10 ಲಕ್ಷ ಸಾಲ ಮಾಡಿ ತೀರಿಕೊಂಡ ತಂದೆ: ವೇದಿಕೆಯಲ್ಲೇ ಕಣ್ಣೀರಿಟ್ಟ ಡ್ಯಾನ್ಸ್ ಶೋ ಸ್ಪರ್ಧಿ

Published : Sep 18, 2021, 05:55 PM ISTUpdated : Sep 19, 2021, 11:18 AM IST
10 ಲಕ್ಷ ಸಾಲ ಮಾಡಿ ತೀರಿಕೊಂಡ ತಂದೆ: ವೇದಿಕೆಯಲ್ಲೇ ಕಣ್ಣೀರಿಟ್ಟ ಡ್ಯಾನ್ಸ್ ಶೋ ಸ್ಪರ್ಧಿ

ಸಾರಾಂಶ

ಬರೋಬ್ಬರಿ 10 ಲಕ್ಷ ಸಾಲ ಮಾಡಿಟ್ಟು ತೀರಿಕೊಂಡ ತಂದೆಯನ್ನು ನೆನಪಿಸಿ ವೇದಿಕೆಯಲ್ಲೇ ಕಣ್ಣೀರು ಹಾಕಿದ ಡ್ಯಾನ್ಸ್ ಶೋ ಸ್ಪರ್ಧಿಗೆ ನಿರೂಪಕನ ನೆರವು

ವೇದಿಕೆಯಲ್ಲಿ ಸ್ಫರ್ಧಿಯ ನೋವನ್ನು ನೋಡಲಾಗದೆ ಸ್ವತಃ ನಿರೂಪಕ 8 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ ಘಟನೆ ಹಿಂದಿಯ ಪ್ರಸಿದ್ಧ ರಿಯಾಲಿಟಿ ಶೋ ವೇದಿಕೆಯಲ್ಲಿ ನಡೆದಿದೆ. ಡ್ಯಾನ್ಸ್ ಪ್ಲಸ್ 6 ವೇದಿಕೆಯಲ್ಲಿ ಮನ ಮಿಡಿಯುವ ಸ್ಟೋರಿಯೊಂದು ರಿವೀಲ್ ಆಗಿದ್ದು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ.

ಕಾರ್ಯಕ್ರಮ ನಿರೂಪಣೆ ಮಾಡುವ ರಾಘವ್ ಜುಯಾಲ್‌ ಮಾನವೀಯತೆಯನ್ನು ನೋಡಿ ಈಗ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಬಹಳ ಹಾಸ್ಯಾಸ್ಪದವಾಗಿ ಕಾರ್ಯಕ್ರಮ ನಡೆಸಿಕೊಡೋ ರಾಘವ್ ಸೂಪರ್ ಡ್ಯಾನ್ಸರ್ ಮತ್ತು ಸಖತ್ ಕಾಮೆಡಿ ಪರ್ಸನ್ ನಟ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಟನ ಈ ಮುಖ ಎಲ್ಲರ ಮನಸು ಗೆದ್ದಿದೆ.

ಬಿಗ್‌ಬಾಸ್‌15 ನಡೆಸಲು ಸಲ್ಮಾನ್‌ಗೆ ಬರೋಬ್ಬರಿ 350 ಕೋಟಿ ಸಂಭಾವನೆ

ತಂದೆ 10 ಲಕ್ಷ ಸಾಲ ಮಾಡಿದ್ದರು. ಕೊರೋನಾ ಸಂದರ್ಭ ಸಾವನ್ನಪ್ಪಿದರು ಎಂದು ಅಸಾಹಯಕನಾದ ಡ್ಯಾನ್ಸ್ ಶೋ ಸ್ಪರ್ಧಿಯೊಬ್ಬ ವೇದಿಕೆಯಲ್ಲಿ ಮನನೊಂದು ಅತ್ತಿದ್ದ. ಅಲ್ಲಿ ಕುಳಿತಿದ್ದ ಅಷ್ಟೂ ಜನ ಭಾವುಕರಾಗಿದ್ದರು. ಪ್ರೇಕ್ಷಕರ ಮನಸನ್ನೂ ಮುಟ್ಟಿತ್ತು ಆ ಎಪಿಸೋಡ್.

ತಕ್ಷಣ ರಾಘವ್ 8 ಲಕ್ಷ ರೂಪಾಯಿ ಸಾಲ ಪಾವತಿಸಲು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. 10 ಲಕ್ಷದಲ್ಲಿ 2 ಲಕ್ಷ ಸಂದಾಯ ಮಾಡಿದ್ದು ಉಳಿದ 8 ಲಕ್ಷವನ್ನು ಸ್ವತಃ ತಾವೇ ನೀಡಿದ್ದಾರೆ ರಾಘವ್. ಈಗ ನಟನ ಈ ಮಾನವೀಯ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನನ್ನ ಫೋಟೋ ಕ್ಲಿಕ್ಕಿಸಬೇಡಿ ಎಂದು ಪಾಪ್ಪರಾಜಿಗಳಿಗೆ ಹೇಳೋ ರಾಘವ್ ಫೊಟೋ, ವಿಡಿಯೋಗಳನ್ನು ಅಷ್ಟಾಗಿ ಪಾಪ್ಪರಾಜಿಗಳು ಪೋಸ್ಟ್ ಮಾಡುವುದಿಲ್ಲ. ಆದರೆ ಈ ಬಾರಿ ಮಾತ್ರ ನಟನ ಮಾನವೀಯತೆಯನ್ನು ಮೆಚ್ಚಿ ಪೋಸ್ಟ್ ಮಾಡಿದ್ದಾರೆ.

ನಟ ಲಾಕ್‌ಡೌನ್ ಸಂದರ್ಭದಲ್ಲಿಯೂ ಬಹಳಷ್ಟು ಜನರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದರು. ಅವರ ಮಾವನೀಯ ಕೆಲಸಗಳನ್ನು ನಟಿ ಮಾಧುರಿ ಮೆಚ್ಚಿ ಹೊಗಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ