ಬಾವಿಯಿಂದ ತಣ್ಣೀರನ್ನು ಮೈಮೇಲೆ ಸುರಿದುಕೊಳ್ಳುವಾಗ ಅದು ಬಿಸಿನೀರಾಗಿ ಹೇಗೆ ಬದಲಾಗುತ್ತದೆ? ಶೂಟಿಂಗ್ನಲ್ಲಿ ನಡೆಯುವುದು ಏನು? ತೆರೆಮರೆ ಹಿಂದಿನ ಸ್ಟೋರಿ ಕೇಳಿ...
ಕಾಳಿ ಸಹನಾಗೆ ಎಲ್ಲರ ಎದುರು ಪ್ರೀತಿ ಹೇಳಿಕೊಂಡಿದ್ದಾನೆ. ಇದು ಸಹನಾಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಗಂಡ ಮೋಸ ಮಾಡಿದ ಎನ್ನುವ ಕಾರಣಕ್ಕೆ ಆತನಿಗೆ ಬೇರೆ ಮದುವೆ ಮಾಡಿಸಿ ತಾನು ದೂರ ಆಗಿರುವ ಸ್ವಾಭಿಮಾನಿ ಸಹನಾ ಈಗ ಮತ್ತೊಂದು ಮದುವೆಗೆ ಒಪ್ಪುವವಳಲ್ಲ. ಆದರೆ ಕಾಳಿ ಆಕೆಯನ್ನು ಮೊದಲಿನಿಂದಲೂ ಪ್ರೀತಿಸುತ್ತಲೇ ಬಂದವನು. ಆರಂಭದಲ್ಲಿ ಅಕ್ಕ ರಾಜಿಯ ಮಾತು ಕೇಳಿ ಗೂಂಡಾಗಿರಿ ಮಾಡುತ್ತಿದ್ದ ಕಾಳಿ, ಕೊನೆಗೆ ಬದಲಾಗಿ ಸಹನಾಳ ಪರವಾಗಿ ನಿಂತಿದ್ದಾನೆ. ಸಹನಾ ಮೇಲೆ ಕೊಲೆ ಆರೋಪ ಬಂದಾಗಲೂ ಕಾಳಿಯೇ ಆಕೆಗೆ ಸಹಾಯ ಮಾಡಿದವನು. ಆ ಬಳಿಕ ಮೆಸ್ ಶುರು ಮಾಡುವುದರದಿಂದ ಹಿಡಿದು ಎಲ್ಲದ್ದಕ್ಕೂ ಸಹಾಯ ಮಾಡಿದ್ದಾನೆ. ಆದ್ದರಿಂದ ಆತ ಒಳ್ಳೆ ಸ್ನೇಹಿತ ಎಂದಷ್ಟೇ ಸಹನಾ ಅಂದುಕೊಂಡಿದ್ದಾಳೆ. ಆದರೆ ಪಂಚಾಯಿತಿ ಎದುರು ತಾನು ಸಹನಾಳನ್ನು ಮದುವೆಯಾಗುವುದಾಗಿ ಕಾಳಿ ಹೇಳಿದಾಗ ಆಕೆ ಸಿಟ್ಟಿನಿಂದ ಬಾವಿಯಿಂದ ನೀರು ಸೇದು ಮೈಮೇಲೆ ಸುರಿದುಕೊಂಡಿದ್ದಾಳೆ.
ಇದು ಪುಟ್ಟಕ್ಕನ ಮಕ್ಕಳು ಸೀರಿಯಲ್ ಕಥೆ. ಹಾಗೆಂದು ಬೆಂಗಳೂರಿನ ಈ ಚಳಿಯಲ್ಲಿ ಶೂಟಿಂಗ್ಗಾಗಿ ಬಾವಿನಿಂದ ತಣ್ಣಗಿನ ನೀರು ಮೈಮೇಲೆ ಸುರಿದುಕೊಳ್ಳುವುದನ್ನು ನೋಡಿದರೆ ವೀಕ್ಷಕರಿಗೇ ಚಳಿ ಚಳಿ ಎನ್ನಿಸುವುದು ಉಂಟು. ಈ ದೃಶ್ಯ ಒಂದೇ ಅಲ್ಲ. ಸಾಮಾನ್ಯವಾಗಿ ಎಲ್ಲಾ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಬಾವಿಯಿಂದ ನೀರು ಸೇದಿ ಮೈಮೇಲೆ ಸುರಿದುಕೊಳ್ಳುವುದು ಇಲ್ಲವೇ ಮಳೆಯಲ್ಲಿ ನೆನೆಯುವುದು ಇವೆಲ್ಲಾ ದೃಶ್ಯಗಳಲ್ಲಿಯೂ ನಮಗೆ ಅವರು ನೇರವಾಗಿ ಅದೇ ನೀರನ್ನು ಸುರಿದುಕೊಂಡರು ಎಂದು ಎನ್ನಿಸುವುದು ಉಂಟು.
ಆವೇಶದಲ್ಲಿ ನಿಜವಾಗ್ಲೂ ಕೆನ್ನೆಗೆ ಹೊಡೆದೇ ಬಿಡೋದಾ ಪುಟ್ಟಕ್ಕನ ಮಗಳು ಸಹನಾ? ವಿಲನ್ ಕಲಿ ಸುಸ್ತೋ ಸುಸ್ತು!
ಆದರೆ ಅಸಲಿಗೆ ಹಾಗೆ ಇರುವುದಿಲ್ಲ. ಅಲ್ಲಿ ನೀರು ಬಿಸಿನೀರಾಗಿ ಬದಲಾಗಿರುತ್ತದೆ. ಬಾವಿಯಿಂದ ನೀರು ಸೇದಿ ಮೈಮೇಲೆ ನಾಯಕಿಯೋ, ನಾಯಕನೋ ಸುರಿದುಕೊಳ್ಳುವ ನಡುವಿನ ಅವಧಿಯಲ್ಲಿ ಆ ಕೊಡದಲ್ಲಿ ತಣ್ಣೀರಿನ ಬದಲು ಬಿಸಿನೀರು ಹಾಕಲಾಗಿರುತ್ತದೆ. ಆದರೆ ಅದನ್ನು ನಮಗೆ ತೋರಿಸುವುದಿಲ್ಲವಷ್ಟೇ. ಆಮೇಲೆ ಎಡಿಟ್ ಮಾಡಿ ವೀಕ್ಷಕರಿಗೆ ತೋರಿಸಲಾಗುತ್ತದೆ. ಅದರ ಶೂಟಿಂಗ್ ಹೇಗೆ ನಡೆಯುತ್ತದೆ ಎನ್ನುವುದನ್ನು ಡಿವಿಡ್ರೀಮ್ಸ್ ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ತೋರಿಸಲಾಗಿದೆ.
ಇಲ್ಲಿ ಸಹನಾ ಬಾವಿನಿಂದ ನೀರನ್ನು ಸೇದಿ ಮೈಮೇಲೆ ಸುರಿದುಕೊಳ್ಳುತ್ತಾಳೆ. ಆದರ ಆ ನಡುವಿನ ಅವಧಿಯಲ್ಲಿ, ಅಲ್ಲಿ ಬಿಸಿನೀರನ್ನು ತಂದು ಕೊಡಕ್ಕೆ ಹಾಕಲಾಗುತ್ತದೆ. ಈ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಬಾವಿಯ ತಣ್ಣೀರು ಮೈಮೇಲೆ ಬೀಳುವಾಗ ಹೇಗೆ ಬಿಸಿನೀರಾಗಿರುತ್ತದೆ ಎನ್ನುವುದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ. ಅದರ ವಿಡಿಯೊ ಲಿಂಕ್ ಈ ಕೆಳಗೆ ಇದೆ ನೋಡಿ...
ಪುಟ್ಟಕ್ಕನ ಮಗಳು ಸ್ನೇಹಾ ಮತ್ತೆ ವಾಪಸ್! ಸೀರಿಯಲ್ ತಂಗಿ ಸುಮಾ ಜೊತೆ ನೋಡಿ ಫ್ಯಾನ್ಸ್ ಫುಲ್ ಖುಷ್...