ಗಂಡ ಮತ್ತೊಂದು ಮದ್ವೆಗೆ ಸಿದ್ಧನಾಗಿದ್ರೆ ಇಲ್ಲಿ ರೀಲ್ಸ್​ ಮಾಡ್ತಿದ್ದೀರಾ? ನಟಿ ಸಂಜನಾ ಕಾಲೆಳೀತಿರೋ ನೆಟ್ಟಿಗರು

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಅರ್ಥಾತ್​ ಸಂಜನಾ ಬುರ್ಲಿ ಅವರು ರೀಲ್ಸ್​ ಮಾಡಿದ್ದು, ನೆಟ್ಟಿಗರು ತರ್ಲೆ ಕಮೆಂಟ್ ಮಾಡುತ್ತಿದ್ದಾರೆ. ಅವರು ಹೇಳ್ತಿರೋದೇನು?
 

Puttakana Makkalu fame Sneha urf Sanjana Burli shared reels Netizens react with linking to serial suc

ಸ್ನೇಹಾ ಎಂದರೆ ಪುಟ್ಟಕ್ಕನ ಮಕ್ಕಳು ನಟಿ ಸಂಜನಾ ಬುರ್ಲಿ ಎಲ್ಲರ ನೆನಪಿಗೇ ಬರುತ್ತಿದ್ದಾರೆ. ನಟಿ ಉನ್ನತ ವ್ಯಾಸಂಗದ ಕಾರಣ ಕೊಟ್ಟು ಸೀರಿಯಲ್​ನಿಂದ ಹೊರಕ್ಕೆ ಬಂದಿದ್ದಾರೆ. ಅವರು ಹೊರಕ್ಕೆ ಬರುವುದು ತಿಳಿದ ಕಾರಣ ಸ್ನೇಹಾ ಪಾತ್ರವನ್ನೇ ಸಾಯಿಸಲಾಗಿದೆ. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಿಂದ ಸೀರಿಯಲ್​ ಹಂತ ಹಂತವಾಗಿ ಟಿಆರ್​ಪಿ ಕಳೆದುಕೊಳ್ಳಲು ಶುರು ಮಾಡಿತ್ತು. ಸಿಕ್ಕಾಪಟ್ಟೆ ಓದಿರುವ ಸ್ನೇಹಾ ಹಾಗೂ ರೌಡಿಯಾಗಿರುವ ಕಂಠಿಯ ಲವ್​ಸ್ಟೋರಿ ವೀಕ್ಷಕರಿಗೆ ಸಕತ್​ ಇಷ್ಟವಾಗಿತ್ತು. ಒಂದು ಪಾತ್ರದಲ್ಲಿ ಒಬ್ಬರನ್ನೇ ಕೆಲ ವರ್ಷ ನೋಡಿದ ಬಳಿಕ, ಆ ಪಾತ್ರದಲ್ಲಿ ಬೇರೆಯವರನ್ನು ವೀಕ್ಷಕರು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂದು ಸ್ನೇಹಾ ಪಾತ್ರವನ್ನು ಸಾಯಿಸಲಾಗಿದೆ ಎಂದು ನಿರ್ದೇಶಕ ಆರೂರು ಜಗದೀಶ್​ ಹೇಳಿದರು. ಆದರೆ ಸ್ನೇಹಾ ಪಾತ್ರಕ್ಕೆ ಬೇರೆ ನಟಿಯನ್ನು ಕರೆತಂದು, ಅದೇ ಕಥೆಯನ್ನು ಮುಂದುವರೆಸಬಹುದಿತ್ತು ಎನ್ನುವುದು ವೀಕ್ಷಕರ ಅಭಿಮತ. 

ಅದೇನೇ ಇರಲಿ. ಸದ್ಯ ಪುಟ್ಟಕ್ಕನ ಮಕ್ಕಳು ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಕಂಠಿಗೆ ಇನ್ನೊಂದು ಮದುವೆ ಮಾಡುವ ಬಗ್ಗೆ ಬಂದು ಮುಟ್ಟಿದೆ. ಬಂಗಾರಮ್ಮ ಕಂಠಿಯ ಬಳಿ ಆಣೆ ಹಾಕಿಸಿಕೊಂಡಿದ್ದಾಳೆ. ಕಂಠಿ ತನ್ನ ಪತ್ನಿಯ ಹೃದಯ ಯಾರ ಬಳಿ ಇದೆ ಎಂಬ ಹುಡುಕಾಟದಲ್ಲಿ ಇದ್ದಾನೆ. ಆ ಹೃದಯ ಇರುವ ಇನ್ನೋರ್ವ ಸ್ನೇಹಾಳನ್ನು ಕಂಡರೆ ಉರಿಉರಿ ಎನ್ನುತ್ತಿದ್ದಾನೆ. ಅದು ಬೇಗ ತಿಳಿದು ಅವರಿಬ್ಬರನ್ನು ಮದುವೆ ಮಾಡಿ ಸೀರಿಯಲ್​ ಮುಗಿಸಿಬಿಡಿ ಎನ್ನುವುದು ವೀಕ್ಷಕರ ಮಾತು. 

Latest Videos

ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ RESTART ಮಾಡ್ತಿದ್ದೀನಿ ಎಂದು ಹಿಮಾಲಯ ಪರ್ವತವೇರಿದ ನಟಿ ಸಂಜನಾ ಬುರ್ಲಿ

ಇದರ ನಡುವೆಯೇ ಸಂಜನಾ ಬುರ್ಲಿ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ರೀಲ್ಸ್​ ಮಾಡಿದ್ದಾರೆ. ಸೀರಿಯಲ್​ ಮಾಡುವ ಸಮಯದಲ್ಲಿ ಸಾಕಷ್ಟು ರೀಲ್ಸ್ ಮಾಡುತ್ತಿದ್ದ ನಟಿ, ಸೀರಿಯಲ್​ ಬಿಟ್ಟ ಮೇಲೆ ಹೆಚ್ಚಾಗಿ ರೀಲ್ಸ್​ನಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಪುನಃ ಕಾಣಿಸಿಕೊಂಡಿದ್ದಾರೆ. ಸಂಜನಾ ಈಗ ಸ್ನೇಹಾ ಅಲ್ಲ. ಕೇವಲ ಸಂಜನಾ ಮಾತ್ರ. ಆದರೂ ಸೀರಿಯಲ್​ ವೀಕ್ಷಕರಿಗೆ ಇವರು ಇಂದಿಗೂ ಸ್ನೇಹಾನೇ. ಅದಕ್ಕಾಗಿಯೇ ನಟಿಯ ಕಾಲೆಳೆಯುತ್ತಿದ್ದಾರೆ. ಅತ್ತ ನಿನ್ನ ಗಂಡ ಕಂಠಿ ಬೇರೆ ಮದುವೆಗೆ ರೆಡಿಯಾಗಿದ್ರೆ ಇಲ್ಲಿ ರೀಲ್ಸ್​ ಮಾಡ್​ತಾ ಕೂತಿದ್ಯಾ? ಬೇಗ ಹೋಗು ಎನ್ನುತ್ತಿದ್ದಾರೆ. ಮತ್ತೆ ಕೆಲವರು ವಾಪಸ್​ ಸೀರಿಯಲ್​ಗೆ ಬನ್ನಿ ಎನ್ನುತ್ತಿದ್ದಾರೆ. 

ಇನ್ನು ಸಂಜನಾ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನ ಡಾ. ಅಂಬೇಡ್ಕರ್​ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ವಿಧ್ಯಾಭ್ಯಾಸ ಮುಗಿಸಿರುವ ಇವರು `ವಿಕೇಂಡ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ಶಿಕ್ಷಣ ಪಡೆಯುವ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ದೂರ ಆಗ್ತಿರೋದಾಗಿ ಇದಾಗಲೇ ನಟಿ ಹೇಳಿದ್ದಾರೆ.  ಸೀರಿಯಲ್ ನಿಂದ ಹೊರ ಬಂದ ಮೇಲೆ ನಟಿ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ರು. ಕೆಲವು ದಿನಗಳ ಹಿಂದೆ ದುಬೈನಲ್ಲಿ ಎಂಜಾಯ್ ಮಾಡ್ತಿದ್ರು, ಕೊನೆಗೆ ಹಿಮಾಲಯ ಪರ್ವತ ಟ್ರೆಕ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ರೀಲ್ಸ್​ ಮೂಲಕ ಕಾಣಿಸಿಕೊಂಡಿದ್ದಾರೆ. 

ಸ್ಕೈ ಡೈವಿಂಗ್ ರೋಚಕ ಅನುಭವ ಬಿಚ್ಚಿಟ್ಟ ಪುಟ್ಟಕ್ಕನ ಮಕ್ಕಳು ನಟಿ ಸಂಜನಾ ಬುರ್ಲಿ

click me!