
ಬೆಂಗಳೂರು (ಸೆ.29): ಬಿಗ್ ಬಾಸ್ ಕನ್ನಡ ಸೀಸನ್ 11ರ ಆರನೇ ಕಂಟೆಸ್ಟೆಂಟ್ ಆಗಿ ನವಗ್ರಹ ಸಿನಿಮಾದ ಕ್ಯಾಡ್ಬರಿ ಹೀರೋ ಧರ್ಮ ಕೀರ್ತಿರಾಜ್ ಎಂಟ್ರಿ ಕೊಟ್ಟಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಟ ಧರ್ಮ ಅವರ ಕೈಗಳನ್ನು ಮುಟ್ಟಿದ ನಟಿ ಅನುಷಾ ರೈ ಇದು ಹುಡುಗಿಯರ ಕೈನಂತೆ ಸಾಫ್ಟ್ ಆಗಿವೆ ಎಂದು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ಖಡಕ್ ವಿಲನ್ ಕೀರ್ತಿರಾಜ್ ಅವರ ಪುತ್ರ ಧರ್ಮ ಅವರು ನಿಜವಾಗಿಯೂ ಚಾಕೋಲೆಟ್ ಬಾಯ್ ಎಂದೇ ಹೇಳಬಹುದು. ನವಗ್ರಹ ಸಿನಿಮಾದಲ್ಲಿ ನಟಿಸಿ ಕನ್ನಡ ಸಿನಿಮಾದ ಭವಿಷ್ಯದ ನಾಯಕನೆಂದೇ ನಿರೀಕ್ಷೆ ಮೂಡಿಸಿದ್ದ ಧರ್ಮ ಅವರಿಗೆ ಸಿನಿಮಾ ಚಾನ್ಸ್ ನಿರೀಕ್ಷಿತ ಮಟ್ಟದಲ್ಲಿ ಸಿಗಲಿಲ್ಲ. ಇದೀಗ ಸಿನಿಮಾದಲ್ಲಿ ಹೊಸದಾಗಿ ಮತ್ತೊಮ್ಮೆ ಎರಡನೇ ಇನ್ನಿಂಗ್ಸ್ ಆರಂಭಿಸಲು ವೇದಿಕೆ ಹುಡುಕುತ್ತಿದ್ದ ಧರ್ಮ ಕೀರ್ತಿರಾಜ್ ಇದೀಗ ಬಿಗ್ ಬಾಸ್ ಸೀಸನ್ 11ರ ಮನೆಗೆ 6ನೇ ಕಂಟೆಸ್ಟೆಂಟ್ ಆಗಿ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತನ್ನ ವೈಯಕ್ತಿಕ ಚಾರ್ಮ್ ಅನ್ನು ತೋರಿಸುವ ಮೂಲಕ ತನ್ನೊಳಗೂ ಒಬ್ಬ ಸಿನಿಮಾಗೆ ಬೇಕಾಗಿರುವ ನಾಯಕ ಇದ್ದಾನೆ ಎಂಬುದನ್ನು ತೋರಿಸಲು ಸಿದ್ಧರಾಗಿದ್ದಾರೆ.
BBK11: ಬಿಗ್‌ಬಾಸ್‌ಗೆ ಕಾಲಿಟ್ಟ ಗಂಡಿನ ಸ್ಪರ್ಶವನ್ನೂ ಅರಿಯದ ಇಂಜಿನಿಯರ್ ಬ್ಯೂಟಿ ಅನುಷಾ ರೈ!
ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ವೇದಿಕೆಗೆ 5ನೇ ಸ್ಪರ್ಧಿಯಾಗಿ ಬಂದ ಅನುಷಾ ರೈ ಅವರ ಕಣ್ಣನನ್ನು ಕಟ್ಟಿ 6ನೇ ಸ್ಪರ್ಧಿಯಾಗಿ ಧರ್ಮ ಕೀರ್ತಿರಾಜ್ ಅವರನ್ನು ವೇದಿಕೆ ಮೇಲೆ ಕರೆಸುತ್ತಾರೆ. ಆಗ ಅನುಷಾ ಅವರಿಗೆ ಧರ್ಮನನ್ನು ಮುಟ್ಟಿ ನೋಡಿ ಯಾರೆಂದು ಗುರುತಿಸಲು ಹೇಳುತ್ತಾರೆ. ಆಗ ಧರ್ಮ ಅವರನ್ನು ಮುಟ್ಟಿದ ಅನುಷಾ ಇವರು ಹುಡುಗಿ ಆಗಿರಬೇಕು ಎಂದು ಹೇಳುತ್ತಾರೆ. ನಂತರ ಎತ್ತರವನ್ನು ಮುಟ್ಟಿ ನೋಡಿ, ಇವರು ಇಷ್ಟೊಂದು ಎತ್ತರವಾಗಿದ್ದಾರೆ ಎಂದರೆ ಹುಡುಗ ಇರಬೇಕು ಎಂದು ಹೇಳುತ್ತಾರೆ. ಆಗ ಅನುಷಾ ಅವರ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚಿ ತೋರಿಸಲಾಗುತ್ತದೆ.
ನವಗ್ರಹ ಸಿನಿಮಾದಲ್ಲಿ ಕಣ್ ಕಣ್ಣ ಸಲಿಗೆ ಹಾಡಿನಲ್ಲಿ ಮಿಂಚಿದ್ದ ಹಾಗೂ ನಟ ದರ್ಶನ್ ಅವರಿಂದ 'ಹೇ.. ಕ್ಯಾಡ್ಬರಿ' ಎಂದು ಕರೆಸಿಕೊಳ್ಳುತ್ತಿದ್ದ ಚಾಕೋಲೇಟ್ ಬಾಯ್ ಧರ್ಮ ಕೀರ್ತಿರಾಜ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ನಿಮಗೆ ಸಪೋರ್ಟ್ ಮಾಡುವುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಡಿ ಬಾಸ್ ಅಭಿಮಾನಿಗಳೆಲ್ಲರೂ ನಿಮ್ಮ ಜತೆಗಿರ್ತೀವಿ. ನಿಮ್ಮ ಸಿನಿಮಾ ಜರ್ನಿಗೆ ನಾವೆಲ್ಲರೂ ಸಪೋರ್ಟ್ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ, ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯ ಸ್ವರ್ಗಕ್ಕೆ ಕಾಲಿಟ್ಟ ಗೌತಮಿ ಜಾಧವ್; ಹೆಸರು ಕೇಳಿ ಮರ್ಯಾದೆ ಕಳೆದನಾ ಧನರಾಜ್!
ನೀನಿಲ್ಲದೇ ದಸರಾ ಮಾಡೋದ್ಹೇಗೆ ಎಂದು ಕೇಳಿದ ನೆಟ್ಟಿಗರು: ಧರ್ಮ ಕೀರ್ತಿರಾಜ್ ಅವರು ನವಗ್ರಹ ಸಿನಿಮಾದಲ್ಲಿ ಚಾಕೋಲೇಟ್ವ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ನಟ ದರ್ಶನ್ ಗ್ಯಾಂಗ್‌ನಲ್ಲಿದ್ದ 9 ಜನರು ದಸರಾದ ಅಂಬಾರಿ ಕದಿಯಲು ಮಾಡಿಕೊಂಡಿದ್ದ ಯೋಜನೆಗೆ ಅರಮನೆಯ ಸೆಕ್ಯೂರಿಟಿ ಮಗನಾಗಿದ್ದ ಈತನನ್ನು ಅಂಬಾರಿ ಕದಿಯಲು ಬಳಸಿಕೊಳ್ಳುತ್ತಾರೆ. ಇದನ್ನು ನೆನಪಿನಲ್ಲಿ ಇಟ್ಟುಕೊಂಡಿರುವ ವೀಕ್ಷಕರು ನೀನಿಲ್ಲದೇ ಅಂಬಾರಿ ಸಿಗಲ್ಲ, ಅಂಬಾರಿ ಇಲ್ಲದೇ ದಸರಾ ಹೇಗೆ ಕ್ಯಾಡ್ಬರಿ ಎಂದು ಕಾಲೆಳೆದಿದ್ದಾರೆ. ನೀನು ಅಂಬಾರಿ ಕೊಟ್ಟು ಹೋಗಿಬಿಡಪ್ಪಾ.. ಜೊತೆಗೆ ನಿನ್ನ ಗ್ಯಾಂಗ್ ಅವರು ಇಲ್ಲಿ ಕಾಯ್ತಿದ್ದಾರೆ ಎಂದು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.