
ನವದೆಹಲಿ(ಮಾ.19): ಹಿರಿಯ ಬಿಜೆಪಿ ಮುಖಂಡ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಗುರುವಾರ ಅರುಣ್ ಗೋವಿಲ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಅಲ್ಲದೆ ಬಂಗಾಳದಲ್ಲಿ ದೀದಿ ಆಡಳಿತಕ್ಕೆ ಕೊನೇ ಆಡಲು ಯತ್ನಿಸುತ್ತಿರುವ ಬಿಜೆಪಿ ಪರವಾಗಿ ಗೋವಿಲ್ ಅವರು 100 ರಾರಯಲಿಗಳಲ್ಲಿ ಭಾಗಿಯಾಗಿ, ಮತದಾರರನ್ನು ಸೆಳೆಯಲಿದ್ದಾರೆ ಎನ್ನಲಾಗಿದೆ.
ಮಮತಾ ಆಟಕ್ಕೆ ಅಂತಿಮ ದಿನಾಂಕ ಫಿಕ್ಸ್ ಮಾಡಿದ ಮೋದಿ
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ನಟ ಅರುಣ್ ಗೋವಿಲ್, ‘ನನಗೆ ಮೊದಲಿಂದಲೂ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮತ್ತು ಜೈ ಶ್ರೀ ರಾಮ್ ಘೋಷಣೆಗೆ ಮಮತಾ ಬ್ಯಾನರ್ಜಿ ಅವರ ಆಕ್ಷೇಪ ವಿಚಾರಗಳು ನನ್ನನ್ನು ರಾಜಕೀಯದತ್ತ ಸೆಳೆದವು. ಜೈ ಶ್ರೀ ರಾಮ್ ಘೋಷಣೆಯು ರಾಜಕೀಯ ಘೋಷವಾಕ್ಯವಲ್ಲ. ಬದಲಿಗೆ ಇದೊಂದು ಜೀವನ ಪದ್ಧತಿಯಾಗಿದ್ದು, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.