35 ಫ್ರೇಮ್​ನಲ್ಲಿ ಕಾಶ್ಮೀರ ದರ್ಶನ ಮಾಡಿಸಿದ ಪುಟ್ಟಕ್ಕನ ಮಕ್ಕಳು ಸ್ನೇಹಾ; ವ್ಹಾರೆವ್ಹಾ ಎಂದ ಫ್ಯಾನ್ಸ್​

Published : Apr 13, 2024, 04:18 PM IST
35 ಫ್ರೇಮ್​ನಲ್ಲಿ ಕಾಶ್ಮೀರ ದರ್ಶನ ಮಾಡಿಸಿದ ಪುಟ್ಟಕ್ಕನ ಮಕ್ಕಳು ಸ್ನೇಹಾ; ವ್ಹಾರೆವ್ಹಾ ಎಂದ ಫ್ಯಾನ್ಸ್​

ಸಾರಾಂಶ

ಪುಟ್ಟಕ್ಕನ ಮಕ್ಕಳು ಸೀರಿಯಲ್​ ಸ್ನೇಹಾ ಅಲಿಯಾಸ್​ ಸಂಜನಾ ಅವರು 35 ಫ್ರೇಮ್​ನಲ್ಲಿ ಕಾಶ್ಮೀರ ದರ್ಶನ ಮಾಡಿಸಿದ್ದಾರೆ. ರೀಲ್ಸ್​ ಆಗಿದೆ ವೈರಲ್​...  

 ಸ್ನೇಹಾ ಎಂದಾಕ್ಷಣ ಎಲ್ಲರ ಕಣ್ಮುಂದೆ ಬರುವುದು ಪುಟ್ಟಕ್ಕನ ಮಕ್ಕಳು ಸೀರಿಯಲ್​ ನಟಿ. ಇಷ್ಟು ದಿನಗಳವರೆಗೆ ಈಕೆಯನ್ನು ಹಾಡಿ ಹೊಗಳುತ್ತಿದ್ದವರು ಯಾಕೋ ಈಕೆಯ ಮೇಲೆ ಸದ್ಯ ಕೋಪ ಮಾಡಿಕೊಂಡಂತೆ ಕಾಣಿಸುತ್ತಿದೆ. ಅಗತ್ಯಕ್ಕಿಂತ ಅತಿಯಾಗಿ ಆಡುತ್ತಾಳೆ ಎಂದು ಹೇಳುತ್ತಿದ್ದಾರೆ. ಅದೇನೇ ಇದ್ದರೂ ಇದು ಸೀರಿಯಲ್​ ಆಯ್ತು. ಈ ಸ್ನೇಹಾ ಸದ್ಯ ಕಾಶ್ಮೀರದಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಅಷ್ಟಕ್ಕೂ ಕಾಶ್ಮೀರಕ್ಕೆ ಹೋಗಿರುವುದು ಪುಟ್ಟಕ್ಕನ ಮಗಳು ಸ್ನೇಹಾ ಅಲ್ಲ, ಬದಲಿಗೆ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ! ಹೌದು. ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್​ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್​. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಕಂಠಿ ಪಾತ್ರಧಾರಿ  ಧನುಷ್ ಎನ್ ಎಸ್. ಧಾರಾವಾಹಿಯ ಈ ಕ್ಯೂಟ್​ ಜೋಡಿ ಅದೆಷ್ಟು ಫೇಮಸ್​ ಎಂದರೆ, ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಅಂತಿದ್ದಾರೆ ಫ್ಯಾನ್ಸ್​! 


 ಸಂಜನಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ಅವರು ಕಾಶ್ಮೀರದ ಕಣಿವೆಗೆ ಹೋಗಿ ಅಲ್ಲಿ ಸಕತ್​ ಸ್ಟೆಪ್​ ಹಾಕಿದ್ದಾರೆ. ನೀವು ಹೀಗೆ ಮಾಡುವುದಿದ್ದರೆ ಮೊದಲೇ ರೆಡಿಯಾಗಿ ಆಮೇಲೆ ರೀಲ್ಸ್​ ಮಾಡಿ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಇವರ ಈ ರೀಲ್ಸ್​ಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಕಾಶ್ಮೀರಿ ಆ್ಯಪ್ಪಲ್​ ಎಂದು ಕೆಲವು ನೆಟ್ಟಿಗರು ಹೇಳಿದ್ದರೆ, ಅಕ್ಕಾ ಪ್ಲೀಸ್​ ಕನ್ನಡದ ಹಾಡಿಗೆ ರೀಲ್ಸ್​ ಮಾಡಿ ಎಂದು ಕೆಲವರು ಹೇಳುತ್ತಿದ್ದಾರೆ. ನಿಮ್ಮ ಆ್ಯಕ್ಟಿಂಗ್​, ಡ್ಯಾನ್ಸ್​ ಎಲ್ಲವೂ ಸೂಪರ್​ ಎಂದು ಇನ್ನು ಹಲವರು ಕೊಂಡಾಡುತ್ತಿದ್ದಾರೆ. ಇನ್ನು 35 ಫ್ರೇಮ್​ನಲ್ಲಿ ಕಾಶ್ಮೀರ ತೋರಿಸುವುದಾಗಿ ಹೇಳಿರುವ ನಟಿ, 35 ವಿಧನಾದ ಡ್ರೆಸ್​ ತೊಟ್ಟು ರೀಲ್ಸ್​ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್​ ಸೂಪರ್​ ಎನ್ನುತ್ತಿದ್ದಾರೆ. 

ತಲೆ ಇರೋರು ಈ ರೀತಿ ಪಾತ್ರೆ ಇಡ್ತಾರಾ, ಅಡುಗೆ ಅಂದ್ರೆ ಸೊಸೆ ಮಾತ್ರನಾ? ಭಾಗ್ಯಲಕ್ಷ್ಮಿಗೆ ಸಕತ್​ ಕಮೆಂಟ್​!

ಅಷ್ಟಕ್ಕೂ ಕೆಲ ದಿನಗಳ ಹಿಂದೆ ಸಂಜನಾ, ಟ್ಲುಟ್​ ಪುಟ್​ ಗಯಾಗೆ ಹಾಡಿಗೆ  ಸಕತ್​ ಡ್ಯಾನ್ಸ್​ ಮಾಡಿದ್ದರು. ಸಂಜನಾ ಅವರ ನೃತ್ಯಕ್ಕೆ ಎಲ್ಲರೂ ಫಿದಾ ಆಗಿದ್ದರು.  ನೀವು ಸ್ನೇಹಾ ಆಗಿಯೂ ಸೂಪರ್​, ಸಂಜನಾ ಆಗಿಯೂ ಸೂಪರ್​ ಎಂದು ಹೊಗಳಿದ್ದರು.  ಬಂಗಾರಮ್ಮನ ಮನೆಯಲ್ಲಿಯೂ ನಿಮ್ದೇ ಹವಾ, ಸೋಷಿಯಲ್​ ಮೀಡಿಯಾದಲ್ಲಿಯೂ ನಿಮ್ದೇ ಹವಾ ಮೇಡಂ ಎಂದು ಹಲವರು ಕಮೆಂಟ್​ ಮೂಲಕ ಶ್ಲಾಘಿಸಿದ್ದರು.   ಈಗಲೂ ನೆಟ್ಟಿಗರು ಡ್ಯಾನ್ಸ್​ ಅನ್ನು ಹೊಗಳಿದ್ದಾರೆ. ಸ್ನೇಹಾ ಪಾತ್ರದಲ್ಲಿ ನಿಮ್ಮನ್ನು ನೋಡಿದಾಗ ರಿಯಲ್​ ಲೈಫ್​ನಲ್ಲಿ ನೀವು ಇಷ್ಟೊಂದು ಚೆನ್ನಾಗಿ ನೃತ್ಯ ಮಾಡುತ್ತೀರಿ ಎಂದು ಹೇಳುವುದೇ ಕಷ್ಟ ಎಂದಿದ್ದಾರೆ. ಇನ್ನು ಕೆಲವರು ಮೊದ್ಲು ಕಂಠಿ ಮೇಲೆ ಪೀರುತಿ ತೋರಿ ಮೇಡಂ ಎನ್ನುತ್ತಿದ್ದಾರೆ. ಪಾಪ ಕಂಠಿ ನಿಮಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಪ್ರೀತಿಯ ಬಗ್ಗೆ ಬಹಿರಂಗನೇ ಪಡಿಸಲಿಲ್ವೆ ಅಂತಿದ್ದಾರೆ. ವಸು ಬದ್ಲು ನೀವೇ ಪ್ರೆಗ್ನೆಂಟ್​ ಅಂತ ಹೇಳಿ ಆಗಿದೆ.  ಬೇಗ ನೀವು ಪ್ರೆಗ್ನೆಂಟ್​ ಆಗಿ ಅಂತಿದ್ದಾರೆ ಫ್ಯಾನ್ಸ್​. 

ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ ವಿಷ್ಯಕ್ಕೆ ಬರುವುದಾದರೆ, ಸ್ನೇಹಾ ಮತ್ತು ಕಂಠಿ ನಡುವೆ ಪ್ರೀತಿ ಶುರುವಾಗಿದೆ. ಕಂಠಿಗೆ ಮೊದಲಿನಿಂದಲೂ ಸ್ನೇಹಾಳ ಮೇಲೆ ಪ್ರೀತಿ. ಆದರೆ ಕೆಲವು ಕಾರಣಗಳಿಂದ ಕಂಠಿಯನ್ನು ಕಂಡರೆ ಸ್ನೇಹಾ ಉರವರ ಅನ್ನುತ್ತಿದ್ದಳು. ಇದೀಗ ಪತಿಯ ಮೇಲೆ ಪ್ರೀತಿ ಮೂಡಿದೆ. ಇಬ್ಬರ ಲವ್​ ಸ್ಟೋರಿ ಶುರುವಾಗಿದ್ದರೂ, ಬಂಗಾರಮ್ಮನಿಗೆ ಮಾತ್ರ ಇನ್ನೂ ಸ್ನೇಹನ ಮೇಲೆ ಕೋಪ. ಅದಕ್ಕೆ ತಕ್ಕಂತೆ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಹೇಗಾದರೂ ಮಾಡಿ ಅತ್ತೆ ಮನಸ್ಸನ್ನು ಗೆಲ್ಲಬೇಕು ಎಂದು ಸ್ನೇಹಾ ಪಣತೊಟ್ಟಿದ್ದಾಳೆ. 

ಬಾಲಿವುಡ್​ ಸ್ಟಾರ್​ ನಟರ ಇನ್ನೊಂದು ಮುಖ ಅನಾವರಣಗೊಳಿಸಿದ ನಟಿ ವಿದ್ಯಾ ಬಾಲನ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?