ಪಸಂದಾಗವ್ನೇ... ಆಗೋಗೈತಿ ಸ್ಯಾನೆ ಪಿರೂತಿ ಎಂದ ಸ್ನೇಹಾ: ಗುಡ್​​ ನ್ಯೂಸ್​ ಗ್ಯಾರೆಂಟಿ ಎಂದು ಕಾಲೆಳೆದ ಫ್ಯಾನ್ಸ್​

Published : Jan 16, 2024, 09:07 PM IST
ಪಸಂದಾಗವ್ನೇ... ಆಗೋಗೈತಿ ಸ್ಯಾನೆ ಪಿರೂತಿ ಎಂದ ಸ್ನೇಹಾ: ಗುಡ್​​ ನ್ಯೂಸ್​ ಗ್ಯಾರೆಂಟಿ ಎಂದು ಕಾಲೆಳೆದ ಫ್ಯಾನ್ಸ್​

ಸಾರಾಂಶ

ಕಾಟೇರಾ ಚಿತ್ರದ ಪಸಂದ್​ ಆಗವ್ನೇ ಚಿತ್ರದ ಹಾಡಿಗೆ ಪುಟ್ಟಕ್ಕನ ಮಕ್ಕಳು ನಾಯಕಿ ಸ್ನೇಹಾ ಸ್ಟೆಪ್​ ಹಾಕಿದ್ದಾರೆ. ಫ್ಯಾನ್ಸ್​ ಏನು ಹೇಳಿದರು ನೋಡಿ...  

ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್​ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್​. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಕಂಠಿ ಪಾತ್ರಧಾರಿ  ಧನುಷ್ ಎನ್ ಎಸ್. ಧಾರಾವಾಹಿಯ ಈ ಕ್ಯೂಟ್​ ಜೋಡಿ ಅದೆಷ್ಟು ಫೇಮಸ್​ ಎಂದರೆ, ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಅಂತಿದ್ದಾರೆ ಫ್ಯಾನ್ಸ್​! 

ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಇದೀಗ ಟ್ವಿಸ್ಟ್​ ಬಂದಿದ್ದು, ವಸು ಪ್ರೆಗ್ನೆಂಟ್​ ಎಂದು ಹೇಳುವ ಬದಲು ಬಂಗಾರಮ್ಮನ ಮುಂದೆ ಶಶಿಕಲಾ   ಯಡವಟ್ಟು ಮಾಡಿ ಸ್ನೇಹಾ ಗರ್ಭಿಣಿ ಎಂದಿದ್ದಾಳೆ.  ವಸು ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಮುಚ್ಚಿಟ್ಟಿದ್ದಳು. ಆದರೆ ಶಶಿಕಲಾಗೆ ಸ್ಕ್ಯಾನಿಂಗ್​ ರಿಪೋರ್ಟ್​ ಸಿಕ್ಕಿದೆ. ಆಕೆ ಸ್ನೇಹಾ ಗರ್ಭಿಣಿ ಎಂದು ಬಂಗಾರಮ್ಮನ ಎದುರು ಹೇಳಿದ್ದು, ಮುಂದೇನಾಗುತ್ತೆ ಕಾದು ನೋಡಬೇಕಿದೆ. 

ದೇಶ ಭಕ್ತಿಯ ಸಿನಿಮಾದಲ್ಲಿ ದೀಪಿಕಾ ಬೆತ್ತಲೆ! ಹೃತಿಕ್‌ ಜೊತೆಗಿನ ಹಸಿಬಿಸಿ ದೃಶ್ಯ ನೋಡಿ ಪತಿ ರಣಬೀರ್‌ ಹೇಳಿದ್ದೇನು?

ಇಂತಿಪ್ಪ ಸ್ನೇಹಾ ಅಲಿಯಾ ಸಂಜನಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಕಾಟೇರಾ ಚಿತ್ರದ ಪಸಂದಾಗವ್ನೇ.... ನೋಡ್ತಾ ನೋಡ್ತಾ ಆಗೊಗೈತೆ ಸ್ಯಾನೆ ಪಿರೂತಿ  ಹಾಡು ಅದೆಷ್ಟು ಫೇಮಸ್​ (Famous) ಆಗಿದೆ ಎಂದು ಬೇರೆ ಹೇಳಬೇಕಾಗಿಲ್ಲ.  ಈ ಹಾಡು ಕೇಳುತ್ತಿದ್ದಂತೆಯೇ ಎಂಥವರ ಕೈಕಾಲಾದರೂ ಒಮ್ಮೆ ಅಲ್ಲಾಡುವುದು ದಿಟ. ಈ ಹಾಡಿಗೆ ಅದೆಷ್ಟೋ ಮಂದಿ ರೀಲ್ಸ್​ ಮಾಡಿದ್ದಾರೆ. ಚಿತ್ರ ತಾರೆಯರೂ ಇದಕ್ಕೆ ಸ್ಟೆಪ್​ ಮಾಡಿರುವುದು ಇದೆ. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಕೂಡ ಈ ಹಾಡಿಗೆ ಸಕತ್​ ಡ್ಯಾನ್ಸ್​ ಮಾಡಿದ್ದಾರೆ.  

ಸಂಜನಾ ಅವರ ನೃತ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ನೀವು ಸ್ನೇಹಾ ಆಗಿಯೂ ಸೂಪರ್​, ಸಂಜನಾ ಆಗಿಯೂ ಸೂಪರ್​ ಎಂದು ಹೊಗಳುತ್ತಿದ್ದಾರೆ.  ಬಂಗಾರಮ್ಮನ ಮನೆಯಲ್ಲಿಯೂ ನಿಮ್ದೇ ಹವಾ, ಸೋಷಿಯಲ್​ ಮೀಡಿಯಾದಲ್ಲಿಯೂ ನಿಮ್ದೇ ಹವಾ ಮೇಡಂ ಎಂದು ಹಲವರು ಕಮೆಂಟ್​ ಮೂಲಕ ಶ್ಲಾಘಿಸುತ್ತಿದ್ದಾರೆ. ಹಲವರು ಹಾರ್ಟ್​​ ಇಮೋಜಿಗಳಿಂದ ಸಂಜನಾ ಅವರಿಗೆ ಪ್ರೀತಿಯ ಧಾರೆ ಹರಿಸುತ್ತಿದ್ದಾರೆ. ಸ್ನೇಹಾ ಪಾತ್ರದಲ್ಲಿ ನಿಮ್ಮನ್ನು ನೋಡಿದಾಗ ರಿಯಲ್​ ಲೈಫ್​ನಲ್ಲಿ ನೀವು ಇಷ್ಟೊಂದು ಚೆನ್ನಾಗಿ ನೃತ್ಯ ಮಾಡುತ್ತೀರಿ ಎಂದು ಹೇಳುವುದೇ ಕಷ್ಟ ಎಂದಿದ್ದಾರೆ. ಇನ್ನು ಕೆಲವರು ಮೊದ್ಲು ಕಂಠಿ ಮೇಲೆ ಪೀರುತಿ ತೋರಿ ಮೇಡಂ ಎನ್ನುತ್ತಿದ್ದಾರೆ. ಪಾಪ ಕಂಠಿ ನಿಮಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಪ್ರೀತಿಯ ಬಗ್ಗೆ ಬಹಿರಂಗನೇ ಪಡಿಸಲಿಲ್ವೆ ಅಂತಿದ್ದಾರೆ. ವಸು ಬದ್ಲು ನೀವೇ ಪ್ರೆಗ್ನೆಂಟ್​ ಅಂತ ಹೇಳಿ ಆಗಿದೆ.  ಇಷ್ಟೆಲ್ಲಾ ಪಿರುತಿ ಬಂದ ಮೇಲೆ ಗರ್ಭಿಣಿಯಾಗೋದು ಗ್ಯಾರೆಂಟಿ ಬಿಡಿ ಎಂದು ನಟಿಯ ಕಾಲೆಳೆಯುತ್ತಿದ್ದಾರೆ ಇನ್ನು ಕೆಲವರು. 
 

ಕೈಯಿಂದ ಶೂಸ್‌ ತೆಗೆದು ದೀಪ ಹಚ್ಚಿದ ವರುಣ್‌, ಫಾಲೋ ಮಾಡಿದ ಕರಣ್‌, ಉಫ್‌ ಜಾಹ್ನವಿ ಮಾಡಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!