BBK10 ಚಡ್ಡಿ ಉದ್ರೋಗುತ್ತೆ ಹೋಗೋ: ಕಾರ್ತಿಕ್‌ಗೆ ತುಕಾಲಿ ಸಂತು ಮೇಷ್ಟ್ರು ಹೀಗಾ ಹೇಳೋದು...

By Govindaraj S  |  First Published Dec 13, 2023, 12:38 PM IST

ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಪ್ರಾರಂಭವಾದ ಹಿರಿಯ ಪ್ರಾಥಮಿಕ ಶಾಲೆ ಜೋರಾಗಿ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ ಪರಮ ತುಂಟತನ ತೋರುತ್ತಿದ್ದಾರೆ. 


ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಪ್ರಾರಂಭವಾದ ಹಿರಿಯ ಪ್ರಾಥಮಿಕ ಶಾಲೆ ಜೋರಾಗಿ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ ಪರಮ ತುಂಟತನ ತೋರುತ್ತಿದ್ದಾರೆ. ಒಬ್ಬರಿಗಿಂತ ಇನ್ನೊಬ್ಬರು ಕಿಲಾಡಿತನದಲ್ಲಿ ಜೋರು. ಮೇಷ್ಟ್ರುಗಳನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದು. ಈ ಎಲ್ಲ ತುಂಟಾಟಗಳ ಕಿಡಿ  ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. ನಿನ್ನೆ (ಮಂಗಳವಾರ) ತನಿಷಾ ಟೀಚರ್‌ರಿಂದ ವ್ಯಕ್ತಿತ್ವ ವಿಕಸನದ ಪಾಠ ಕಲಿತ ವಿದ್ಯಾರ್ಥಿಗಳು, ಮೈಕಲ್‌ ಮೇಷ್ಟ್ರ ಜೊತೆಗೆ ‘ರೋಮಾಂಚನವೀ ಕನ್ನಡ’ ಎಂದು ರಾಗವಾಗಿ ಹಾಡಿದ್ದರು ಕೂಡ. 

ಪ್ರತಾಪ್ ಸರ್‍ರಿಂದ ಗಣೀತ ಕಲಿತು ಚುರುಕಾಗಿರುವ ಹುಡುಗರಿಗೆ ಈವತ್ತು ನಮ್ರತಾ ಮ್ಯಾಮ್‌ ಡಾನ್ಸ್ ಹೇಳಿಕೊಟ್ಟಿದ್ದಾರೆ. ವಿನಯ್‌, ವಿನಾಶ್ ಮತ್ತು ಕಾರ್ತಿಕ್ ಬ್ಲ್ಯಾಕ್‌ ಬೋರ್ಡ್‌ ಎದುರು ಸಖತ್ ಡಾನ್ಸ್ ಮಾಡಿದ್ದಾರೆ. ಚಂದವಾಗಿ ಸೀರೆ ಉಟ್ಟುಕೊಂಡ ನಮ್ರತಾ ಮೇಡಂ ಸಖತ್ತಾಗಿ ಸ್ಟೆಪ್ ಹಾಕ್ತಿದ್ರೆ ಇಂಥ ಅವಕಾಶಕ್ಕಾಗೇ ಕಾಯ್ತಿರೋ ವಿದ್ಯಾರ್ಥಿಗಳು ಸುಮ್ಮನೆ ಕೂಡುತ್ತಾರೆಯೇ? ಪಾಠದಲ್ಲಿ ಇಲ್ಲದ ಜೋಷ್‌ ಡಾನ್ಸ್‌ನಲ್ಲಿ ಹೊರಹೊಮ್ಮಿದೆ. ಬರೀ ಡಾನ್ಸ್ ಅಷ್ಟೇ ಅಲ್ಲ, ನಾಟಕದಲ್ಲಿಯೂ ಸೈ ಅನಿಸಿಕೊಂಡಿದ್ದಾರೆ ವಿದ್ಯಾರ್ಥಿಗಳು. 
 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Colors Kannada Official (@colorskannadaofficial)


ಮುಗ್ಧತೆಗೆ ಮತ್ತೊಂದು ಹೆಸರಂತಿರುವ ವರ್ತೂರು ಸಂತೋಷ್‌, ತನಿಷಾ ಕೆನ್ನೆಯ ಮೇಲೆ ಬೆರಳಾಡಿಸುತ್ತ, ‘ಪಟಾಕಿ ಯಾರದಾಗಿದ್ರೂ ಹಚ್ಚೋರು ಮಾತ್ರ ನಾವಾಗಿರ್ಬೇಕು’ ಅಂತ ಮಾಸ್ ಡೈಲಾಗ್ ಹೊಡೀತಿದ್ದಾರೆ. ತುಕಾಲಿ ಮೇಷ್ಟ್ರು, ಪದ್ಯ ಪಾಠ ಮಾಡೋಕೆ ಬಂದ್ರೆ ಹೇಗಿರತ್ತೆ? ವಿದ್ಯಾರ್ಥಿಗಳೆಲ್ಲ ಹೆಂಡ ಕುಡಿಸಿಬಿಟ್ಟ ಮಂಗನಂತಾಗುತ್ತಾರೆ. ‘ನಾನು ಹೇಳಿಹೊಟ್ಟಿದ್ದನ್ನು ಸರಿಯಾಗಿ ಹೇಳಬೇಕು’ ಎನ್ನುವ ಮೇಷ್ಟ್ರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ವಿದ್ಯಾರ್ಥಿಗಳು, ಗುರುಗಳು “ಥೂ’ ಎಂದು ಉಗಿದರೆ ಅದನ್ನೂ ಪಾಲಿಸುತ್ತ ಗುರುಗಳಿಗೆ ಉಗಿಯುತ್ತಿದ್ದಾರೆ. ಬಿಗ್‌ಬಾಸ್ ಶಾಲೆಯ ಸಣ್ಣ ನೋಟವೇ ಇಷ್ಟು ಮಜವಾಗಿರಬೇಕಾದರೆ, ಪೂರ್ತಿ ಕ್ಲಾಸು ಹೇಗಿರಬಹುದು? 

BBK10: ಬಿಗ್ ಬಾಸ್ ಮನೆಯಿಂದ ಸ್ನೇಹಿತ್ ಎಲಿಮಿನೇಟ್: ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ!

ತನಿಷಾಗೆ ಐ ಲವ್ ಯೂ ಎಂದ ವರ್ತೂರ್: ಬಿಗ್ ಬಾಸ್ ಇದೀಗ್ ಸ್ಕೂಲ್ ಆಗಿ ಪರಿವರ್ತನೆಯಾಗಿದೆ. ಕಚ್ಚಾಟ, ಮನಸ್ತಾಪಗಳಲ್ಲೇ ದಿನದೂಡಿದ್ದ ಸ್ಪರ್ಧಿಗಳು ಇದೀಗ ಮಕ್ಕಳಂತೆ ಯೂನಿಫಾರ್ಮ್ ಧರಿಸಿ ಬಾಲ್ಯದ ದಿನಗಳನ್ನು ಮತ್ತೆ ಅನುಭವಿಸಲು ಮುಂದಾಗಿದ್ದಾರೆ. ಈ ಟಾಸ್ಕ್ ಸಂದರ್ಭದಲ್ಲಿ ಸಖತ್ ತಮಾಷೆ ಸನ್ನಿವೇಶಗಳು ನಡೆಯುತ್ತಿದ್ದು, ವರ್ತೂರ್ ಸಂತೋಷ್ ಮತ್ತು ತನಿಷಾ ನಡುವೆ ಫನ್ನಿ ಘಟನೆ ನಡೆದಿದೆ. ವರ್ತೂರ್ ಸಂತೋಷ್ ಶಾಲೆ ವಿದ್ಯಾರ್ಥಿಯಾಗಿದ್ರೆ, ತನಿಷಾ ಸ್ಕೂಲ್ ಟೀಚರ್ ಆಗಿ ಈ ಟಾಸ್ಕ್’ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ಲೇಟ್ ಮೇಲೆ ಐ ಲವ್ ಯೂ ಎಂದು ಬರೆದ ವರ್ತೂರ್ ಸಂತೋಷ್, ಅದನ್ನು ತನಿಷಾಗೆ ನೀಡಿದ್ದಾರೆ. ಇದನ್ನು ಕಂಡ ತನಿಷಾ ನಾಚಿ ನೀರಾಗಿದ್ದಾರೆ.

click me!