರುದ್ರಪ್ರತಾಪ್ ಇದೀಗ ಭಾರ್ಗವಿಯ ಬೆಂಬಲಕ್ಕೆ ನಿಂತಿದ್ದಾನೆ.
ಒಟ್ಟಿನಲ್ಲಿ, ಸಿಹಿಯ ಒಡಲ ಸತ್ಯಕ್ಕೆ ಕೈ ಹಾಕೇ ಬಿಟ್ಲು ಭಾರ್ಗವಿ, ಸೀತಾ ಮತ್ತು ರಾಮ್ಗೆ ಅಗ್ನಿ ಪರೀಕ್ಷೆ ಶುರುವಾಗಿದೆ. ಇದರಲ್ಲಿ ಪಾಸಾಗುತ್ತಾರಾ? ಇವರಿಬ್ಬರೂ ಒಂದಾಗುತ್ತಾರಾ ಹೇಗೆ ಎಂಬೆಲ್ಲಾ ನೂರೆಂಟು ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿದೆ. ಇವೆಲ್ಲವುಗಳ ನಡುವೆಯೇ ಸೀತಾ ಮತ್ತು ರಾಮ್ ಲವ್ಸ್ಟೋರಿ ಮುಂದುವರೆಸಿದ್ದಾರೆ. ರಾಮ್ಗೆ ಇಷ್ಟ ಎಂದು ಸೊಪ್ಪಿನ ಸಾರು ಮಾಡಿ ಸೀತಾ ಕಳುಹಿಸಿದ್ದಾಳೆ. ಅಲ್ಲಿ ಅವರ ಪ್ರೇಮ ಕಥೆ ಮುಂದುವರೆಯುತ್ತಿದ್ದರೆ, ಇತ್ತ ಭಾರ್ಗವಿ ಛೂ ಬಿಟ್ಟಿದ್ದಾಳೆ. ಇನ್ನು ತಾತನಿಗೆ ಸೀತಾಳಿಗೆ ಮಗಳು ಇರುವ ವಿಷಯ ತಿಳಿದರೆ ಮುಗಿದೇ ಹೋಯ್ತು. ಇಷ್ಟೆಲ್ಲಾ ಕಷ್ಟಗಳ ನಡುವೆ ಸೀತಾ ಮತ್ತು ರಾಮ್ ಹೇಗೆ ಒಂದಾಗ್ತಾರಾ ಎನ್ನುವುದು ಈಗಿರುವ ಪ್ರಶ್ನೆ.
ಅವಳ ತುಟಿ, ಕಣ್ಣು, ಮೂಗು... ಆಹಾ! ಮೃಣಾಲ್ ಬ್ಯೂಟಿ ಹೊಗಳಿದ ವಿಜಯ್ ದೇವರಕೊಂಡ: ರಶ್ಮಿಕಾ ಕಥೆ ಏನೆಂದ ಫ್ಯಾನ್ಸ್