SitaRama: ಅಂತೂ ಸೀತಾಗೆ ತಾಳಿ ಕಟ್ಟಿದ ರಾಮ… ಸಿಹಿಯೇ ತಂದೆಯ ಎಂಟನೇ ವಚನ

Published : Jul 10, 2024, 03:54 PM IST
SitaRama: ಅಂತೂ ಸೀತಾಗೆ ತಾಳಿ ಕಟ್ಟಿದ ರಾಮ… ಸಿಹಿಯೇ ತಂದೆಯ ಎಂಟನೇ ವಚನ

ಸಾರಾಂಶ

ಝೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಅನೇಕ ದಿನಗಳಿಂದ ಮದುವೆ ಆಚರಣೆಯಲ್ಲಿ ಬ್ಯುಸಿಯಾಗಿದ್ದ ಜೋಡಿ ಕೊನೆಗೂ ಸಪ್ತಪದಿ ತುಳಿದಿದ್ದಾರೆ. ರಾಮನ ಎಂಟನೇ ವಚನ ಎಲ್ಲರ ಗಮನ ಸೆಳೆದಿದೆ.

ರಿಯಲ್ ಲೈಫ್ ನಲ್ಲಿ ಅನಂತ್ ಅಂಬಾನಿ – ರಾಧಿಕಾ ಮದುವೆ ಸಂಭ್ರಮವಾದ್ರೆ ರೀಲ್ ನಲ್ಲಿ ಸೀತಾ – ರಾಮನ ಮದುವೆ ಸಡಗರ ಮನೆ ಮಾಡಿದೆ. ಅನಂತ್ ಹಾಗೂ ರಾಮನ ಮದುವೆ ಯಾವಾಗ ಮುಗಿಯುತ್ತೆ ಅಂತ ನೆಟ್ಟಿಗರು ಅನೇಕ ಬಾರಿ ಟ್ರೋಲ್ ಮಾಡಿದ್ದಿದೆ. ಅನಂತ್ ಅಂಬಾನಿ ಮದುವೆಗೆ ಇನ್ನೂ ಎರಡು ದಿನ ಬಾಕಿ ಇದೆ. ಆದ್ರೆ ಸೀತಾ ರಾಮನ ಮದುವೆ ಇಂದೇ ಮುಗಿಯುವಂತಿದೆ.

ಮನೆಯಲ್ಲಿ ಕುಳಿತು ಧಾರಾವಾಹಿ (Serial) ನೋಡುವ ವೀಕ್ಷಕರ ಫೆವರೆಟ್ ಸಿರಿಯಲ್ ನಲ್ಲಿ ಸೀತಾ ರಾಮ (Sita Rama) ಮೊದಲ ಸ್ಥಾನದಲ್ಲಿದೆ. ಕಳೆದ ಒಂದು ತಿಂಗಳಿಂದ ಸೀತಾ ರಾಮನ ಮದುವೆ ಮುಗಿಯುತ್ತೆ ಅಂತಾ ಕಾಯ್ತಿದ್ದರೂ, ಮದುವೆ ಸಮಯದಲ್ಲಿ ನಡೆದ ಎಲ್ಲ ಆಚರಣೆಗಳು ವೀಕ್ಷಕರ ಮನಸ್ಸು ಕದ್ದಿತ್ತು. ಆಮಂತ್ರಣ ಪತ್ರಿಕೆ ತಯಾರಿಯಿಂದ ಹಿಡಿದು, ಅರಿಶಿನ ಶಾಸ್ತ್ರ, ಕಾಶಿ ಯಾತ್ರೆ ಹೀಗೆ ಒಂದಾದ್ಮೇಲೆ ಒಂದರಂತೆ ಮದುವೆ ಸಂಪ್ರದಾಯಗಳನ್ನು ಧಾರಾವಾಹಿಯಲ್ಲಿ ಸುದೀರ್ಘವಾಗಿ ತೋರಿಸಲಾಗ್ತಿದೆ. ಶುಭ ಬುಧವಾರ ಕೊನೆಗೂ ಸೀತಾ ರಾಮನ ಮದುವೆ ಮುಗಿಯುವಂತೆ ಕಾಣ್ತಿದೆ.

ಆಸ್ಪತ್ರೆಗೆ ದಾಖಲಾದ ರೀಲ್ಸ್‌ ರೇಷ್ಮಾ; ಸಣ್ಣಗಾಗೋಕೆ ಅನ್ನ ಬಿಟ್ಟಿದ್ದೇ ಕಾರಣವಾಯ್ತಾ?

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ರಾಮ ಕೊನೆಗೂ ಸೀತಾ ಕೊರಳಿಗೆ ತಾಳಿ ಕಟ್ಟಿದ್ದಾನೆ. ಅಷ್ಟೇ ಅಲ್ಲ ಸಪ್ತಪದಿ ತುಳಿಯುವ ವೇಳೆ ರಾಮ ಹೇಳಿದ ಮಾತು ಎಲ್ಲರ ಮನಸ್ಸು ಕದ್ದಿದೆ. ಸುಂದರವಾಗಿ ಅಲಂಕಾರಗೊಂಡಿರುವ ಮಂಟಪದಲ್ಲಿ ನಗುತ್ತ ಕುಳಿತಿರುವ ಸೀತಾಗೆ ರಾಮ ಮಾಂಗಲ್ಯಧಾರಣೆ ಮಾಡ್ತಾನೆ. ಪುಟಾಣಿ ಸಿಹಿಯಿಂದ ಹಿಡಿದು ಎಲ್ಲರೂ ಅಕ್ಷತೆ ಹಾಕಿ ಶುಭಕೋರುತ್ತಾರೆ. ಇದಾದ್ಮೇಲೆ ಮಾತನಾಡುವ ರಾಮ್, ತನ್ನ ಹಾಗೂ ಸೀತಾ ಮದುವೆಗೆ ಕಾರಣ ಬೇರೆ ಯಾರೂ ಅಲ್ಲ ಪುಟಾಣಿ ಸಿಹಿ ಎನ್ನುತ್ತಾನೆ. ಅಲ್ಲದೆ ಆಕೆ ನನ್ನ ಮಗಳು ಎಂದು ಪ್ರೀತಿಯಿಂದ ಸಿಹಿಯನ್ನು ಸ್ವೀಕರಿಸುವ ರಾಮ್, ಮಗಳು ಎಂದು ಕರೆಯುತ್ತಾನೆ. ಇದ್ರಿಂದ ಭಾವುಕಳಾದ ಸಿಹಿ, ಅಪ್ಪ ಎನ್ನುತ್ತ ರಾಮ್ ನನ್ನು ತಬ್ಬಿಕೊಳ್ತಾಳೆ. 

ಸಪ್ತಪದಿ ನಂತ್ರ ಎಂಟನೇ ಸುತ್ತಿನ ವಚನ ನೀಡುವ ರಾಮ್, ವಚನದ ಹೆಸರು ಸಿಹಿ ಎನ್ನುತ್ತಾನೆ. ಒಂದು ವರ್ಷದಲ್ಲಿ ಇನ್ನೊಂದು ಮಗು ಕೊಡಬೇಕು ಎಂದಿದ್ದ ತಾತನ ಮಾತಿಗೆ ಬೇಸರಗೊಂಡು ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದ ಸೀತಾ, ಕೊನೆಗೆ ಹಸೆಮಣೆಗೆ ಬಂದು ಕೂರ್ತಾಳೆ. ಎಷ್ಟೇ ಆದ್ರೂ ಮನಸ್ಸಿನಲ್ಲೊಂದು ಭಯ ಆಕೆಯನ್ನು ಕಾಡ್ತಿರುತ್ತದೆ. ಆದ್ರೆ ರಾಮನ ಎಂಟನೇ ವಚನ ಸೀತೆ ಮುಖದಲ್ಲಿ ನಗು, ನೆಮ್ಮದಿ ತರಿಸಿದಂತಿದೆ. 

ಮದುವೆಯಲ್ಲಿ ಎಲ್ಲರ ಅಲಂಕಾರ, ಉಡುಗೆ ಗಮನ ಸೆಳೆದಿದೆ. ಅದ್ಧೂರಿಯಾಗಿಯೇ ಮದುವೆ ನಡೆದಿದೆ. ಅಂತೂ ಮದುವೆ ಮುಗಿತಾ ಇದೆ ಮುಂದೇನು ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡ್ತಿದೆ. ಒಂದು ಮಗುವಿದೆ ಎಂಬುದು ಗೊತ್ತಾದ ಮೇಲೂ ಸೀತಾಳ ಕೈ ಹಿಡಿದು ತನಗಿಂತ ಸೀತಾ ಮಗಳನ್ನು ಹೆಚ್ಚು ಪ್ರೀತಿಸುವ ರಾಮ್ ವರ್ತನೆ ವೀಕ್ಷಕರಿಗೆ ಇಷ್ಟವಾಗಿದೆ. ರಿಯಲ್ ಲೈಫ್ ನಲ್ಲೂ ಇಂತ ವ್ಯಕ್ತಿ ಸಿಗಬೇಕು ಎಂದು ಅಭಿಮಾನಿಗಳು  ಹೇಳ್ತಿದ್ದಾರೆ.

ಸೀತಾರಾಮರ ಮದುವೆಯಲ್ಲಿ ಎಲ್ಲ ಸಂಪ್ರದಾಯವನ್ನು ವಿವರವಾಗಿ ತೋರಿಸಿದ ನಿರ್ದೇಶಕರಿಗೆ ಅಭಿಮಾನಿಗಳು ಧನ್ಯವಾದ ಹೇಳಿದ್ದಾರೆ. ಮತ್ತೆ ಕೆಲ ವೀಕ್ಷಕರು, ಅಂತೂ ಇಂತೂ ಸೀತಾರಾಮನ ಮದುವೆ ಮುಗೀತು ಅಂತಾ ನಿಟ್ಟುಸಿರು ಬಿಟ್ಟಿದ್ದಾರೆ. ಕೊನೆಗೂ ಮದುವೆ ಮುಗಿತಾ ಎಂದಿದ್ದಾರೆ.  

ದಾವೂದ್ ಇಬ್ರಾಹಿಂ ಗರ್ಲ್‌ಫ್ರೆಂಡ್, ಈ ಸ್ಟಾರ್ ನಟಿ ಬಾಲಿವುಡ್ ತೊರೆದಿದ್ದೇಕೆ?

ಇನ್ನು ಭಾರ್ಗವಿ ಬಗ್ಗೆಯೂ ವೀಕ್ಷಕರು ಇಲ್ಲೇ ಬೈದುಕೊಂಡಿದ್ದಾರೆ. ಭಾರ್ಗವಿಯದ್ದು ದರಿದ್ರ ಬುದ್ದಿ, ಸಿಹಿಯನ್ನು ಇವರಿಬ್ಬರಿಂದ ದೂರ ಮಾಡ್ತಾಳೆ ಎಂದ ವೀಕ್ಷಕರು ಮುಂದೇನಾಗುತ್ತೆ ಎಂಬುದನ್ನು ಈಗ್ಲೇ ಹೇಳಿದ್ದಾರೆ. ಸೀತಾರಾಮನ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಈ ಜೋಡಿಗೆ ಫುಲ್ ಮಾರ್ಕ್ಸ್ ಬಿದ್ದಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?