ಜಗತ್ತಿನೆಲ್ಲೆಡೆ ಖ್ಯಾತಿ ಪಡೆಯುವ ಮೊದಲು ಸೋಪ್ ಮಾರಾಟ ಮಾಡ್ತಿದ್ರು; ಟಿವಿ ಶೋ ಮಾಡಿ ಸ್ಟಾರ್ ಆಗ್ಬಿಟ್ರು!

By Shriram Bhat  |  First Published Dec 13, 2023, 1:33 PM IST

ಹುಟ್ಟಿನಿಂದಲೇ ಬಡತನದಲ್ಲಿ ಬೆಂದು ಬಸವಳಿದವರು ರಮಾನಂದ ಸಾಗರ್ ಎನ್ನಲಾಗಿದೆ. ಬಾಲ್ಯದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ರಮಾನಂದ ಸಾಗರ್ ಅವರನ್ನು ಒಬ್ಬ ಅಂಕಲ್ ದತ್ತು ತೆಗೆದುಕೊಂಡು ಸಾಕಿದ್ದರಂತೆ. 


ದೇಶಾದ್ಯಂತ ರಾಮಾಯಣ ಸೀರಿಯಲ್ ಮೂಲಕ ಪ್ರಸಿದ್ಧರಾಗಿರುವ ನಿರ್ದೇಶಕ ರಮಾನಂದ ಸಾಗರ್ ಅವರು 'ರಾಮಾಯಣ' ಕ್ಕಿಂತ ಮೊದಲು ಸಾಕಷ್ಟು ಟಿವಿ ಶೋಗಳನ್ನು ಮಾಡಿದ್ದಾರೆ. ಆದರೆ, ರಾಮಾಯಣದಷ್ಟು ಅವ್ಯಾವುದೂ ಕ್ಲಿಕ್ ಆಗಲಿಲ್ಲ. ಈ ಮೂಲಕ ರಮಾನಂದ ಸಾಗರ್ ಎಂದರೆ ರಾಮಾಯಣದ ನಿರ್ದೇಶಕ ಎಂಬಷ್ಟು ಖ್ಯಾತಿ ಪಡೆದಿದ್ದಾರೆ. ಜನವರಿ 25, 1987ರಿಂದ ಜುಲೈ 31, 1988 ರವರೆಗೆ ಅಂದಿನ ದೂರದರ್ಶನದಲ್ಲಿ ರಾಮಯಣ ಟಿವಿ ಶೋ ಪ್ರಸಾರ ಕಂಡಿತ್ತು. 

ಪಂಜಾಬ್‌ನ ಪ್ರಸಿದ್ಧ ಪತ್ರಿಕೆ 'ಡೈಲಿ ಮಿಲಾಪ್'ನಲ್ಲಿ ಎಡಿಟರ್ ಆಗಿ ಕೆಲಸ ಮಾಡುವ ಮೂಲಕ ರಮಾನಂದ ಸಾಗರ್ ಅವರು ಸ್ವಲ್ಪ ಪ್ರಸಿದ್ಧಿ ಪಡೆದರು. ಅದಕ್ಕೂ ಮೊದಲು ಅವರು ಬಹಳಷ್ಟು ಟಿವಿ ಶೋ ಮಾಡಲು ಪ್ರಯತ್ನ ಪಟ್ಟಿದ್ದರೂ ಯಾವುದೂ ಕೂಡ ಸರಿಯಾಗಿ ಪ್ರಸಾರ ಕಂಡಿಲ್ಲ. ಕೆಲವು ಅರ್ಧಕ್ಕೇ ನಿಂತು ಹೋಗಿ ನಿರ್ದೇಶಕ ರಮಾನಂದ ಸಾಗರ್ ಹೆಸರನ್ನು ಕೆಡಿಸಿತು. ರಾಮಾಯಣ ಸೀರಿಯಲ್ ಟೆಲೆಕಾಸ್ಟ್ ಆಗುವತನಕವೂ ರಮಾನಂದ ಸಾಗರ್ ಊಟ-ನಿದ್ದೆ ಯಾವುದನ್ನೂ ಸರಿಯಾಗಿ ಮಾಡಲಿಲ್ಲ ಎನ್ನಬಹುದು. 

Latest Videos

ಹುಟ್ಟಿನಿಂದಲೇ ಬಡತನದಲ್ಲಿ ಬೆಂದು ಬಸವಳಿದವರು ರಮಾನಂದ ಸಾಗರ್ ಎನ್ನಲಾಗಿದೆ. ಬಾಲ್ಯದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ರಮಾನಂದ ಸಾಗರ್ ಅವರನ್ನು ಒಬ್ಬ ಅಂಕಲ್ ದತ್ತು ತೆಗೆದುಕೊಂಡು ಸಾಕಿದ್ದರಂತೆ. ಅಲ್ಲಿ ಕೂಡ ಬಹಳಷ್ಟು ಕಷ್ಟಪಟ್ಟಿದ್ದೇನೆ ಎಂದಿದ್ದಾರೆ ಸ್ವತಃ ರಮಾನಂದ ಸಾಗರ್. ಎಷ್ಟೂ ಬಾರಿ ಊಟದ ಹಣಕ್ಕಾಗಿ ಸೋಪ್ ಮಾರಾಟ ಮಾಡಿದ್ದರಂತೆ ರಮಾನಂದ ಸಾಗರ್. ಕೆಲವು ಆಫೀಸುಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿ ತಮ್ಮ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುತ್ತಿದ್ದರಂತೆ. ಪಂಜಾಬ್ ಪತ್ರಿಕೆ ಎಡಿಟರ್ ಆಗುವವರೆಗೂ ಜೀವನಕ್ಕಾಗಿ ಬಹಳಷ್ಟು ಕಷ್ಟಪಟ್ಟಿದ್ದರಂತೆ. ರಮಾನಂದ ಸಾಗರ್

ಇಂಥ ರಮಾನಂದ ಸಾಗರ್ ಯಾವಾಗ ರಾಮಾಯಣ ಟಿವಿ ಶೋ ಮಾಡಿದರೋ ಆಗ ಅವರ ಅದೃಷ್ಟವೇ ಬದಲಾಯಿತು. ರಮಾನಂದ ಸಾಗರ್ ರಾಮಾಯಣದ ಮೂಲಕ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದರು. ಇದಕ್ಕೂ ಮೊಲದು 1968ರಲ್ಲಿ ಬಳಿಕ ಅವರು Ankhen ಸಿನಿಮಾ ಮೂಲಕ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಪಡೆದಿದ್ದರು.  ಆದರೆ, ಬಾಲಿವುಡ್ ಅವರನ್ನು ಕೈ ಬೀಸಿ ಕರೆದಷ್ಟು ಕೈ ಹಿಡಿದು ನಡೆಸಲಿಲ್ಲ, ಬಳಿಕ ಅವರು 1987ರಲ್ಲಿ ರಾಮಾಯಣದ ಜತೆಜತೆಗೇ ಸಿನಿಮಾ ನಿರ್ದೇಶನವನ್ನೂ ಮಾಡಿದ್ದಾರೆ. 

ರಾಮಾಯಣ ಟಿವಿ ಶೋ ಸಕ್ಸಸ್ ದಾಖಲಿಸಿದ ಬಳಿಕ ರಮಾನಂದ ಸಾಗರ್ ಹಿಂತಿರುಗಿ ನೋಡುವ ಪ್ರಸಂಗ ಬರಲೇ ಇಲ್ಲ. ಬಳಿಕ ಅವರು ಲವ ಕುಶ್, ಅಲಿಫ್ ಲೈಲಾ, ಶ್ರೀ ಕೃಷ್ಣ, ಸಾಯಿ ಬಾಬಾ ಮತ್ತು ಜೈ ಗಂಗಾ ಮೈಯಾ ಮುಂತಾದ ಹಲವು ಟಿವಿ ಶೋಗಳನ್ನು ನಿರ್ದೇಶನ  ಮಾಡಿದರು. ಅವೆಲ್ಲವೂ ರಾಮಾಯಣದಷ್ಟು ಫೇಮಸ್ ಆಗದಿದ್ದರೂ ಹಾಕಿದ ಬಂಡವಾಳಕ್ಕೆ ಯಾವುದೇ ಮೋಸ ಆಗಲಿಲ್ಲ. ಒಟ್ಟಿನಲ್ಲಿ ರಮಾನಂದ ಸಾಗರ್ ಅವರು ಟಿವಿ ಶೋ ನಿರ್ದೇಶಕರಾಗಿ ಬಹಳಷ್ಟು ವರ್ಷಗಳು ಚಾಲ್ತಿಯಲ್ಲಿ ಉಳಿದುಕೊಂಡರು. ಆದರೆ, ಜೀವನ ನಡೆಸಲು ಸೋಪ್ ಮಾರಿದ್ದು, ಪ್ಯೂನ್ ಕೆಲಸ ಮಾಡಿದ್ದನ್ನು ಮಾತ್ರ ಯಾವತ್ತೂ ಮರೆಯಲಿಲ್ಲ, ಗೆದ್ದಾಗ ಅಹಂಕಾರ ಪಡಲಿಲ್ಲ. 

click me!