ಬಿಗ್‌ಬಾಸ್ ಮನೆಯಲ್ಲಿ ಮದ್ವೆ ವಿಷ್ಯಾನೇ ಮಾತನಾಡೋಲ್ಲ: ವೈಷ್ಣವಿ ಗೌಡ

By Suvarna NewsFirst Published Jun 24, 2021, 10:31 AM IST
Highlights

42 ದಿನಗಳ ನಂತರ ಮತ್ತೆ ಶುರುವಾದ ಬಿಗ್ ಬಾಸ್. ವೈಷ್ಣವಿ ಗೌಡಗೆ ಒಂದ ಪ್ರಪೋಸಲ್ಸ್ ನಂಬರ್ಕ್ಸ್ ಕೇಳಿ ಸುದೀಪ್ ಶಾಕ್!

ಬಿಗ್ ಬಾಸ್ ಸೀಸನ್ ಕನ್ನಡ ಎರಡನೇ ಇನಿಂಗ್ಸ್ ಆರಂಭಭಿಸಿದೆ. 12  ಸ್ಪರ್ಧಿಗಳು ಒಂದೊಂದು ರೀತಿಯ ಗೇಮ್ ಪ್ಲಾನ್ ಮಾಡಿಕೊಂಡು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಯಾವುದೇ ಪ್ಲಾನ್ ಇಲ್ಲದೇ ಎಂಟ್ರಿ ಕೊಡುತ್ತಿರುವ ವೈಷ್ಣವಿ ಈ ಒಂದು ವಿಚಾರದ ಬಗ್ಗೆ ಮಾತನಾಡಬಾರದು ಎಂದು ನಿರ್ಧರಿಸಿಕೊಂಡಿದ್ದಾರಂತೆ! 

'ಸೆಕೆಂಡ್ ಇನಿಂಗ್ಸ್‌ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಎಂಜಾಯ್ ಮಾಡ್ತೀನಿ. ನಗ್ ನಗ್ತಾ ಎಲ್ಲಾ ಸಂದರ್ಭಗಳನ್ನೂ ಎದುರಿಸುತ್ತೇನೆ. ನನ್ನ ಬಗ್ಗೆ ಅಮ್ಮನಿಗೆ ಎರಡು ವಿಷಯಗಳು ಇಷ್ಟವಾಗಿಲ್ಲ. ನಾನು ಚಪಾತಿ ಕದ್ದು ಮುಚ್ಚಿ ತಿಂದಿದ್ದು ಅವರಿಗೆ ಇಷ್ಟವಾಗಿಲ್ಲ. ನೀನೇ ಅಡುಗೆ ಮಾಡುತ್ತೀಯಾ ನೀನೇ ಕೇಳಿ ಇಸ್ಕೊಂಡು ತಿನ್ನೋಕೆ ಆಗಲ್ವಾ ಅಂದಿದ್ರು. ಮತ್ತೊಂದು ನಾನು ಪದೆ ಪದೇ ಮದುವೆ ಬಗ್ಗೆ ಮಾತನಾಡಿದ್ದು. ನಮಗೇನು ಜವಾಬ್ದಾರಿ ಇಲ್ವಾ? ಎಂದು ಅಮ್ಮ ಕೇಳಿದ್ರು. ಅದಕ್ಕೆ ಈ ಸಲ ಮನೆಯೊಳಗೆ ಮದುವೆ ಬಗ್ಗೆ ಮಾತನಾಡುವುದೇ ಇಲ್ಲ,' ಎಂದು ವೈಷ್ಣವಿ ವೇದಿಕೆ ಮೇಲೆ ಸುದೀಪ್‌ ಜೊತೆ ಮಾತನಾಡುವಾಗಿ ಹೇಳಿದ್ದಾರೆ. 

'ಮದುವೆ ಬಗ್ಗೆ ಮಾತನಾಡುವುದಿಲ್ಲ ಅಂತ ಜನರಿಗೆ ಹೇಳಿ ಬಿಡಿ ತಲೆ ಬಿಸಿ ಇರುವುದಿಲ್ಲ. ಹೋಗಲಿ ಎಷ್ಟು ಮದುವೆ ಪ್ರಪೋಸಲ್ಸ್ ಬಂದಿವೆ. ಅದರಲ್ಲಿ ಬೆಸ್ಟ್ ಅಂತ ಯಾವುದು?' ಎಂದು ಸುದೀಪ್ ಮರು ಪ್ರಶ್ನೆ ಮಾಡಿದ್ದಾರೆ. 

ಇನ್‌ಸ್ಟಾಗ್ರಾಂ ಮತ್ತು ಮೇಲ್‌ನಲ್ಲಿ ವೈಷ್ಣವಿಗೆ ಬಂದಿದೆ ಸಾವಿರಾರು ಮದುವೆ ಪ್ರಪೋಸಲ್‌ಗಳು! 

'ಅಯ್ಯೋ ಸಿಕ್ಕಾಪಟ್ಟೆ ಪ್ರಪ್ರೋಸಲ್ಸ್ ಬಂದಿವೆ ಸರ್. ಸುಮಾರು 200-300 ಬಂದಿರಬಹುದು.  ಒಂದನ್ನೂ ನೋಡಬೇಕು ಅಂತಲೇ ಅನ್ನಿಸಲಿಲ್ಲ.  ನಾನು ಯಾವಗಲೂ ಮನಸ್ಸಿನ ಮಾತು ಕೇಳುತ್ತೇನೆ. ಸೋ ಯಾವುದು ಕನೆಕ್ಟ್ ಆಗಲೇ ಇಲ್ಲ . ಪ್ರೀತಿ ಮೂಡಬೇಕು ಅಂದ್ರೆ ಮುಖವನ್ನೇ ನೋಡಬೇಕು ಅಂತಿಲ್ಲ,' ಎಂದಿದ್ದಾರೆ ವೈಷ್ಣವಿ.

ಒಟ್ಟಿನಲ್ಲಿ ಎಲ್ಲ ಸ್ಪರ್ಧಿಗಳೂ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಫುಲ್ ಝೂಮಲ್ಲಿ ಮತ್ತೊಮ್ಮೆ ಆಟ ಶುರು ಮಾಡಿದ್ದಾರೆ. ಅದೂ ಬ್ರೇಕ್ ತೆಗೆದುಕೊಂಡು ಮತ್ತೆ ಬಿಗ್ ಬಾಸ್ ಆರಂಭವಾಗುತ್ತಿರುವುದು ಇದೇ ಮೊದಲು. ಹಾಗಾಗಿ ಸ್ಪರ್ಧಿಗಳು ಯಾವ ರೀತಿ ಬಿಹೇವ್ ಮಾಡುತ್ತಾರೆಂದು ನೋಡುವ ಕುತೂಹಲ ಪ್ರೇಕ್ಷಕರಿಗೂ ಇದೆ. ನೋಡೋಣ, ಏನೇನಾಗುತ್ತೋ ಅಂತ. 

click me!