ರಘು ಗೌಡ ಬಿಬಿ ಮನೆಯಲ್ಲಿ ಇರ್ಬೇಕು ವೂಟ್‌ ಮಾಡಿ ಅಂತಿದ್ದಾರೆ ಡ್ರಾವಿಡ್, ಶಿವಣ್ಣ, ಪುನೀತ್?

Suvarna News   | Asianet News
Published : Mar 19, 2021, 12:49 PM ISTUpdated : Mar 19, 2021, 01:43 PM IST
ರಘು ಗೌಡ ಬಿಬಿ ಮನೆಯಲ್ಲಿ ಇರ್ಬೇಕು ವೂಟ್‌ ಮಾಡಿ ಅಂತಿದ್ದಾರೆ ಡ್ರಾವಿಡ್, ಶಿವಣ್ಣ, ಪುನೀತ್?

ಸಾರಾಂಶ

ಬಿಗ್‌‌ಬಾಸ್‌ ಮೂರನೇ ವಾರದ ನಾಮಿನೇಷನ್ ಹಂತ ತಲುಪಿತೆ. ಸೋಷಿಯಲ್ ಮೀಡಿಯಾ ಸ್ಟಾರ್ ರಘು ಗೌಡ ಅವರಿಗೆ ವೋಟ್‌ ಹಾಕಿ ಎಂದು ಸ್ಟಾರ್‌ಗಳು ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.... ಅಷ್ಟಕ್ಕೂ ನಿಜವಾಗಲೂ ಈ ಮನವಿ ಮಾಡಿಕೊಂಡಿದ್ದು ಹೌದಾ?  

ಕಲರ್ಸ್‌ ಕನ್ನಡ ಬಿಗ್‌ ಬಾಸ್‌ ಸೀಸನ್‌ 8 ಈಗಾಗns ಮೂರನೇ ವಾರದ ಮುಕ್ತಾಯದ ಹಂತ ತಲುಪಿದೆ. ವಾರದಿಂದ ವಾರ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ. ನಾಮಿನೇಷನ್ ಹಾಗೂ ಜೈಲು ಶಿಕ್ಷ ಬಗ್ಗೆ ಚರ್ಚೆ ಜೋರಾಗಿದೆ. ಮನೆಯಲ್ಲಿರುವ ಸದಸ್ಯರ ಆಪ್ತರು ಸೋಷಿಯಲ್ ಮೀಡಿಯಾದಲ್ಲಿ ವೋಟ್‌ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಲಾಕ್‌ಡೌನ್‌ ವೇಳೆ ರಘು ವೈನ್‌ ಸ್ಟೋರ್ಸ್ ಹೆಸರಿನಲ್ಲಿ ಇನ್‌ಸ್ಟಾ ಖಾತೆ ತೆರೆದು ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ಮನೋರಂಜಿಸುತ್ತಿದ್ದ ರಘು ಅವರ ಪತ್ನಿ ಹಾಗೂ ಆಪ್ತ ಸ್ನೇಹಿರು ವೀಕ್ಷಕರಿಗೆ ವೋಟ್ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ವಾರ ವೋಟ್ ಮಾಡಿ ಎಂದು ಮಾಡಿಕೊಂಡವರೆಲ್ಲಾ ದೊಡ್ಡ ದೊಡ್ಡ ಸ್ಟಾರ್‌ಗಳೇ. ಶಿವರಾಜ್‌ಕುಮಾರ್, ದ್ರಾವಿಡ್, ಪುನೀತ್‌ ರಾಜ್‌ಕುಮಾರ್, ಡಾಲಿ ಧನಂಜಯ್, ರವಿಶಂಕರ್, ರವಿಚಂದ್ರನ್, ರಮೇಶ್ ಅರವಿಂದ್, ಚಂದನ್ ಶೆಟ್ಟಿ ಹಾಗೂ ಮಾಸ್ಟರ್ ಆನಂದ್‌ ಅವರನ್ನು ಈ ವಿಡಿಯೋದಲ್ಲಿ ನೋಡಬಹುದು. 

ನಾವು ಸೋಷಿಯಲ್ ಮೀಡಿಯಾದವರು ಟೈಂ ಬೇಕು; ರಘು ಗೌಡನನ್ನು ಸೇಫ್ ಮಾಡಿದ ಧನುಶ್ರೀ!

ಕರ್ನಾಟಕ ಎಲೆಕ್ಷನ್ ವೇಳೆ ವೋಟ್ ಮಾಡಿ ಎಂದು ಗಣ್ಯರು ಮಾಡಿದ್ದ ವಿಡಿಯೋವನ್ನು ರಘುಗೆ ವೋಟ್ ಮಾಡಿ ಎನ್ನುವ ರೀತಿಯಲ್ಲಿ ಎಡಿಟ್ ಮಾಡಲಾಗಿದೆ. 

ಈ ವಾರ ಮನೆಯಿಂದ ಹೊರ ಬರಲು ರಘು ಗೌಡ, ಶಮಂತ್, ದಿವ್ಯಾ ಸುರೇಶ್, ಅರವಿಂದ್, ಗೀತಾ, ಶುಭಾ,ಪ್ರಶಾಂತ್, ದಿವ್ಯಾ ಉರುಗ, ವಿಶ್ವನಾಥ್ ನಾಮಿನೇಟ್ ಆಗಿದ್ದಾರೆ. ವೀಕೆಂಡ್ ವಿತ್ ಸುದೀಪ್‌ನಲ್ಲಿ ಯಾರು ಮನೆಯಿಂದ ಹೊರ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ಈಗಾಗಲೇ ದಿವ್ಯಾ ಹಾಗೂ ನಿರ್ಮಲಾ ಮನೆಯಿಂದ ಹೊರ ಬಂದಾಗಿದೆ.

ಬಿಗ್‌ಬಾಸ್‌ನಲ್ಲಿ ವೈನ್‌ ಸ್ಟೋರ್ ಮಾಲೀಕ ರಘು; ಹೊಟೇಲ್‌ನಲ್ಲಿದ್ದ ಪೌಡರ್‌ ಮನೆಗೆ ಪಾರ್ಸಲ್! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ