ನನ್ನ ಥರ ಯೋಚನೆ ಮಾಡೋರು ಸಿಕ್ಕಿಲ್ಲ ಅಂದ್ರೆ ಮದುವೆ ಬೇಡ ಹೇಳಿದ್ದೆ: Puttakkana Makkalu Serial ಸಂಜನಾ ಬುರ್ಲಿ

Published : Apr 14, 2026, 11:40 AM IST
Actress Sanjana Burli

ಸಾರಾಂಶ

Actress Sanjana Burli: ಪುಟ್ಟಕ್ಕನ ಮಕ್ಕಳು, ಶ್ರೀಗಂಧದ ಗುಡಿ ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ಡಾಕ್ಟರ್‌ ಸಮರ್ಥ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸ್ಟೋರಿ, ಹೇಗೆ ಪರಿಚಯ ಆಯ್ತು ಎಂಬುದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಡಿಜಿಟಲ್‌ ಜೊತೆ ಬಿಚ್ಚಿಟ್ಟಿದ್ದಾರೆ. 

ನಟಿ ಸಂಜನಾ ಬುರ್ಲಿ ( Sanjana Burli ) ಹಾಗೂ ಸಮರ್ಥ್‌ ಚೆನ್ನಗಿರಿ ಅವರು ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರದ್ದು ಲವ್?‌ ಅರೇಂಜ್‌ ಮ್ಯಾರೇಜ್‌ ಎಂಬ ಬಗ್ಗೆ ಅನೇಕರಿಗೆ ಡೌಟ್‌ ಇತ್ತು. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮೆಡಿಕಲ್‌ ಇಂಜಿನಿಯರಿಂಗ್‌ ಓದಿದ್ದೇನೆ

ನನ್ನ ಫ್ರೆಂಡ್‌ ಮೂಲಕ ಒಂದು ಕಾರ್ಯಕ್ರಮದಲ್ಲಿ ಸಮರ್ಥ್‌ ಪರಿಚಯ ಆಯ್ತು. ನಾವು ನಾರ್ಮಲ್‌ ಆಗಿ ಮಾತನಾಡಿಕೊಂಡಿದ್ದೆವು, ಒಂದು ವರ್ಷ ಆಗಿತ್ತು. ಆಗ ನಮ್ಮಿಬ್ಬರ ಆಲೋಚನೆಗಳು, ಉದ್ದೇಶ ಎಲ್ಲವೂ ಸಮನಾಗಿದೆ ಎಂದು ಅರ್ಥ ಆಯ್ತು. ನಾನು ಮೆಡಿಕಲ್‌ ಇಂಜಿನಿಯರಿಂಗ್‌ ಓದಿದ್ದೇನೆ, ಸಮರ್ಥ್‌ ಡಾಕ್ಟರ್.‌ ಹೀಗಾಗಿ ನಾವಿಬ್ಬರೂ ಮೆಡಿಕಲ್‌ ಬಗ್ಗೆ ಹೆಚ್ಚು ಮಾತನಾಡುತ್ತಿದ್ದೆವು. ಇನ್ನು ಮದುವೆ ಆಗೋಣ ಎಂದು ಮನೆಯಲ್ಲಿ ಹೇಳಿದೆವು. ಆಮೇಲೆ ಎರಡೂ ಕುಟುಂಬದವರು ಒಪ್ಪಿ ಮದುವೆ ಮಾಡಿದರು ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.

ಮನೆಯಲ್ಲೂ ಹಾಗೆ ಹೇಳಿದ್ದೆ…

ನಾನು ಈ ಮದುವೆಯಲ್ಲಿ ಲವ್‌ ಮ್ಯಾರೇಜ್‌ ಅಥವಾ ಅರೇಂಜ್‌ ಮ್ಯಾರೇಜ್‌ ಎಂದು ಹೇಳಲು ಇಷ್ಟಪಡೋದಿಲ್ಲ. ನಾನು ಮೊದಲು ಮದುವೆ ಬಗ್ಗೆ ಯೋಚನೆ ಮಾಡಿರಲಿಲ್ಲ. ನನ್ನ ರೀತಿ ಆಲೋಚನೆಗಳು, ವಿಚಾರಧಾರೆಗಳನ್ನು ಇಟ್ಟುಕೊಳ್ಳುವವರು ತುಂಬ ಅಪರೂಪ, ಈ ರೀತಿ ಹುಡುಗ ಸಿಕ್ಕರೆ ಮದುವೆ ಆಗೋಣ, ಇಲ್ಲ ಅಂದ್ರೆ ಮದುವೆ ಬೇಡ ಎಂದು ಫಿಕ್ಸ್‌ ಆಗದ್ದೆ. ನಮ್ಮ ಮನೆಯಲ್ಲಿ ಹುಡುಗನನ್ನು ನೋಡೋಕೆ ಆರಂಭಿಸಿದ್ದರು. ಆಮೇಲೆ ಅವರಿಗೂ ಕೂಡ ನನ್ನ ಥರ ಆಲೋಚನೆ ಮಾಡೋ ಹುಡುಗ ಸಿಕ್ಕರೆ ಹೇಳಿ ಅಂತಲೇ ಹೇಳಿದ್ದೆ ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.

ಮದುವೆ ಆದಮೇಲೂ ಕೂಡ ನಾನು ನಟನೆ ಮಾಡ್ತೀನಿ, ಸಮರ್ಥ್‌ ಕಡೆಯಿಂದ ನನಗೆ ಯಾವುದೇ ನಿಯಮ ಹಾಕಿಲ್ಲ. ಮದುವೆ ಆಗಿದ್ದೀನಿ ಎನ್ನೋದು ಬಿಟ್ಟರೆ ನಾನು ಯಾವುದರಿಂದಲೂ ದೂರ ಹೋಗಿಲ್ಲ. ರಾಜ್ಯಶಾಸ್ತ್ರದಲ್ಲಿ ಎಂಎ ಮಾಡುತ್ತಿದ್ದೇನೆ, ಮುಂದೆ ಪಿಎಚ್‌ಡಿ ಮಾಡೋ ಆಸೆ ಇದೆ, ಯುಪಿಎಸ್‌ಸಿ ಪರೀಕ್ಷೆ ಬರೆಯುವ ಆಸೆ ಇದೆ ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.

ಸಮರ್ಥ್‌ ಕುಟುಂಬಸ್ಥರು ಯಾರು?

ಸಮರ್ಥ್‌ ಅವರ ತಂದೆ ಕೂಡ ಚೆನ್ನಗಿರಿಯಲ್ಲಿ ಮೆಡಿಕಲ್‌ ಸ್ಟೋರ್ಸ್‌ ಇಟ್ಟುಕೊಂಡಿದ್ದಾರೆ. ನನ್ನ ತಂದೆ-ತಾಯಿ ಕೂಡ ಫಾರ್ಮಸಿ ಬ್ಯಾಕ್‌ಗ್ರೌಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮರ್ಥ್‌ ಕೂಡ ಡಾಕ್ಟರ್‌, ನಾನು ಮೆಡಿಕಲ್‌ ಇಂಜಿನಿಯರಿಂಗ್‌ ಓದಿದ್ದೇನೆ. ಎರಡೂ ಕುಟುಂಬಸ್ಥರ ಬ್ಯಾಕ್‌ಗ್ರೌಂಡ್‌ ಒಂದೇ ಇದೆ. ಒಟ್ಟಿನಲ್ಲಿ ವಿಧಿ ನಮ್ಮಿಬ್ಬರನ್ನು ಒಟ್ಟಿಗೆ ಕರೆತಂದಿದೆ.

ಮದುವೆ ಚೆನ್ನಾಗಿ ಆಯ್ತು

ಪ್ರಕೃತಿ ಮಧ್ಯೆ ಮದುವೆ ಆಗೋ ಆಸೆ ಇತ್ತು. ಹೀಗೆ ಪ್ಲ್ಯಾನ್‌ ಮಾಡಿದ್ದೆವು. ನಮ್ಮ ಕುಟುಂಬಸ್ಥರು, ಬಂಧು ಮಿತ್ರರು ಎಲ್ಲರೂ ಇದ್ದರು. ನಾವು ಮದುವೆಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್‌ ಬಳಸಿಲ್ಲ. ಪ್ರಾಣಿ ಹಿಂಸೆ ಮಾಡಿ ಸಿಗುವ ಆಹಾರ ನಮಗೆ ಇಷ್ಟ ಇರಲಿಲ್ಲ. ಹೀಗಾಗಿ ರಾಗಿ, ಬಾದಾಮಿಯಿಂದ ಹಾಲು ತಯಾರಿಸಿ, ಅದನ್ನು ಅಡುಗೆಗೆ ಬಳಸಿದ್ದೇವೆ, 98% ವೇಗನ್‌ ಫುಡ್‌ ಇತ್ತು. ನಮ್ಮ ಸೀರೆಯನ್ನು ಕೂಡ ಗಿಡಗಳಿಂದ ತಯಾರಿಸಲಾಗಿತ್ತು, ಎಲ್ಲಿಯೂ ರೇಷ್ಮೆ ಬಳಕೆ ಮಾಡಿಲ್ಲ

ಖುಷಿಯಾಯ್ತು

ಮೋಕ್ಷಿತಾ ಪೈ ನನ್ನ ಸ್ನೇಹಿತೆ. ಅವರು ಮದುವೆಗೆ ಬಂದಿದ್ರು. ಭಾಸ್ಕರ್‌ ರಾವ್‌ ಸೇರಿದಂತೆ ಗಂಧದ ಗುಡಿ ಸೀರಿಯಲ್‌ ಟೀಂ, ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟೀಂ ಕೂಡ ಬಂದಿದ್ದು, ಖುಷಿ ತಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕರ್ಣ ಧಾರಾವಾಹಿಯಲ್ಲಿ ಮುಂದೆ ಟ್ವಿಸ್ಟ್‌ ಇದೆ; 200 ಖುಷೀಲಿ ಸೀಕ್ರೆಟ್‌ ರಿವೀಲ್‌ ಮಾಡಿದ ನಟಿ ಭವ್ಯಾ ಗೌಡ!
ಚಿನ್ನುಮರಿ ಕೊಟ್ಟ ಒಂದೊಂದು ಏಟಿಗೆ ಜಯಂತ್ ವಿಲವಿಲ; ಮುಂದೇನು ಮಾಡ್ತಾನೆ ಸೈಕೋ ಗಂಡ?