ಕನ್ನಡತಿ ಸೀರಿಯಲ್‌ನಿಂದ ಅರ್ಧಕ್ಕೆ ಹೊರ ಹೋಗಿದ್ದ ರಮೋಲಾ ವಾಪಾಸ್ ಬಂದ್ರು ನೋಡಿ!

Published : Nov 03, 2023, 11:49 AM IST
ಕನ್ನಡತಿ ಸೀರಿಯಲ್‌ನಿಂದ ಅರ್ಧಕ್ಕೆ ಹೊರ ಹೋಗಿದ್ದ ರಮೋಲಾ ವಾಪಾಸ್ ಬಂದ್ರು ನೋಡಿ!

ಸಾರಾಂಶ

ಕನ್ನಡತಿ ಸೀರಿಯಲ್‌ನ ಸಾನಿಯಾ ಪಾತ್ರದಿಂದ ಅರ್ಧಕ್ಕೆ ಎದ್ದು ಹೊರನಡೆದಿದ್ದ ರಮೋಲಾ ವಾಪಾಸ್ ಸೀರಿಯಲ್‌ಗೆ ಮರಳಿದ್ದಾರೆ. ಅವರು ನಟಿಸ್ತಿರೋ ಹೊಸ ಸೀರಿಯಲ್ ಯಾವ್ದು ಗೊತ್ತಾ?

ಕನ್ನಡತಿ ಸೀರಿಯಲ್‌ ಮೂಲಕ ಕಿರುತೆರೆಯಲ್ಲಿ ಸೌಂಡ್ ಮಾಡಿದವರು ರಮೋಲಾ. ಕನ್ನಡತಿಯಲ್ಲಿ ಅವರ ವಿಲನ್ ಪಾತ್ರ ಸಖತ್ ಫೇಮಸ್ ಆಗಿತ್ತು. ಸಖತ್ ಕ್ಯೂಟ್ ಲುಕ್‌ನ ಈ ಹುಡುಗಿ ಕನ್ನಡತಿ ಮೂಲಕ ಸಾಕಷ್ಟು ಜನಪ್ರಿಯತೆಯನ್ನೂ ಪಡೆದರು. ಮೂಲತಃ ರಮೋಲಾ ಮಾಡೆಲಿಂಗ್ ಮಾಡುತ್ತಿದ್ದವರು. ಆ ಬಳಿಕ ಆಕ್ಟಿಂಗ್ ಸ್ಕೂಲಿಗೆ ಹೋಗಿ ನಟನೆ ಕಲಿತು ಕನ್ನಡತಿ ಸೀರಿಯಲ್‌ಗೆ ಬಂದವರು. ಅಲ್ಲಿ ಸಾನಿಯಾ ಪಾತ್ರ ನೆಗೆಟಿವ್ ಶೇಡ್ ಹೊಂದಿದ್ದಾದರೂ ಸಾನಿಯಾ ಅವರನ್ನು ನೋಡೋದಕ್ಕೆ ಅಂತ ಸೀರಿಯಲ್ ನೋಡೋರಿದ್ದರು. ಅಹಂಕಾರ, ಸಿಟ್ಟು, ದರ್ಪ, ಕೀಳರಿಮೆ, ಜೊತೆಗೆ ಇದು ತನ್ನ ಪಾತ್ರ, ಇಷ್ಟ ಇದ್ದರೂ ಇಲ್ಲದಿದ್ದರೂ ನಿಭಾಯಿಸಲೇ ಬೇಕು ಎಂಬ ಅಂತಃಸಾಕ್ಷಿ ಇವನ್ನೆಲ್ಲ ಇಟ್ಟು ರಮೋಲಾ ಬಿಂದಾಸ್ ಆಗಿ ಸಾನಿಯಾ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದರು.

ಅವರು ಈ ಸೀರಿಯಲ್ ತೊರೆದ ಬಳಿಕ ಆರೋಹಿ ನೈನಾ ಅವರ ಜಾಗಕ್ಕೆ ಬಂದರು. ಆದರೆ ಯಾಕೋ ಅವರನ್ನು ರಮೋಲಾ ಅವರಂತೆ ವೀಕ್ಷಕರು ಕೊನೇವರೆಗೂ ಒಪ್ಪಿಕೊಳ್ಳಲಿಲ್ಲ.

ಕನ್ನಡತಿ' ಧಾರಾವಾಹಿಯಲ್ಲಿ ಹರ್ಷ, ಭುವನೇಶ್ವರಿಗೆ ಕೆಟ್ಟದು ಮಾಡುತ್ತ, ರತ್ನಮಾಲಾ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ಸದಾ ಯೋಜನೆ ಹಾಕುವ ಪಾತ್ರದಲ್ಲಿ ನಟಿ ರಮೋಲಾ ಅಭಿನಯಿಸಿದ್ದರು. ಕನ್ನಡತಿ ಧಾರಾವಾಹಿಯಲ್ಲಿ ಪಕ್ಕಾ ನೆಗೆಟಿವ್ ಶೇಡ್ ಆದ ಸಾನಿಯಾ ಪಾತ್ರವನ್ನು ವೀಕ್ಷಕರು ಇಷ್ಟಪಟ್ಟಿದ್ದರು. ಆದರೆ ನಂತರ ಈ ಪಾತ್ರದಿಂದ ನಟಿ ರಮೋಲಾ ಅವರು ಈ ಪಾತ್ರವನ್ನು ಬಿಟ್ಟು ಹೊರನಡೆದಿದ್ದರು. ‘ಕನ್ನಡತಿ’ ಧಾರಾವಾಹಿ ಪ್ರಸಾರ ನಿಲ್ಲಿಸಿ ಬಹಳ ಸಮಯ ಕಳೆದಿದೆ. ಈ ಧಾರಾವಾಹಿಯಲ್ಲಿ ಆರಂಭದಿಂದಲ್ಲಿ ಸಾನಿಯಾ ಪಾತ್ರವನ್ನು ರಮೋಲಾ ನಿರ್ವಹಿಸುತ್ತಿದ್ದರು. ರತ್ನಾಮಾಲಾ ಅವರ ಕುಟುಂಬದ ಸೊಸೆಯಾಗಿ, ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಿ ಅವರು ಕಾಣಿಸಿಕೊಂಡಿದ್ದರು. ಈ ಕ್ಯಾರೆಕ್ಟರ್​ ದಿನಕಳೆದಂತೆ ಮಹತ್ವ ಪಡೆದುಕೊಳ್ಳುತ್ತಾ ಸಾಗಿತ್ತು. ಬಳಿಕ ರಮೋಲಾ ಈ ಧಾರಾವಾಹಿ ತಂಡ ತೊರೆದಿದ್ದರು. ರಮೋಲಾ ‘ಕನ್ನಡತಿ’ಯಿಂದ ಹೊರ ನಡೆದಿರುವ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಿಸಿತ್ತು. ಅವರ ನಟನೆ ಅನೇಕರಿಗೆ ಇಷ್ಟವಾಗಿತ್ತು. ಅವರು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಿದ್ದರು. ಬಳಿಕ ಈ ಸ್ಥಾನವನ್ನು ‘ಹೂ ಮಳೆ’ ಖ್ಯಾತಿಯ ಆರೋಹಿ ನೈನಾ ತುಂಬಿದ್ದರು. ಬೇರೆ ಭಾಷೆಯಿಂದ ಆಫರ್​ ಬಂದ ಕಾರಣ ಸಾನಿಯಾ ಈ ಧಾರಾವಾಹಿ ತೊರೆದಿದ್ದಾರೆ ಎಂಬ ಗುಲ್ಲು ಇತ್ತು.

'ಸೀತಾ ರಾಮ' ತಂಡದ ಬಾಯಲ್ಲಿ ಕೇಳಿ ಸಪ್ತಸಾಗರದಾಚೆಯಲ್ಲೋ ಹಾಡು: ಸಿಹಿನೇ ಸೂಪರ್​ ಎಂದ ಫ್ಯಾನ್ಸ್​!

ಆ ಬಳಿಕ ರಿಚ್ಚಿ ಸಿನಿಮಾಕ್ಕೆ ಹೋದ ರಮೋಲಾ ಅಲ್ಲೂ ಕಿರಿಕ್ ಮಾಡಿಕೊಂಡರು. ಸರಿಯಾಗಿ ಡೇಟ್ಸ್ (dates) ಕೊಡುತ್ತಿಲ್ಲ ಅನ್ನೋ ಕಾರಣಕ್ಕೆ ಚಿತ್ರತಂಡ ಇವರ ವಿರುದ್ಧ ಆರೋಪ ಮಾಡಿತ್ತು. ಆ ಬಳಿಕ ಇವರು 'ಅಮೃತಧಾರೆ'ಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ನಾಯಕ ರಾಮ್‌ನ ಆಸ್ತಿ ಆಸೆಗೆ ಆತನನ್ನು ಮದುವೆಯಾಗಲು (marriage) ಬಯಸುವ ಹುಡುಗಿಯಾಗಿ ನಟಿಸಿದರು.

 

ಆ ಬಳಿಕ ಇದೀಗ 'ಅಂತರಪಟ' ಸೀರಿಯಲ್ಲಿನಲ್ಲಿ ಮತ್ತೆ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಮೋಲಾ ಫ್ಯಾನ್ಸ್‌ಗೆ ಅವರು ಕಿರುತೆರೆಗೆ ಮರಳಿರೋದು ಸಖತ್ ಖುಷಿ ಕೊಟ್ಟಿದೆ. ಅಂತರಪಟ ಸೀರಿಯಲ್ಲಿನಲ್ಲಿ ಇವರು ವೆಡಿಂಗ್ ಪ್ಲಾನರ್ ಸಾರಾ ಆಗಿ ಗುರುತಿಸಿಕೊಂಡಿದ್ದಾರೆ. ಇಲ್ಲೂ ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆ. ಎಂದಿನ ತನ್ನ ಕ್ಯೂಟ್ ಲುಕ್‌ನಲ್ಲಿ (cute look), ಮಾಡ್ ಡ್ರೆಸ್ ನಲ್ಲಿ ಅವರು ಕಂ ಬ್ಯಾಕ್ (come back) ಮಾಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಅಂತರ ಪಟ ಸೀರಿಯಲ್ ಪ್ರಸಾರ ಆಗುತ್ತಿದೆ. ಕನ್‌ಫ್ಯೂಶನ್‌ ಹುಡುಗ ಮತ್ತು ಬದುಕಿನ ಬಗ್ಗೆ ಸ್ಪಷ್ಟತೆ ಇರೋ ಹುಡುಗಿ ಜೊತೆಯಾಗೋ ಕತೆ ಈ ಸೀರಿಯಲ್‌ನದು. ಚಂದನ್ ಗೌಡ ನಾಯಕನಾಗಿದ್ದಾರೆ.

ಯಾಕಮ್ಮ ಇಷ್ಟೊಂದು ದಪ್ಪ ಆಗಿದ್ಯಾ, ಗುರುತೇ ಸಿಗಲ್ಲ; 'ಕನ್ನಡತಿ' ಕಾಲೆಳೆದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?