ಕಾವಾಲಯ್ಯ ಹಾಡಿಗೆ 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಮಿನಿ ಸ್ಕರ್ಟ್​ನಲ್ಲಿ ಭರ್ಜರಿ ಸ್ಟೆಪ್​: ಉಫ್​ ಎಂದ ಫ್ಯಾನ್ಸ್​!

Published : Aug 11, 2023, 07:03 PM IST
 ಕಾವಾಲಯ್ಯ ಹಾಡಿಗೆ 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಮಿನಿ ಸ್ಕರ್ಟ್​ನಲ್ಲಿ ಭರ್ಜರಿ ಸ್ಟೆಪ್​: ಉಫ್​ ಎಂದ ಫ್ಯಾನ್ಸ್​!

ಸಾರಾಂಶ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರಧಾರಿಯಾಗಿ ನಟಿಸಿರೋ ಸಂಜನಾ ಬುರ್ಲಿ ಅವರು ಜೈಲರ್​ ಚಿತ್ರದ ಕಾವಾಲಯ್ಯಾ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ.   

ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್​ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್​. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಕಂಠಿ ಪಾತ್ರಧಾರಿ  ಧನುಷ್ ಎನ್ ಎಸ್. ಧಾರಾವಾಹಿಯ ಈ ಕ್ಯೂಟ್​ ಜೋಡಿ ಅದೆಷ್ಟು ಫೇಮಸ್​ ಎಂದರೆ, ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಅಂತಿದ್ದಾರೆ ಫ್ಯಾನ್ಸ್​! ಈ ಬಗ್ಗೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಸಂಜನಾ ಅವರು,  , 'ಸ್ಕ್ರೀನ್ ಮೇಲಷ್ಟೇ ನಾವಿಬ್ರೂ ಲವರ್ಸ್. ಸ್ಕ್ರೀನ್ ಮೇಲಿನ ಸಂಗತಿಗಳನ್ನು ಸ್ಕ್ರೀನ್‌ನ ಆಚೆನೂ ಅದೇ ರೀತಿ ನೋಡಬೇಡಿ ಪ್ಲೀಸ್​' ಎಂದು ಅವಲತ್ತುಕೊಂಡಿದ್ದೂ ಇದೆ. 

ಇಂತಿಪ್ಪ ಸ್ನೇಹಾ ಅಲಿಯಾ ಸಂಜನಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇಂದು ಬಿಡುಗಡೆಯಾಗಿರುವ ಜೈಲರ್​ ಚಿತ್ರದ ಕಾವಾಲಯ್ಯ ಹಾಡು ಅದೆಷ್ಟು ಫೇಮಸ್​ (Famous) ಆಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ವಯೋ ವೃದ್ಧ ಸಿನಿ ಪ್ರಿಯರು ಈ ಹಾಡನ್ನು ಇಷ್ಟಪಡುತ್ತಿದ್ದಾರೆ. ಈ ಹಾಡು ಕೇಳುತ್ತಿದ್ದಂತೆಯೇ ಎಂಥವರ ಕೈಕಾಲಾದರೂ ಒಮ್ಮೆ ಅಲ್ಲಾಡುವುದು ದಿಟ. ಈ ಹಾಡಿಗೆ ಅದೆಷ್ಟೋ ಮಂದಿ ರೀಲ್ಸ್​ ಮಾಡಿದ್ದಾರೆ. ಚಿತ್ರ ತಾರೆಯರೂ ಇದಕ್ಕೆ ಸ್ಟೆಪ್​ ಮಾಡಿರುವುದು ಇದೆ. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಕೂಡ ಕಾವಾಲಯ್ಯ ಹಾಡಿಗೆ ಡ್ಯಾನ್ಸ್​ ಮಾಡಿದ್ದು, ಅದರನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮಿನಿ ಸ್ಕರ್ಟ್​ ಧರಿಸಿ ಅವರು ಸಕತ್​ ಸ್ಟೆಪ್​ ಹಾಕಿದ್ದಾರೆ.

ಸೀರಿಯಲ್‌ನಲ್ಲಿ ಮಾತ್ರ ನಾವು ಲವರ್ಸ್, ಪ್ಲೀಸ್ ಅರ್ಥ ಮಾಡ್ಕೊಳ್ಳಿ ಅಂತಿದ್ದಾರೆ ಸ್ನೇಹ ಕಂಠಿ

ಇಲ್ಲಿಯವರೆಗೆ ಕುರ್ತಾ, ಚೂಡಿದಾರ್​ನಲ್ಲಿಯೇ ಧಾರಾವಾಹಿಯಲ್ಲಿ ಸ್ನೇಹಾಳನ್ನು ನೋಡುತ್ತಿದ್ದ ಫ್ಯಾನ್ಸ್​ ಈ ರೀಲ್ಸ್​ನಲ್ಲಿ ಸಂಜನಾ ಅವರು ಹಾಕಿರುವ ಮಿನಿಸ್ಕರ್ಟ್​ ನೋಡಿ ಉಫ್​ ಎನ್ನುತ್ತಿದ್ದಾರೆ.  ಆದರೂ ಈಕೆಯ ನೃತ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ನೀವು ಸ್ನೇಹಾ ಆಗಿಯೂ ಸೂಪರ್​, ಸಂಜನಾ ಆಗಿಯೂ ಸೂಪರ್​ ಎಂದು ಹೊಗಳುತ್ತಿದ್ದಾರೆ. (ಪುಟ್ಟಕ್ಕನ ಮಕ್ಕಳುವಿನಲ್ಲಿ ಈಕೆಯ ಅತ್ತೆ) ಬಂಗಾರಮ್ಮನ ಮನೆಯಲ್ಲಿಯೂ ನಿಮ್ದೇ ಹವಾ, ಸೋಷಿಯಲ್​ ಮೀಡಿಯಾದಲ್ಲಿಯೂ ನಿಮ್ದೇ ಹವಾ ಮೇಡಂ ಎಂದು ಹಲವರು ಕಮೆಂಟ್​ ಮೂಲಕ ಶ್ಲಾಘಿಸುತ್ತಿದ್ದಾರೆ. ಹಲವರು ಹಾರ್ಟ್​​ ಇಮೋಜಿಗಳಿಂದ ಸಂಜನಾ ಅವರಿಗೆ ಪ್ರೀತಿಯ ಧಾರೆ ಹರಿಸುತ್ತಿದ್ದಾರೆ. ಸ್ನೇಹಾ ಪಾತ್ರದಲ್ಲಿ ನಿಮ್ಮನ್ನು ನೋಡಿದಾಗ ರಿಯಲ್​ ಲೈಫ್​ನಲ್ಲಿ ನೀವು ಇಷ್ಟೊಂದು ಚೆನ್ನಾಗಿ ನೃತ್ಯ ಮಾಡುತ್ತೀರಿ ಎಂದು ಹೇಳುವುದೇ ಕಷ್ಟ ಎಂದಿದ್ದಾರೆ. 

ಪುಟ್ಟಕ್ಕನ ಮಕ್ಕಳ ಧಾರಾವಾಹಿ ಕುರಿತು ಈ ಹಿಂದೆ ಮಾತನಾಡಿದ್ದ ಸಂಜನಾ ಅವರು,  ಹಳ್ಳಿ ಹುಡುಗಿ ರೀತಿ ಕಾಣಿಸಬೇಕು, ಎಂದು ನಾನು ಲುಕ್ ಬದಲಾಯಿಸಿಕೊಂಡೆ. ಆ್ಯಕ್ಟಿಂಗ್ ಕ್ಲಾಸ್‌ನಲ್ಲಿ (Acting Class) ಭಾಗಿಯಾಗಿ ಪಾತ್ರಕ್ಕೆ ರೆಡಿಯಾದೆ.  ಉಮಾಶ್ರೀ ಅಮ್ಮ ಅವರ ಜತೆ ತೆರೆ ಹಂಚಿಕೊಳ್ಳುವುದಕ್ಕೆ ತುಂಬಾನೇ ಸಂತೋಷವಾಗುತ್ತದೆ. ಮೊದಲ ದಿನದ ಚಿತ್ರೀಕರಣ ವೇಳೆ ಅಮ್ಮ ಅವರು ನನಗೆ ಹಾಯ್ ಹೇಳಿದ ಕ್ಷಣ ನಾನು ಮರೆಯುವುದಿಲ್ಲ.  ಒಂದು ದಿನ ದೊಡ್ಡ ಸನ್ನಿವೇಶ ಚಿತ್ರೀಕರಣ ಮಾಡಬೇಕಿತ್ತು. ಆಗ ಸೆಟ್‌ನಲ್ಲಿ ಒಂದು ಸಣ್ಣ ಶಬ್ದವೂ ಇರಲಿಲ್ಲ. ಪಿನ್ ಡ್ರಾಪ್ ಸೈಲೆನ್ಸ್‌ (Pin-Drop silence) ಇತ್ತು. ನಾನು ನಟಿಸಿದ ನಂತರ ಉಮಾಶ್ರೀ ಅಮ್ಮ ಅವರು ಎದ್ದು ಚಪ್ಪಾಳೆ  ತಟ್ಟಿ ಹೊಗಳಿದರು. ಆ ಕ್ಷಣ ಅವರು ಹೇಳಿದ ಮಾತು ನನಗೆ ಸ್ಫೂರ್ತಿಯಾಗಿತ್ತು,' ಎಂದಿದ್ದಾರೆ ಸಂಜನಾ. 

Megha Shetty: ರಾಯರ ಕುದ್ರೆ ಕತ್ತೆ ಆಗಿದೆ, ಗೌರವ ಕಳ್ಕೋಬೇಡಿ... ಜೊತೆಜೊತೆಯಲಿ 'ಅನು'ಗೆ ಫ್ಯಾನ್ಸ್​ ಕ್ಲಾಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?