ಮತ್ತೆ ಬಿಗ್ ಬಾಸ್‌ಗೆ ಹೋಗಲು ಅರವಿಂದ್‌ಗೆ ಇಷ್ಟವಿರಲಿಲ್ಲವೇಕೆ?

Suvarna News   | Asianet News
Published : Jun 24, 2021, 11:10 AM ISTUpdated : Jun 24, 2021, 11:16 AM IST
ಮತ್ತೆ ಬಿಗ್ ಬಾಸ್‌ಗೆ ಹೋಗಲು ಅರವಿಂದ್‌ಗೆ ಇಷ್ಟವಿರಲಿಲ್ಲವೇಕೆ?

ಸಾರಾಂಶ

ಎರಡನೇ ಇನಿಂಗ್ಸ್ ಶುರುವಾಗಿರುವುದಕ್ಕೆ ಅನೇಕರು ಸಂತಸ ವ್ಯಕ್ತ ಪಡಿಸಿದ್ದರು. ಆದರೆ ಅರವಿಂದ್‌ಗೆ ಮಾತ್ರ ಇಷ್ಟ ಇರಲಿಲ್ಲವಂತೆ! 

ಬಿಗ್‌ಬಾಸ್ ಸೀಸನ್ 8ರಲ್ಲಿ ಅತಿ ಹೆಚ್ಚಿನ ಜನಪ್ರಿಯತೆ ಹಾಗೂ ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡ ಅರವಿಂದ್ ಕೆಪಿ ಎರಡನೇ ಬಾರಿ ವೇದಿಕೆ ಮೇಲೆ ಬರುತ್ತಿದ್ದಂತೆ,  ಎರಡು ಇನಿಂಗ್ಸ್‌ನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ. ಮನೆಯಲ್ಲಿ ಹಳೆ ಎಪಿಸೋಡ್‌ಗಳನ್ನು ನೋಡಿ ಗೇಮ್ ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. 

'ನಾನು ಎಂಟರ್‌ಟೇನರ್‌ ಅಲ್ಲ. ಜನರಿಗೆ ಇಷ್ಟ ಆಗ್ತೀನಾ ಇಲ್ಲವೋ ಎಂಬ ಅನುಮಾವಿತ್ತು. ಆದರೆ ಈಗ ಜನರು ನನ್ನನ್ನು ನೋಡಿ ಎಷ್ಟು ಇಷ್ಟ ಪಟ್ಟಿದ್ದಾರೆ ಅಂತ ಗೊತ್ತಾಗಿದೆ. ಆಗ ಗೊಂದಲವಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಭರವಸೆ ಇದೆ.  ಲಾಕ್‌ಡೌನ್‌ ಇದ್ದ ಕಾರಣ ಯಾವುದೇ ಬೈಕ್ ರೇಸ್ ಅಥವಾ ಸಿನಿಮಾ ಆಫರ್ ಬಂದಿಲ್ಲ. ಆದರೆ ಒಂದೆರಡು ಮೆಸೇಜ್ ಓದಿದೆ. ಮದುವೆಯಾಗಿ ಅಂತೆಲ್ಲ ಮೆಸೇಜ್ ಮಾಡಿದ್ದಾರೆ', ಎಂದು ಅರವಿಂದ್ ಮಾತನಾಡುತ್ತಾರೆ. 

'ವಾಪಸ್ ಹೋಗಲು ನಿಮಗೆ ಅಷ್ಟೊಂದು ಉತ್ಸಾಹ ಇರಲಿಲ್ಲ. ಒಳ್ಳೆಯ ಜೀವನದಲ್ಲಿ ಅಡಚಣೆ ಆಗಿ ಬಂತಾ? ಮೂಡ್‌ನಲ್ಲಿ ಇದ್ದೀರಿ.. ನಾಗರಬಾವಿಯಲ್ಲಿ ಇದ್ದು ಬಿಡೋಣ ಎಂದು ಕೊಂಡಿದ್ರಿ. ಬಿಗ್ ಬಾಸ್ ಮನೆಯಿಂದ ಬರಬೇಕಾಗಿದ್ದೆಲ್ಲ ಬಂತು, ಈಗ ಯಾಕೆ ಅಂತ ಅನಿಸಿತಾ?' ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. 

BBK8: ಬಾತ್‌ರೂಮಲ್ಲಿ ಅತಿ ಹೆಚ್ಚು ಸಮಯ ಕಳೆಯುವ ಸದಸ್ಯೆ ಯಾರೆಂದು ರಿವೀಲ್ ಮಾಡಿದ ಅರವಿಂದ್! 

'ಎರಡನೇ ಇನಿಂಗ್ಸ್‌ ಬಗ್ಗೆ ತುಂಬಾ ಕುತೂಹಲವಿದೆ. ಸ್ಪರ್ಧಿಗಳು ಮೊದಲಿನಂತೆ ಇದ್ದಾರಾ ಅಥವಾ ಬದಲಾಗಿದ್ದಾರಾ ಅಂತ. ಮತ್ತೆ ಹಾಗೇನೂ ಇಲ್ಲ. ಕ್ಯಾಮೆರಾ ಎಲ್ಲಾ ಇರುತ್ತೆ. ಎರಡು ದಿನ ನಾಮರ್ಲ್ ತರ ವರ್ತನೆ. ಆಮೇಲೆ ಸರಿ ಹೋಗತ್ತೆ. ನನಗೆ ಕಾಂಪಿಟೇಷನ್ ಅಂದ್ರೆ ದಿವ್ಯಾ ಉರುಡುಗ, ವೈಷ್ಣವಿ ಗೌಡ ಮತ್ತು ಮಂಜು ಪಾವಡಗ,' ಎಂದು ಅರವಿಂದ್  ಉತ್ತರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ