
ಬೆಂಗಳೂರು (ಆ.29): ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ (Anushree) ಹಾಗೂ ರೋಷನ್ ರಾಮಮೂರ್ತಿ (Roshan Rammurtyhy) ಮದುವೆಯಲ್ಲಿ ಸಖತ್ ಮಿಂಚಿದ್ದು, ನಟ, ನಿರ್ಮಾಪಕ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty). ಅನುಶ್ರೀ ಅವರಿಗೆ ಆಪ್ತ ಸ್ನೇಹಿತರಲ್ಲಿ ಒಬ್ಬರಾಗಿರುವ ರಾಜ್ ಬಿ ಶೆಟ್ಟಿ ಇಡೀ ಮದುವೆ ಮನೆಯಲ್ಲಿ ಇದು ತಮ್ಮವರ ಮದುವೆಯೇನೋ ಎನ್ನುವಂತೆ ಓಡಾಟ ನಡೆಸಿದ್ದರು. ಕೊನೆಗೆ ಮದುವೆಯ ಕೊನೆಯಲ್ಲಿ ಗ್ರೂಪ್ ಫೋಟೋ ತೆಗೆಸಿಕೊಳ್ಳುವಾಗ ತಮ್ಮ ನಿರ್ಮಾಣದ ಸು ಫ್ರಂ ಸೋ ಸಿನಿಮಾದ ವೈರಲ್ ಹಾಡು ಬಂದರೋ ಬಂದರೋ.. ಭಾವ ಬಂದರೋ ಎಂದು ಹಾಡಿ ರಂಜಿಸಿದ್ದರು. ಮದುಮಕ್ಕಳ ಜೊತೆ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡಿಂಗ್‌ನಲ್ಲಿದೆ.
ಹೀಗಿರುವ ಹೊತ್ತಿನಲ್ಲಿಯೇ ರಾಜ್ ಬಿ ಶೆಟ್ಟಿ ಬಹುದೊಡ್ಡ ನಿರ್ಧಾರ ಮಾಡಿ, ಎಲ್ಲರಿಗೂ ಥ್ಯಾಂಕ್ ಯು.. ಗುಡ್ ಬೈ ಎಂದು ಹೊರಟುಹೋಗಿದ್ದಾರೆ. ಇನ್ನೊಂದಷ್ಟು ದಿನ ತಾನು ಯಾರಿಗೂ ಸಿಗೋದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಆತಂಕ್ಕಖು ಒಳಗಾಗಿದ್ದಾರೆ. ಅಷ್ಟಕ್ಕೂ ರಾಜ್ ಬಿ ಶೆಟ್ಟಿಗೆ ಆಗಿದ್ದೇನು? ಅನುಶ್ರೀ ಅವರ ಮದುವೆಯ ಕಾರ್ಯಕ್ರಮದಲ್ಲಿ ಏನಾದರೂ ಸಮಸ್ಯೆ ಆಯ್ತಾ ಅಂತೆಲ್ಲಾ ಚರ್ಚೆ ಮಾಡಲು ಆರಂಭಿಸಿದ್ದಾರೆ. ಅದನ್ನು ಕೇಳೋಣ ಅಂದ್ರೆ ರಾಜ್ ಬಿ ಶೆಟ್ಟಿ ಕೂಡ ಯಾರ ಕೈಗೂ ಸಿಗುತ್ತಿಲ್ಲ.
ಆದರೆ, ತಾವು ಮಾಯವಾಗುವ ಮುನ್ನ ರಾಜ್ ಬಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ಮೂಲಕ ಎಲ್ಲದಕ್ಕೂ ಉತ್ತರ ಸಿಕ್ಕಿದೆ. 'ನಾನು ನನ್ನ ಕೆಲಸಗಳ ಮೇಲೆ ಗಮನ ಕೊಡುವ ಅಗತ್ಯವಿದೆ. ಈ ಕಾರಣದಿಂದಾಗಿ ನಾನು ಇನ್ಸ್‌ಟಾಗ್ರಾಮ್‌ನಿಂದ ದೂರ ಉಳಿಯಲಿದ್ದೇನೆ. ಈ ಕ್ಷಣದಿಂದ ನನ್ನ ಟೀಮ್ ನನ್ನ ಇನ್ಸ್‌ಟಾಗ್ರಾಮ್ ಪೇಜ್‌ಅನ್ನು ಹ್ಯಾಂಡಲ್ ಮಾಡಲಿದೆ. ಥ್ಯಾಂಕ್ ಯು..' ಎಂದು ಬರೆದುಕೊಂಡಿದ್ದಾರೆ.
ಇದರ ಅರ್ಥ ಸು ಫ್ರಂ ಸೋ ಸಿನಿಮಾ ಹಿಟ್ ಆದ ಬಳಿಕ ರಾಜ್ ಬಿ ಶೆಟ್ಟಿ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕೋದು ನಿಶ್ಚಿತವಾಗಿದೆ. ಅದರ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ. ಇದರ ನಡುವೆ ಉಪೇಂದ್ರ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ರಾಜ್ ಬಿ ಶೆಟ್ಟಿ ನಟನೆಯ, ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ಬಿಡುಗಡೆಯ ಹಂತದಲ್ಲಿ ಅದರ ಪ್ರಮೋಷನ್‌ನ ನಡುವೆ ಹೊಸ ಸಿನಿಮಾ ನಿರ್ದೇಶನಕ್ಕೂ ರಾಜ್ ಬಿ ಶೆಟ್ಟಿ ಇಳಿಯುವ ಸೂಚನೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.