Megha Shetty: ರಾಯರ ಕುದ್ರೆ ಕತ್ತೆ ಆಗಿದೆ, ಗೌರವ ಕಳ್ಕೋಬೇಡಿ... ಜೊತೆಜೊತೆಯಲಿ 'ಅನು'ಗೆ ಫ್ಯಾನ್ಸ್​ ಕ್ಲಾಸ್​!

By Suvarna News  |  First Published Aug 11, 2023, 5:53 PM IST

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗೆ ಫ್ಯಾನ್ಸ್​ ಗರಂ ಆಗಿದ್ದು, ಕ್ಲಾಸ್​ ತಗೋತಿದ್ದಾರೆ.
 


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ಮೇಘಾ ಶೆಟ್ಟಿ (Megha Shetty) ಮನೆ ಮಾತಾಗಿದ್ದರು. ಅನು ಸಿರಿಮನೆ ಪಾತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದ ಮೇಘಾ ದೊಡ್ಡ ಮಟ್ಟದ ಖ್ಯಾತಿಗಳಿಸಿದರು.  ಕಳೆದ ತಿಂಗಳು ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯವಾಗಿದೆ.  ಧಾರಾವಾಹಿ ಮುಗಿದರೂ ಆದರೆ ಅನು ಸಿರಿಮನೆ ಪಾತ್ರ ಅಭಿಮಾನಿಗಳಲ್ಲಿ ಮನದಲ್ಲಿ ಗಟ್ಟಿಯಾಗಿ ಬೇರೂರಿದೆ.  ನಟಿ ಮೇಘಾ ಶೆಟ್ಟಿ ಸದ್ಯ ಸಿನಿಮಾದ ಕಡೆ ಗಮನ ಹರಿಸಿದ್ದಾರೆ. ಮರಾಠಿ ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ. ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸುತ್ತಿರುವ ಆಕ್ಷನ್ ಪ್ಯಾಕೇಜ್ ಚಿತ್ರ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ 'ಆಪರೇಷನ್ ಲಂಡನ್ ಕೆಫೆ' (Operation London Cafe)  ಬಹುತೇಕ ಚಿತ್ರೀಕರಣ ಮುಗಿಸಿದ್ದು. ಚಿತ್ರದ ಡಬ್ಬಿಂಗ್ ಹಂತದ ಚಟುವಟಿಕೆಗಳು ಭರದಿಂದ ಸಾಗುತ್ತಿದೆ. ಇದಕ್ಕೆ ಮೇಘಾ ಶೆಟ್ಟಿಯೇ ನಾಯಕಿ.  ಕನ್ನಡದ ಸೇರಿದಂತೆ  ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ  ತಯಾರಾಗುತ್ತಿದೆ. 

ಧಾರಾವಾಹಿ ಹಾಗೂ ಸಿನಿಮಾ ಯಾವುದೇ ಇರಲಿ, ತಮ್ಮ ನೆಚ್ಚಿನ ನಟಿ, ನಟ ಹೀಗೆಯೇ ಇರಬೇಕು ಎಂದು ಬಯಸುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಧಾರಾವಾಹಿಯಲ್ಲಿ ಮುಗ್ಧರಾಗಿ, ಗಂಭೀರವಾಗಿ ಇರುವ ಪಾತ್ರಧಾರಿಗಳನ್ನು ತುಂಬಾ ಇಷ್ಟ ಪಡುವ ಪ್ರೇಕ್ಷಕರು ನಿಜ ಜೀವನದಲ್ಲಿಯೂ ಅವರು ಹೀಗೆಯೇ ಇರಬೇಕು ಎಂದು ಬಯಸುತ್ತಾರೆ. ಇದೀಗ ಮೇಘಾ ಶೆಟ್ಟಿ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಸುಸಂಪ್ರದಾಯಬದ್ಧವಾಗಿ ಪಾತ್ರದಲ್ಲಿ ನಟಿಸಿರುವ ಜೊತೆಜೊತೆಯಲಿ ಅನು, ನಿಜ ಜೀವನದಲ್ಲಿಯೂ ಅನುವಿನಂತೆಯೇ ಇರಲಿ ಎನ್ನುವುದು ಪ್ರೇಕ್ಷಕರ ಹಂಬಲ. ಆದರೆ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ಮೇಘಾ ಶೆಟ್ಟಿ (Megha Shetty), ಇತ್ತೀಚಿಗೆ ಶೇರ್​ ಮಾಡಿದ ಕೆಲವೊಂದು ಫೋಟೋಗಳನ್ನು ನೋಡಿ ಫ್ಯಾನ್ಸ್​ ಯಾಕೋ ತುಂಬಾ ಬೇಸರಗೊಂಡಿದ್ದಾರೆ.

Tap to resize

Latest Videos

Megha Shetty: ಮರಾಠಿ ಸಿನಿಮಾದಲ್ಲಿ ಜೊತೆಜೊತೆಯಲಿ 'ಅನು' ಮಿಂಚಿಂಗ್!

ಇದೀಗ, ನಟಿ, ಕಡು ಹಸಿರು ಬಣ್ಣದ ಉಡುಗೆಯಲ್ಲಿ ಸಕತ್​ ಪೋಸ್​ ಕೊಟ್ಟಿದ್ದಾರೆ. ಅತ್ಯಂತ ಸುಂದರವಾಗಿ ಈ ಫೋಟೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮೇಘಾ ಶೆಟ್ಟಿ. ಎಲ್ಲಿಯೂ ಅಶ್ಲೀಲತೆಯ ಟಚ್​ ಕೂಡ ಇಲ್ಲ. ಡೀಸೆಂಟ್​ ಆಗಿರುವ ಫೋಟೋ ಆಗಿದ್ದರೂ ಸ್ವಲ್ಪ ಬೋಲ್ಡ್​ ಎನಿಸುವಂತೆ ಇರುವ ಕಾರಣ, ಮೇಘಾ ಅವರ ಈ ಫೋಟೋಕ್ಕೆ ಅನೇಕ ಮಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.  ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಮೇಘಾ ಶೇರ್​ ಮಾಡಿಕೊಂಡಿದ್ದಾರೆ. ಕೆಲವರು ಹಾರ್ಟ್​ ಎಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿದ್ದರೆ, ಅನೇಕ ಫ್ಯಾನ್ಸ್​, ಅದರಲ್ಲಿಯೂ ಮಹಿಳೆಯರು ಈ ಹೊಸ ಲುಕ್​ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

 ಮೇಘಾ ಶೆಟ್ಟಿಯನ್ನು ಅನು ಸಿರಿಮನೆ ಪಾತ್ರದಲ್ಲಿಯೇ ಇರಬೇಕು ಎಂದು ಬಯಸುವ ಕೆಲವರು,  ಇದು ನಿಜವಾಗಿಯೂ ನಿಮಗೆ ಸೂಟ್ ಅಲ್ಲ ಎಂದಿದ್ದರೆ, ಕೆಲವರು ಯಾಕೋ ರಾಯರ ಕುದುರೆ ಕತ್ತೆ ಆಗುತ್ತಿದೆ ಎಂದಿದ್ದಾರೆ. ಇನ್ನು ಕೆಲವರು ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯಿತಂತೆ. ಇದಕ್ಕೆ ಬೆಸ್ಟ್ ಉದಾಹರಣೆ (Best Example) ನೀವೇ ಮೇಡಂ. ಹೇಗಿದ್ದೋರು ಹೇಗಾದ್ರಿ. ನಾವು ನಿಮ್ಮ ಮೇಲೆ ಇಟ್ಟಿದ್ದ ಗೌರವ ಕಳ್ಕೊಂಡ್ರಿ ಎಂದಿದ್ದಾರೆ. ಎಷ್ಟೋ ಮಂದಿ ಟ್ರೆಡಿಷನಲ್​ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ಸಕತ್​ ಫೇಮಸ್ಸೂ ಆಗಿದ್ದಾರೆ. ನಿಮಗೆ ಇವೆಲ್ಲಾ ಬೇಡ ಎಂದಿದ್ದಾರೆ.  ರೀತಿಯ ಬಟ್ಟೆ ನಿಮಗಲ್ಲ. ನಿಶ್ವಿಕಾ ನಾಯ್ಡುಗೆ ಎಂದೂ ಅಭಿಮಾನಿಯೊಬ್ಬ ಹೇಳಿದ್ದಾರೆ.
 

Cute ಆಗಿ ನಗಲು ಪರದಾಟ: ಅನುಭವ ಬಿಚ್ಚಿಟ್ಟ ಸತ್ಯ ಸೀರಿಯಲ್​ 'ಅಮೂಲ್ ಬೇಬಿ'
 

click me!