ಬಿಗ್ ಬಾಸ್ ಮನೆಯಲ್ಲಿ ರಜತ್‌ಗಿರುವ ಕೆಲಸದ ಮೇಲಿನ ಶ್ರದ್ಧೆಗೆ ವೀಕ್ಷಕರಿಂದ ಭಾರೀ ಮೆಚ್ಚುಗೆ!

Published : Jan 23, 2025, 03:50 PM IST
ಬಿಗ್ ಬಾಸ್ ಮನೆಯಲ್ಲಿ ರಜತ್‌ಗಿರುವ ಕೆಲಸದ ಮೇಲಿನ ಶ್ರದ್ಧೆಗೆ ವೀಕ್ಷಕರಿಂದ ಭಾರೀ ಮೆಚ್ಚುಗೆ!

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ರಜತ್ ಕಿಶನ್ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವ ಆಧರಿಸಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ತೋರಿಸುತ್ತಿರುವುದಕ್ಕೆ ವೀಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು (ಜ.23): ಬಿಗ್ ಬಾಸ್ ಮನೆಯಲ್ಲಿ 115 ದಿನಗಳಲ್ಲಿ ಕಳೆದಿರುವ ಸ್ಪರ್ಧಿಗಳ ನಡುವೆ 50 ದಿನಗಳು ಪೂರೈಸಿದ ನಂತರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ರಜತ್ ಕಿಶನ್ ಅವರು ಬಹುಬೇಗನೇ ಮನೆಗೆ ಹೊಂದಿಕೊಂಡು ಆಟವಾಡುತ್ತಾ ಫಿನಾಲೆಗೆ ಬಂದಿದ್ದಾರೆ. ಆದರೆ, ಫಿನಾಲೆಗೆ ಮೂರು ದಿನಗಳ ಬಾಕಿ ಇರುವಾಗ ರಜತ್ ಬಿಗ್ ಬಾಸ್ ಕಾಯಕವೇ ಕೈಲಾಸ ಎಂಬಂತೆ ಶ್ರದ್ಧೆಯಿಂದ ಮಾಡಿವ ಕೆಲಸಕ್ಕೆ ನೆಟ್ಟಿಗರು ಹಾಗೂ ಸ್ವತಃ ಸ್ಪರ್ಧಿಗಳಿಂದಲೇ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಹೌದದು, ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಅವರ ಧಾರಾವಾಹಿ ಸಹೋದರರು ಆಗಮಿಸಿದಾಗ ಅವರನ್ನು ಬಿಗ್ ಬಾಸ್ ಮನೆ ತೋರಿಸಲು ಕರೆದುಕೊಂಡು ಹೋಗಿದ್ದಾರೆ. ಆಗ ಎಲ್ಲವನ್ನೂ ತೋರಿಸುತ್ತಾ ಬಾತ್ ರೂಮಿನ ಏರಿಯಾಕ್ಕೂ ಕರೆದೊಯ್ದಿದ್ದಾರೆ. ಅಲ್ಲಿ ಬಾತ್ ರೂಮ್ ಏರಿಯಾ ತುಂಬಾ ಸ್ವಚ್ಛವಾಗಿರುವುದನ್ನು ತೋರಿಸುತ್ತಾ ಇದಕ್ಕೆ ಕಾರಣಕರ್ತರು ರಜತ್ ಎಂದು ಹೇಳಿದ್ದಾರೆ. ರಾಜತ್ ಪ್ರತಿದಿನ ಬಿಗ್ ಬಸ್ ಮನೆಯಲ್ಲಿ ವಹಿಸಿದ ಬಾತ್ ರೂಮ್ ಕ್ಲೀನ್ ಕೆಲಸ ಮಾಡುವಾಗ, ಅದಕ್ಕೆ ಒಂಚೂರು ಕೂಡ ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಅವರೊಂದಿಗೆ ಮಾತು ಮುಂದುವರೆಸುತ್ತಾ, ನಾವೆಲ್ಲರೂ ಬಾತ್ ರೂಮ್ ಕ್ಲೀನ್ ಮಾಡಿದ ನಂತರ ಸ್ನಾನ ಮಾಡಿ ಫ್ರೆಶ್ ಆಗಿ ಬರುತ್ತೇವೆ. ಆದರೆ, ರಜತ್ ಅವರು ಇದಕ್ಕೆ ವಿರುದ್ಧವಾಗಿದ್ದಾರೆ.

ಪ್ರತಿದಿನ ಬೆಳಗ್ಗೆ ತನ್ನ ದೈನಂದಿನ ಕಾರ್ಯಗಳನ್ನು ಮುಗಿಸಿ, ಸ್ನಾನ ಮಾಡಿ ಫ್ರೆಶ್‌ಅಪ್ ಆಗುತ್ತಾರೆ. ನಂತರ, ಎಲ್ಲರೊಂದಿಗೆ ತಿಂಡಿ ಅಥವಾ ಊಟವನ್ನು ಮಾಡಿ ಮುಗಿಸಿ ಸಿದ್ಧಗೊಳ್ಳುತ್ತಾರೆ. ಇದಾದ ನಂತರ ಎಲ್ಲರೂ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿದಾಗ ಅವರು ಬಾತ್‌ ರೂಮಿಗೆ ಬಂದು ಎಲ್ಲವನ್ನೂ ಸ್ವಚ್ಛಗೊಳಿಸಿ ಹೋಗುತ್ತಾರೆ. ಹೀಗೇಕೆ ಮಾಡುತ್ತೀರಿ ಎಂದು ಕೇಳಿದರೆ, ಕಾಯಕವೇ ಕೈಲಾಸ. ಮಾಡುವ ಕೆಲಸವನ್ನೇ ಶ್ರದ್ಧಾ, ಭಕ್ತಿಯಿಂದ ಮಡಿವಂತಿಕೆಯಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಮೋಕ್ಷಿತಾ ಸ್ನೇಹಿತರಿಗೆ ತಿಳಿಸಿದ್ದಾರೆ. ಆದರೆ, ಬಾತ್ ರೂಮ್ ಕ್ಲೀನ್ ಮಾಡುವಾಗ ರಜತ್ ಮಾಡುತ್ತಿದ್ದ ಒಂದೇ ಒಂದು ಎಡವಟ್ಟು ಎಂದರೆ ಹೆಚ್ಚು ಪ್ರಮಾಣದಲ್ಲಿ ಬಾತ್ ರೂಮ್ ಕ್ಲೀನಿಂಗ್ ಲಿಕ್ವಿಡ್ ಬಳಕೆ ಮಾಡುವುದು. ಅದನ್ನು ಬಿಟ್ಟರೆ ಅವರು ತುಂಬಾ ನೀಟಾಗಿ ಕೆಲಸ ಮಾಡುತ್ತಾರೆ ಎಂದಿದ್ದಾರೆ. ರಜತ್ ಬಾತ್ ರೂಮ್ ಕ್ಲೀನಿಂಗ್ ವಿಚಾರವನ್ನು ತಿಳಿದ ಮೋಕ್ಷಿತಾ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಟ್ರೋಫಿ ನಿನ್ನದೇ ಎಂದು ಹನುಮಂತುಗೆ ಸೂಚನೆ ಕೊಟ್ರಾ ಗುರೂಜಿ; ವಿಡಿಯೋ ವೈರಲ್

ಇಡೀ ಬಿಗ್ ಬಾಸ್ ನೆ ನೋಡಿಕೊಂಡು ಹೋದ ಮೋಕ್ಷಿತಾ ಸ್ನೇಹಿತರು ರಜತ್ ಮುಂದೆ ನಿಂತು ಮೂರು ಬಾರಿ ಚಪ್ಪಾಳೆ ಹೊಡೆದು ಬಾತ್ ರೂಮ್ ಕ್ಲೀನ್ ಮಾಡುವ ವಿಚಾರದ ಬಗ್ಗೆ ಕಾಲೆಳೆದಿದ್ದಾರೆ. ಇದಕ್ಕೆ ಸ್ವಲ್ಪವೂ ಕೋಪ ಮಾಡಿಕೊಳ್ಳದ ರಜತ್, ನಾನು ಕ್ಲೀನ್ ಮಾಡುವ ಬಗ್ಗೆ ಎಲ್ಲ ಸಹ ಸ್ಪರ್ಧಿಗಳು ಆಡಿಕೊಳ್ಳುತ್ತಾರೆ. ಆದರೆ, ನಾನು ಮಾಡುವ ಕೆಲವಸನ್ನು ಶ್ರದ್ದೆ, ಭಕ್ತಿಯಿಂದ ಮಾಡತ್ತೇನೆ. ಅದಕ್ಕಾಗಿ ಪ್ರತಿದಿನ ನಾನು ಸ್ನಾನ ಮಾಡಿ ಮಡಿಯಾದ ನಂತರವೇ ಮಧ್ಯಾಹ್ನದ ವೇಳೆಗೆ ಬಂದು ಬಾತ್ ರೂಮ್ ಕ್ಲೀನ್ ಮಾಡುತ್ತೇನೆ ಎಂದು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ಪ್ರಸ್ತುತ ಬಿಗ್ ಬಾಸ್ ಸೀಸನ್ 11ಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿಯಿವೆ. ಹನುಮಂತು, ತ್ರಿವಿಕ್ರಮ್, ಉಗ್ರಂ ಮಂಜು, ಮೋಕ್ಷಿತಾ ಪೈ, ಭವ್ಯಾ ಗೌಡ ಹಾಗೂ ರಜತ್ ಕಿಶನ್ ಅವರು ಸೇರಿ 6 ಜನರು ಫಿನಾಲೆಗೆ ತಲುಪಿದ್ದಾರೆ. ಈ ವಾರ ಯಾವುದೇ ಟಾಸ್ಕ್‌ ಕೊಡದೇ ಸ್ಪರ್ಧಾಳುಗಳು ಎಲ್ಲರೂ ಸಂತೋಷವಾಗಿ ಕಾಲ ಕಳೆಯುವುದಕ್ಕೆ ಬಿಗ್ ಬಾಸ್ ಮನೆಯಲ್ಲಿ ಒಂದೊಂದೇ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಯಾರು ಟ್ರೋಪಿ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸ್ಪರ್ಧಿಗಳ ಜಗಳ ನಿಲ್ಸೋಕೆ ಹನುಮಂತನ 'ಪುರುಕ್ ಪುರುಕ್​'​ ಅಸ್ತ್ರ! 72 ಹೂಸಿನ ಕಥೆ ಹೇಳಿದ ಧನರಾಜ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚೈತ್ರಾ ಕುಂದಾಪುರ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರೂ ಚೀಪ್ ಮೆಂಟಾಲಿಟಿ ಆಟ ಬಿಡ್ಲಿಲ್ಲ!
ಅಂದು ದೂರು ಹೇಳಿದ್ದ ವಿಜಯಲಕ್ಷ್ಮೀ; ಇಂದು Lakshmi Nivasa ಸೀರಿಯಲ್‌ನಿಂದಲೇ ಔಟ್‌